ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೨: ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕೆಆರ್ ಪಿಪಿ ಅಂಬ್ಯುಲೆನ್ಸ್ ನ್ನು ವಶಕ್ಕೆ ಪಡೆದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ.
ಕೆಆರ್ ಪಿ ಪಕ್ಷದಿಂದ ಸಾರ್ವಜನಿಕರಿಗಾಗಿ ಅಂಬ್ಯಲೆನ್ಸ್ ಓಡಿಸುತ್ತಿದ್ದರು. ಆದರೆ ಅದರಲ್ಲಿ ಗಂಗಾವತಿ ಅಭ್ಯರ್ಥಿ ಜನಾರ್ಧನರಡ್ಡಿ, ಬಳ್ಳಾರಿ ಅಭ್ಯರ್ಥಿ ಅರುಣಾ ಲಕ್ಷ್ಮಿ ಹಾಗು ಕನಕಗಿರಿ ಅಭ್ಯರ್ಥಿ ಡಾ ಚಾರುಲ್ ಭಾವಚಿತ್ರವಿದೆ, ನೀತಿ ಸಂಹಿತೆ ಸಮಯದಲ್ಲಿ ಮುಖಂಡರ ಭಾವಚಿತ್ರ ಬಳಸದಂತೆ ನಿಯಮವಿರುವ ಹಿನ್ನೆಲೆಯಲ್ಲೆ ಕನಕಗಿರಿ ಪೊಲೀಸರು ಅಂಬ್ಯುಲೆನ್ಸ್ ವಶಕ್ಕೆ ಪಡೆದ ಘಟನೆ ನಡೆದಿದೆ.