ಸುದ್ದಿಮೂಲ ವಾರ್ತೆ
ಜೇವರ್ಗಿ: ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಜೇರಟಗಿ ಚೆಕ್ ಪೋಸ್ಟ್ ನಲ್ಲಿ 4.50 ಲಕ್ಷ ರೂಪಾಯಿ ಹಣ ಹಾಗೂ ಬುಲೆರೋ ವಾಹನ ಸಮೇತ ರಾತ್ರಿ 8:30ಕ್ಕೆ ನೆಲೋಗಿ ಪೊಲೀಸ್ ಠಾಣೆ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ನೆಲೋಗಿ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಅಮೋಜ ಹಾಗೂ ಗುರುಬಸಪ್ಪ ಎ.ಎಸ್.ಐ ರವರು ಜೇರಟಗಿ ಚೆಕ್ ಪೋಸ್ಟಿನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಂಡಿದ್ದು.
ಹಣ ಮತ್ತು ಬುಲೆರೋ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ ತನಿಖೆ ನಡೆದಿದೆ ಎಂದು ಪಿಎಸ್ಐ ಅಮೋಜ ತಿಳಿಸಿದರು.