ಸುದ್ದಿಮೂಲ ವಾರ್ತೆ ಮಾನ್ವಿ, ಜ.03:
ಶಿಲ್ಪ ಕಲೆಗಳಲ್ಲಿ ಜೀವ ತುಂಬುತ್ತಿಿದ್ದ ಜಕಣಾಚಾರಿಯ ಅದ್ಭುತ ಕಲೆಯನ್ನು ಶಿಲ್ಪ ಕಲೆಗಳ ನೆಲೆಬೀಡಾಗಿರುವ ಬೇಲೂರು ಹಾಗೂ ಹಳೆ ಬೀಡುಗಳಲ್ಲಿ ಇಂದಿಗೂ ಕಾಣಬಹುದಾಗಿದ್ದು ಅಮರಶಿಲ್ಪಿಿ ಜಕಣಾಚಾರಿ ಕಲೆ ಅಜರಾಮರವಾಗಿದೆ ಎಂದು ತಹಸೀಲ್ದಾಾರ್ ಭೀಮರಾಯ ಬಿ.ರಾಮಸಮುದ್ರ ಹೇಳಿದರು.
ಗುರುವಾರ ಪಟ್ಟಣದ ತಹಸೀಲ್ ಕಚೇರಿ ಸಭಾಂಗಣದಲ್ಲಿ ತಾಲೂಕ ಆಡಳಿತ ಹಾಗೂ ವಿಶ್ವಕರ್ಮ ಸಮುದಾಯದ ವತಿಯಿಂದ ಹಮ್ಮಿಿಕೊಂಡಿದ್ದ ಅಮರಶಿಲ್ಪಿಿ ಜಕಣಾಚಾರಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮುದಾಯದವರು ತಮ್ಮ ಪಂಚ ಕಲೆಗಳಿಂದ ರೈತರಿಗೆ ಅಗತ್ಯವಾದ ಸಲಕರಣೆಗಳನ್ನು ಹಾಗೂ ಸುಂದರವಾದ ಕೆತ್ತನೆಗಳ ಮೂರ್ತಿಗಳನ್ನು ನೀಡುತ್ತಾಾ ಬಂದಿದ್ದಾರೆ. ಅವರು ಪಾರಂಪರಿಕವಾದ ಕಲೆಯ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ಸಾಧಕರಾದ ಜಿಲ್ಲಾ ಯುವ ಘಟಕ ಅಧ್ಯಕ್ಷ ವಿರೇಶ ಆಚಾರ ಚಾಗಿ, ದೇವರಾಜ ಆಚಾರ ಶಿಲ್ಪಿಿ ಸಂಗಾಪುರ, ಕಾಳಪ್ಪಚಾರ್ ಬಡಿಗೇರ ಮಾನ್ವಿಿ, ಅಯ್ಯಪ್ಪ ವಿಶ್ವಕರ್ಮ, ಶಿವಪ್ಪಚಾರ್ ವಿಶ್ವಕರ್ಮ, ಜಿ.ಸಿ, ಅಂಬಣ್ಣಾಾಚಾರ್ ಇವರನ್ನು ತಾಲೂಕಾ ಆಡಳಿತ ವತಿಯಿಂದ ಸನ್ಮಾಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾಾರ್ ಅಬ್ದುಲ್ ವಾಹಿದ್, ಹಿರಿಯ ವಕೀಲ ಗುಮ್ಮಾಾ ಬಸವರಾಜ, ವಿಶ್ವಕರ್ಮ ಸಮುದಾಯದ ಮುಖಂಡರಾದ ಮನೋಹರ್ ವಿಶ್ವಕರ್ಮ ವಕೀಲ, ಮೋಹನಾಚಾರಿ, ವೀರೇಶಚಾರಿ, ಮೌನೇಶಚಾರಿ ಹಾಲ್ವಿಿ ಸತೀಶ ಆಚಾರಿ, ತೆರಿಗೆ ಸಲಹೆಗಾರ ಷಣ್ಮುಖಚಾರಿ ಚೀಕಲಪರ್ವಿ, ಮಹೇಶಚಾರಿ, ಗವಿಯಪ್ಪಾಾಚಾರಿ, ಶ್ರೀಶೈಲ ಮಾಸ್ಟರ್, ಪಾಂಡುರಂಗ ವಿಶ್ವಕರ್ಮ, ಧನಂಜಯ ಆಚಾರಿ, ವೇಂಕಟೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದ್ದರು.
ಮಾನ್ವಿಯಲ್ಲಿ ಜಯಂತಿ ಆಚರಣೆ ಅಮರಶಿಲ್ಪಿ ಜಕಣಾಚಾರಿ ಕಲೆ ಅಜರಾಮರ – ಭೀಮರಾಯ ರಾಮಸಮುದ್ರ

