ಸುದ್ದಿಮೂಲ ವಾರ್ತೆ
ಮೈಸೂರು, ಜು.18 : ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರ 104ನೇ ಜನ್ಮ ಜಯಂತಿಯನ್ನು ಮಂಗಳವಾರ ನಗರದಲ್ಲಿ ಆಚರಿಸಲಾಯಿತು.
ಹಿರಿಯ ಸಮಾಜಸೇವಕ ಡಾ.ಕೆ ರಘುರಾಮ್ ವಾಜಪೇಯಿ ಅವರು ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಯದುವಂಶದ ಕೊನೆಯ ಅರಸರಾಗಿದ್ದ ಜಯ ಚಾಮರಾಜೇಂದ್ರ ಒಡೆಯರ್ ಅವರು ಅತ್ಯಂತ ಸಂಭಾವಿತ ಪ್ರಜಾವಾತ್ಸಲ್ಯ ಪ್ರಜಾ ಸೂಕ್ಷ್ಮಗಳನ್ನು ಅರಿತ ಮಹಾರಾಜರಾಗಿದ್ದರು. ಕಲೆ, ಸಂಸ್ಕೃತಿ, ಶಿಕ್ಷಣ ಪ್ರೇಮಿಗಳಾಗಿದ್ದರು. ನಾಡಿನ ಅಭಿವೃದ್ದಿಗೆ ಸಂಕಲ್ಪ ತೊಟ್ಟಿದ್ದರು ಎಂದರು.
ಡಾ. ವೈ ಡಿ ರಾಜಣ್ಣ ಮಾತನಾಡಿ, ಗ್ರಾಮೀಣ ಬದುಕಿನ ಜನಜೀವನ ಹಸನಾಗಬೇಕೆಂಬ ಹಂಬಲವೊಂದಿದ್ದ ಒಡೆಯರ್ ರವರು ಸ್ವಾತಂತ್ರ್ಯ ಪೂರ್ವದಲ್ಲಿ ಪಂಚವಾರ್ಷಿಕ ಯೋಜನೆಯ ಕಲ್ಪನೆಯ ಮೂಲಕ ಸಂಸ್ಥಾನದ ಅಭಿವೃದ್ಧಿಗೆ ಸಂಕಲ್ಪ ತೊಟ್ಟರು ಸ್ವತಹ ಸಂಗೀತ ಪ್ರೇಮಿಗಳಾಗಿದ್ದ ಅವರು ಆಸ್ಥಾನದಲ್ಲಿ ಸಾಹಿತ್ಯ ಸಂಗೀತ ಕ್ಷೇತ್ರದ ವಿದ್ವಾಂಸರಿಗೆ ಆಶ್ರಯದಾತರಾಗಿದ್ದರು ಆ ಮೂಲಕ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಸಾಂಸ್ಕೃತಿಕ ವ್ಯಕ್ತಿತ್ವದ ಅಭಿವೃದ್ಧಿಯ ರೂವಾರಿಗಳು ಎಂದು ಹೇಳಿದರು.
ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಬೆಟ್ಟೇಗೌಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮುಡಾ ಮಾಜಿ ಸದಸ್ಯರಾದ ಲಕ್ಷ್ಷೀದೇವಿ .ಕೆ, ಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮಹಾಸಭಾ ಪದಾಧಿಕಾರಿಗಳಾದ ಚಂದ್ರಶೇಖರ್.ಕೆ ಬಿ ಲಿಂಗರಾಜು, ಯುವ ಮುಖಂಡ ಅಜಯ್ ಶಾಸ್ತ್ರೀ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ. ರಾಮಕೃಷ್ಣ, ಮಾ ವೆಂಕಟೇಶ್ ಇದ್ದರು.