ಸುದ್ದಿಮೂಲ ವಾರ್ತೆ ಕೊಪ್ಪಳ, ಜ.10:
ನಾಳೆ ರವಿವಾರ ಶಾಸಕ ಜನಾರ್ದನರೆಡ್ಡಿಿ ಜನ್ಮದಿನ ಹಿನ್ನೆೆಲೆಯಲ್ಲಿ ಇಂದು ಶನಿವಾರ ಅವರ ಪತ್ನಿಿ ಅರುಣಾ ಲಕ್ಷ್ಮಿಿ ಆಂಜನೇಯ ದರ್ಶನ ಪಡೆದರು.
ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಿಯಲ್ಲಿ 575 ಮೆಟ್ಟಲುಗಳನ್ನು ಏರಿದ ಅರುಣಾ ಲಕ್ಷ್ಮಿಿ ಜನಾರ್ದನರಡ್ಡಿಿಗೆ ಶುಭವಾಗಲಿ ಎಂದು ಹರಕೆ ಸಲ್ಲಿಸಿದರು. ಇದೇ ವಾರದಲ್ಲಿ ಎರಡನೆಯ ಬಾರಿ ಅವರು ಅಂಜನೇಯನ ದರ್ಶನ ಪಡೆದಿದ್ದಾಾರೆ.
ದರ್ಶನ ಬಳಿಕ ಅವರು ಬಳ್ಳಾಾರಿಯಲ್ಲಿ ನಡೆದ ದುರ್ಘಟನೆ ನಡೆದು 10 ದಿನ ಕಳೆದ್ರೂ ಇನ್ನೂ ಘಟನೆಯಿಂದ ಹೊರಬಂದಿಲ್ಲ. ಘಟನೆ ನಡೆದಾಗ ನಾನು ಮತ್ತು ನನ್ನ ಮಗ ಮನೆಯಲ್ಲಿ ಇದ್ವೀ, ಭರತ್ ರೆಡ್ಡಿಿ ಗೂಂಡಾಗಳು, ನಮ್ಮ ಮನೆ ಮೇಲೆ ದಾಳಿ ಮಾಡಿದ್ರು. ನಮ್ಮ ಪತಿ ಮನೆ ಮೇಲೆ ದಾಳಿ ಮಾಡುವ ಇಂತಹ ದುಸ್ಸಾಾಹಾಸಕ್ಕೆೆ ಭರತ್ ರೆಡ್ಡಿಿ ಕೈ ಹಾಕಿದ್ರು ಎಂದು ಹೇಳಿದರು.
ಭರತ್ ರೆಡ್ಡಿಿ ಪರವಾಗಿ ನಾನು ನಿಲ್ಲುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ ಹೇಳಿರುವ ಮಾತು ಆ ಘಟನೆಯಿಂದ ಹೊರ ಬರೋಕೆ ಆಗ್ತಾಾ ಇಲ್ಲ.ನನ್ನ ಪತಿಗೆ ಹಾಗೂ ನನ್ನ ಜನತೆಗೆ ಏನು ಆಗಬಾರದು. ಅದಕ್ಕೆೆ ನಾನು ಆಂಜನೇಯ ದರ್ಶನಕ್ಕೆೆ ಬಂದಿದ್ದೀನಿ ಎಂದ ಅರುಣಾ ಲಕ್ಷ್ಮಿಿ ಎಂದರು.
ಬಳ್ಳಾಾರಿ ಘಟನೆ ಬಳಿಕ ರೆಡ್ಡಿಿ ಬ್ರದರ್ಸ್ ಒಂದಾಗಿದ್ದಾಾರೆ ಎಂಬ ವರದಿ ಬರುತ್ತದೆ ಆದರೆ ನಾವು ಮೊದಲಿನಿಂದಲೂ ನಾವು ಒಂದಾಗಿದ್ದೇವೆ. ಮುಂದೆಯೂ ಒಂದಾಗಿರ್ತೀವಿ ಎಂದರು,
ಘಟನೆ ಬಗ್ಗೆೆ ಉನ್ನತ ತನಿಖೆ ಆಗಬೇಕು. ಈ ಸರ್ಕಾರದಿಂದ ಉತ್ತಮ ತನಿಖೆ ಆಗೋದಿಲ್ಲ. ಬೇರೆ ತನಿಖಾ ಸಂಸ್ಥೆೆಯಿಂದ ತನಿಖೆ ಆಗಬೇಕು ಎಂದು ಒತ್ತಾಾಯಿಸಿದರು.
ಇಂದು ಜನಾರ್ದನರೆಡ್ಡಿ ಜನ್ಮ ದಿನ, ಹನುಮನ ದರ್ಶನ ಪಡೆದ ಪತ್ನಿ

