ಸುದ್ದಿಮೂಲ ವಾರ್ತೆ ಬೀದರ್, ೆ.02:
ಬುಧವಾರ ನಗರದ ಅಂಬೇಡ್ಕರ್ ವೃತ್ತದಿಂದ ಜನವಾಡ ರಸ್ತೆೆಯಲ್ಲಿರುವ ಸಹಾಯಕ ಆಯುಕ್ತರ ಕಚೇರಿ ವರೆಗೆ ರಾಜ್ಯದಲ್ಲಿ ಆರೋಗ್ಯ ಹಕ್ಕಿಿನ ಕಾಯ್ದೆೆ ಜಾರಿಗೆ ಆಗ್ರಹಿಸಿ ಜಾಥಾ ಹಮ್ಮಿಿಕೊಳ್ಳಲಾಗಿದೆ ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಾಗಿ ಚಳುವಳಿಯ ಮುಖ್ಯಸ್ಥ ಭೀಮಾ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಿಕಾ ಭವನದಲ್ಲಿ ಪತ್ರಿಿಕಾಗೋಷ್ಟಿಿ ಉದ್ದೇಶಿಸಿ ಮಾತನಾಡಿರುವ ಅವರು, ೆ.2ರಿಂದ ಈ ತಿಂಗಳ 17ರ ವರೆಗೆ ರಾಜ್ಯಾಾದ್ಯಂತ ಜಾಥಾ ಹಮ್ಮಿಿಕೊಳ್ಳಲಾಗಿದ್ದು, ಬೀದರ್ನಲ್ಲಿ ೆ.4ರಂದು ಹಮ್ಮಿಿಕೊಳ್ಳಲಾಗಿದೆ ಎಂದರು.
ಲಿಅಗತ್ವ ಬದಲಾವಣೆಗಾಗಿ ಸುಮಾರು 5ರಿಂದ 6 ಲಕ್ಷ ವರೆಗೆ ಖರ್ಚು ಬರಲಿದ್ದು, ಸರ್ಕಾರವೇ ಈ ವೆಚ್ಚ ಭರಿಸಿ ನಮಗೆ ನ್ಯಾಾಯ ಒದಗಿಸಬೇಕು. ನಮ್ಮ ಈ ಜಾಥಾಗೆ ಹಲವಾರು ಸಂಘಟನೆಗಳು ಕೈ ಜೋಡಿಸಿದ್ದಕ್ಕೆೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಭೀಮಾ ಹೇಳಿದರು.
ಸಂಘಟಕ ಮಹೇಶ ಗೋರನಾಳಕರ್ ಮಾತನಾಡಿ, ವ್ಯಕ್ತಿಿಯ ಘನತೆ ಹಾಗೂ ಗೌರವ ಎತ್ತಿಿ ಹಿಡಿಯುವ ಕೆಲಸ ಸಂವಿಧಾನ ಮಾಡುತ್ತಿಿದೆ. ಅದರ ಆಶಯದಂತೆ ಲಿಂಗತ್ವ ಅಲ್ಪಸಂಖ್ಯಾಾತರಿಗಾಗಿ ಪ್ರತ್ಯೇಕ ನಿಗಮ ಸ್ಥಾಾಪಿಸಿ ಅವರ ಬೇಕು, ಬೇಡಿಕೆಗಳನ್ನು ಸರ್ಕಾರ ಪ್ರಾಾಮಾಣಿಕ ರೀತಿಯಲ್ಲಿ ಪುರೈಸಬೇಕೆಂದು ಹೇಳಿದರು.
ಓಂಪ್ರಕಾಶ ರೊಟ್ಟೆೆ ಮಾತನಾಡಿ, ಎಲ್ಲ ಆಸ್ಪತ್ರೆೆಗಳಲ್ಲಿ ಬಡ ರೋಗಿಗಳಿಗೆ ಔಷಧ ಪೂರೈಕೆಯಾಗಬೇಕು. ಹೊರಗಡೆ ಚೀಟಿ ಬರೆದು ಕೊಡದೇ ಸರ್ಕರವೇ ಅದನ್ನು ಪೂರೈಕೆ ಮಾಡಬೇಕು. ಸಾರ್ವತ್ರಿಿಕವಾಗಿರುವ ಈ ಜಾಥಾವನ್ನು ಎಲ್ಲರು ಸೇರಿ ಯಶಸ್ವಿಿಗೊಳಿಸಬೇಕೆಂದು ಮನವಿ ಮಾಡಿದರು. ಜಗದೀಶ್ವರ ಬಿರಾದಾರ ಮಾತನಾಡಿದರು.

