ಸುದ್ದಿಮೂಲ ವಾರ್ತೆ
ಸಿರುಗುಪ್ಪ,ಅ:15: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಾರಂಭವಾಗಿರುವ ಮೈಸೂರು ದಸರಾದಲ್ಲಿ ಕವಿಗೋಷ್ಠಿಯು ಮೈಸೂರಿನ ಕಲಾಮಂದಿರದಲ್ಲಿ ದಿನಾಂಕ 17ನೇ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಆಯೋಜನೆಗೊಂಡಿದ.
ಈ ಹಾಸ್ಯ ಚುಟುಕು ಕವಿಗೋಷ್ಠಿಯಲ್ಲಿ ನಾಡಿನ ಕೆಲವೇ ಜನರಿಗೆ ಅವಕಾಶ ದೊರಕಿದ್ದು ಸಿರುಗುಪ್ಪ ನಗರದ ಖಾಸಗಿ ಶಾಲಾ ಶಿಕ್ಷಕ ಮತ್ತು ಹಾಸ್ಯಕವಿ ಜಿ ನರಸಿಂಹಮೂರ್ತಿ ಇವರಿಗೆ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶ ದೊರೆತಿದೆ. ತಮ್ಮದೇ ಶೈಲಿಯಲ್ಲಿ ಅನೇಕ ಕಡೆ ಯಶಸ್ವಿ ಹಾಸ್ಯ ಕಾರ್ಯಕ್ರಮಗಳನ್ನು ನೀಡಿ ಚಾಪು ಮೂಡಿಸಿರುವ ಜೆ ನರಸಿಂಹಮೂರ್ತಿ ಇವರಿಗೆ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಅವಕಾಶ ದೊರಕಿರುವುದು ಅವರ ಅಭಿಮಾನಿಗಳ ಸಂತಸ ಸಂಭ್ರಮಗಳಿಗೂ ಕಾರಣವಾಗಿದೆ.
ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಖ್ಯಾತ ಸಾಹಿತಿ ಬಸವರಾಜ ಸಾದರ ಅಧ್ಯಕ್ಷತೆ, ಮತ್ತು ಖ್ಯಾತ ಕವಿ ಕೆ. ಸಿ. ಶಿವಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಗೊಂಡಿದೆ.
ಹಾಸ್ಯಕವಿ ಸಿರುಗುಪ್ಪ ಜೆ ನರಸಿಂಹಮೂರ್ತಿ ಉತ್ತಮ ಹಾಸ್ಯ ಪ್ರದರ್ಶನ ನೀಡಿ ಬರಲೆಂದು ಎಲ್ಲರ ಹಾರೈಕೆ ಮತ್ತು ಆಶಯವಾಗಿದೆ.