ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.10: ತಾಲ್ಲೂಕಿನ ಜಂಗಮಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಕಾಂಗ್ರೆಸ್ ತೊರೆದು ಬಿ.ಎನ್.ರವಿ ಕುಮಾರ್ ನಾಯಕತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ಇಷ್ಟು ವರ್ಷಗಳಿಂದ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಯನ್ನು ಗೆಲ್ಲಿಸಿರುವ ಇತಿಹಾಸ ಇಲ್ಲ. ಸುಮಾರು 40 ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ನಡುವೆ ತೀವ್ರ ಪೈಪೋಟಿ ನಡೆದಿದ್ದು ಈಗ ಕಾಂಗ್ರೆಸ್ ನಲ್ಲಿ ಹೊಸ ಅಭ್ಯರ್ಥಿ ಕಣಕ್ಕಿಳಿಯುತ್ತಿರುವುದು ಬೇಸರ ತಂದಿದೆ. ಹೊಸ ಅಭ್ಯರ್ಥಿಗಳು ಯಾರು ಬಂದರೂ ಚುನಾವಣೆಯ ಸಂದರ್ಭದಲ್ಲಷ್ಟೇ ಹಳ್ಳಿಗಳ ಕಡೆ ಮುಖ ಮಾಡುತ್ತಾರೆ. ಕೇವಲ ಮತಗಳಿಗಾಗಿ ಕ್ಷೇತ್ರಕ್ಕೆ ಸಮರ್ಥ ಸ್ಥಳೀಯ ನಾಯಕರ ಕೊರತೆ ಹಾಗೂ ಪ್ರತಿ ಚುನಾವಣೆಗೂ ಅಭ್ಯರ್ಥಿ ಬದಲಾವಣೆ ಮಾಡುವುದರಿಂದ ಕಾರ್ಯಕರ್ತರ ಕಷ್ಟಗಳಿಗೆ ಜೊತೆ ನಿಲ್ಲುವ ನಾಯಕ ಇಲ್ಲದಂತಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಂಗಮಕೋಟೆ ಪಂಚಾಯತಿಯ ಜೆಡಿಎಸ್ ಮುಖಂಡರಾದ ಜೆ.ಎಂ ವೆಂಕಟೇಶ್ ದೇವರಾಜ್, ನಾರಾಯಣಸ್ವಾಮಿ ಮೇಸ್ತ್ರಿ, ಮೆಡಿಕಲ್ ಮಂಜಣ್ಣ, ನಾಗರಾಜ್, ಗುಂಡಣ್ಣ ಭಾಗವಹಿಸಿದ್ದರು.