ಸುದ್ದಿಮೂಲ ವಾರ್ತೆ
ರಾಯಚೂರು, ಏ.08-
ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಸಂಭಾಷಣೆಯಲ್ಲಿ ಹಿಂದೂ ಧರ್ಮ ಕ್ಕೆ ಅಪಮಾನ ಮಾಡಿದ್ದು ಅವರ ವಿರುದ್ಧ ದೂರು ದಾಖಲಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ತಿಳಿಸಿದ್ರು.
ಸಂಘಟನೆಯ ಓರ್ವ ವ್ಯಕ್ತಿ ಜೊತೆ ಶಿವರಾಜ ಪಾಟೀಲರು ಮಾತನಾಡುವಾಗ ನಾನೇ ದೇವರು ನನ್ನ ಕಾಲಿಗೆ ನಮಸ್ಕಾರ ಮಾಡ ಬೇಕು ಎಂದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಲ್ಲದೆ ಓರ್ವ ಪ್ರಧಾನಿಗೆ ನಿಂದಿಸಿದ್ದರೂ ಹಿಂದು ಪರ ಹೋರಾಟಗಾರರು, ಬಿಜಪಿಗರ ಸ್ವಾಭಿಮಾನ ಎಲ್ಲಿದೆ.
ನಟ ಚೇತನ ಸಾಮಾಜಿಕ ಜಾಲತಾಣದಲ್ಲಿ ಹಿಂದು ಧರ್ಮಕ್ಕೆ ಅಪಮಾನ ಮಾಡಿದ್ದಾಗಿ ಪ್ರಕರಣ ದಾಖಲಿಸಲಾಗಿತ್ತು. ಈಗ ಶಿವರಾಜ ಪಾಟೀಲರು ಅಂತದ್ದೆ ಅಪಮಾನ ಮಾಡಿದ್ದಾರೆ.
ಹೀಗಾಗಿ,ನಮ್ಮ ಪಕ್ಷದ ಎಸ್ ಸಿ ಘಟಕದ ಅಧ್ಯಕ್ಷ ವಿಶ್ವನಾಥ ಪಟ್ಟಿ ಅವರ ಮೂಲಕ ಪಶ್ಚಿಮ ಠಾಣೆಯಲ್ಲಿ ಹಿಂದು ಧರ್ಮಕ್ಕೆ ಆದ ಅಪಮಾನದ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ವಿರೂಪಾಕ್ಷಿ ತಿಳಿಸಿದ್ರು.