ಸುದ್ದಿಮೂಲ ವಾರ್ತೆ
ರಾಯಚೂರು,ಜೂ.26:ರಾಜ್ಯದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ..ಹಳೆಯದಾದ ಆರ್ ಟಿಪಿಎಸ್ ಘಟಕಗಳ ನವೀಕರಣ ಮಾಡಲು ಹಂತಹಂತವಾಗಿ ನಿರ್ಧಾರ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ರಾಜ್ಯದ ಎಲ್ಲೂ ಲೋಡ್ ಶೆಡ್ಡಿಂಗ್ ಇಲ್ಲ. ಆದರೆ, ನಿರ್ವಹಣೆ ಮಾಡಲು ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ. ರಾಯಚೂರಿನ ಆರ್ ಟಿಪಿಎಸ್ ನ ಹಳೆಯದಾದ ಘಟಕಗಳ ನವೀಕರಣ ಮಾಡುವ ಬಗ್ಗೆ ಮಾಹಿತಿ ಪಡೆಯುವೆ ಎಂದರು.
ವೈಟಿಪಿಎಸ್ ಗೆ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ದಲ್ಲಿ ತಾರತಮ್ಯ ಪರಿಶೀಲಿಸುವೆ.
ವೈಟಿಪಿಎಸ್ ನಿರ್ವಹಣೆ ಅವಧಿ ಮುಗಿದಿದೆ ತಾತ್ಕಾಲಿಕವಾಗಿ ಅವರಿಗೆ ವಹಿಸಿದ್ದೇವೆ. ಶಾಸಕರ, ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ.
2 ಕೋಟಿ 14 ಲಕ್ಷ ಉಚಿತ ವಿದ್ಯುತ್ ಫಲಾನುಭವಿಗಳಿದ್ದು, ಈಗಾಗಲೇ 52 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಸರ್ವರ್ ಸಮಸ್ಯೆ ಇದ್ದರೂ ಅರ್ಜಿ ಸಲ್ಲಿಸಲು ಕೊನೆ ದಿನ ನಿಗದಿ ಮಾಡಿಲ್ಲ. ವಿದ್ಯುತ್ ಶುಲ್ಕ ಹೆಚ್ಚಳದ ಬಗ್ಗೆ ಬಿಲ್ ಪಾವತಿಸಲು ಗ್ರಾಹಕರಿಗೆ ಗಡವು ನೀಡಲಾಗುತ್ತದೆ. ವಿದ್ಯುತ್ ದರ ಹೆಚ್ಚಿಸಿದ ಬಿಜೆಪಿಯವರೆ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ವಿಪರ್ಯಾಸ ಎಂದರು.