ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ರಾಯಚೂರು ಜಿಲ್ಲೆೆಯ ಎಲ್ಲ ತಾಲೂಕಿನಲ್ಲೂ ಬಂಜಾರ ಸಮುದಾಯ ಸಂಘಟಿಸಲು ಕಾರ್ಯಪಡೆ ರಚಿಸುವ ಉದ್ದೇಶ ಹೊಂದಿದ್ದೇವೆ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ವಿಜಯಕುಮಾರ ಜಾಧವ್ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಾಜ್ಯದ 3390 ತಾಂಡಾಗಳಲ್ಲಿ ಸಂಘದಿಂದ ಜಾಗೃತಿ ಮೂಡಿಸುವ ಜೊತೆಗೆ ತಾಂಡಾ ಅಭಿವೃದ್ದಿ ನಿಗಮದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡು ಸದ್ಬಳಕೆಗೆ ಮನವಿ ಮಾಡುತ್ತೇವೆ ಎಂದರು.
ಎಲ್ಲ ತಾಲೂಕಿನಲ್ಲೂ ಸಮಾಜದ ಜಾಗೃತಿಗಾಗಿ ಕಾರ್ಯಪಡೆ ರಚಿಸಿ ಔದ್ಯೋೋಗಿಕ, ಸಾಮಾಜಿಕ ಹಾಗೂ ಆರ್ಥಿಕತೆಯ ಸದೃಢತೆಗೆ ಕೆಲಸ ಮಾಡುತ್ತೇವೆ. ಸಮಾಜದಲ್ಲಿ ಇತರ ಸಂಘಗಳ ಕಾರ್ಯಚಟುವಟಿಕೆ ಬಗ್ಗೆೆ ಮಾತನಾಡುವುದಿಲ್ಲಘಿ. ಆದರೆ, ನಮ್ಮ ಸಂಘದಿಂದ ಉತ್ತಮ ಕೆಲಸ ಮಾಡುತ್ತೇವೆ ಎಂದ ಅವರು, ನೊಂದವರಿಗೆ ಧನಿಯಾಗುವುದಾಗಿ ಹೇಳಿದ ಅವರು, ಸಂಘದ ಜಿಲ್ಲಾಾಧ್ಯಕ್ಷರನ್ನಾಾಗಿ ಅಮರೇಶ ರಾಠೋಡ್ ಅವರ ನೇಮಕ ಮಾಡಿದ್ದು ಕೃಷ್ಣಪ್ಪ ಪವಾರ ಗೌರವಾಧ್ಯಕ್ಷರಾಗಿ, ಸೀತಾ ರಾಮನಾಯಕ ಕಾರ್ಯಾಧ್ಯಕ್ಷರಾಗಿ, ಎನ್.ಶಿವಣ್ಣ ಪವಾರ್ ಪ್ರಧಾನ ಕಾರ್ಯದರ್ಶಿಯಾಗಿ 25 ಜನರ ಸಮಿತಿ ಪೂರ್ಣ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ಸಂಘದ ಜಿಲ್ಲಾಾಧ್ಯಕ್ಷ ಅಮರೇಶ ರಾಠೋಡ. ರಾಜ್ಯ ಉಪಾಧ್ಯಕ್ಷ ಗೋವಿಂದರಾಜ ನಾಯ್ಕಘಿ, ಚಂದ್ರಶೇಖರ ಜಾಧವ, ಜ್ಯೋೋತಿ, ಕೃಷ್ಣಪ್ಪ ಇತರರಿದ್ದರು.
ಬಂಜಾರ ಸಮುದಾಯ ಸಂಘಟಿಸಲು ಶೀಘ್ರ ಕಾರ್ಯಪಡೆ ರಚನೆ -ಜಾಧವ್

