ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ಮುಂಬರುವ ಜಿಲ್ಲಾಾ ,ತಾಲೂಕು ಹಾಗೂ ಸ್ಥಳೀಯ ಸಂಸ್ತೆೆಗಳ ಚುನಾವಣೆಗೆ ಕಾರ್ಯಕರ್ತರ ತಯಾರು ಮಾಡಲು ಹಾಗೂ ಮತದಾರರ ಪಟ್ಟಿಿ ಸಮಗ್ರ ಪರಿಷ್ಕರಣೆ ಕುರಿತು ಜ.11ರಂದು ದೇವದುರ್ಗದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಾಧ್ಯಕ್ಷ ಎಂ.ವಿರೂಪಾಕ್ಷಿಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಸ್ಥಳೀಯ ಚುನಾವಣೆಗಳಿಗೆ ಬಿಜೆಪಿ ಮೈತ್ರಿಿ ಇಲ್ಲ ಎಂಬ ಹೇಳಿಕೆಯಿಂದ ಪಕ್ಷದ ಕೆಳ ಹಂತದ ಕಾರ್ಯಕರ್ತರು, ಮುಖಂಡರಲ್ಲಿ ಹುಮ್ಮಸ್ಸು ಹೆಚ್ಚಿಿದೆ. ಹೀಗಾಗಿ, ರಾಜ್ಯದ ವಿವಿಧ ಜಿಲ್ಲೆೆಗಳಲ್ಲಿ ನಾಲ್ಕು ತಂಡಗಳ ರಚಿಸಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ.
ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಾಮಿ, ಸಾಮಾಜಿಕ ಜಾಲತಾಣ ನಿರ್ವಹಿಸುವ ಚಂದನ್ ಅವರು ಪ್ರತಿ ಬೂತ್ ಮಟ್ಟದ ಏಜೆಂಟರುಗಳಿಗೆ ತರಬೇತಿ ನೀಡಿ ಸಾಮಾಜಿಕ ಜಾಲತಾಣ ಹೇಗೆ ಬಳಸಬೇಕು, ಪಕ್ಷದ ಸಂಘಟನೆಯ ಮೂಲಕ ಜನರ ತಲುಪುವುದು ಹೇಗೆ ಎಂಬುದರ ಮೇಲೆ ತರಬೇತಿ ನೀಡಲಾಗುವುದು. ಕ್ಷೇತ್ರದ ಸುಮಾರು 150 ಬೂತ್ ಮಟ್ಟದ ಏಜೆಂಟರು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಲಿದ್ದಾಾರೆ ಎಂದರು.
ರಾಜ್ಯದಲ್ಲಿ 2002ರಲ್ಲಿ ಮತದಾರರ ಪಟ್ಟಿಿ ಸಮಗ್ರ ಪರಿಷ್ಕರಣೆ ಮಾಡಿದ್ದು ಇದೀಗ ಪಕ್ಷದ ಮುಖಂಡರು, ಏಜೆಂಟರು ನಕಲಿ ಮತದಾರರ ಗುರುತಿಸಿ ಪಟ್ಟಿಿಯಿಂದ ತೆಗೆದು ಹಾಕಲು ಕಾರ್ಯ ನಿರ್ವಹಿಸಲಿದ್ದಾಾರೆ ಎಂದ ಅವರು, ಹಾಗಾಂತ ಕಾಂಗ್ರೆೆಸ್ನವರ ಅನುಕರಣೆ ಎಂದು ಹೇಳಲಾಗದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಿಯಲ್ಲಿ ರಾಜ್ಯ ಸಮಿತಿಯ ಉಪಾಧ್ಯಕ್ಷ ಲಕ್ಷ್ಮೀಪತಿ ಗಾಣದಾಳ, ಎಸ್ಟಿ ಘಟಕದ ಉಪಾಧ್ಯಕ್ಷ ಕೆ.ಸಣ್ಣ ನರಸಿಂಹ ನಾಯಕ, ಕಾರ್ಯಾಧ್ಯಕ್ಷ ಎನ್.ಶಿವಶಂಕರ,ಪ್ರಘಿ.ಕಾರ್ಯದರ್ಶಿ ರಾಮಕೃಷ್ಣಘಿ, ತಾಲೂಕಾಧ್ಯಕ್ಷ ನಾಗರಾಜಗೌಡ, ಅಮರೇಶಗೌಡ ಆಶಾಪೂರು ಇತರರಿದ್ದರು.
ಜ.11ರಂದು ಜೆಡಿಎಸ್ ಸಾಮಾಜಿಕ ಜಾಲತಾಣ ಬಳಕೆ ತರಬೇತಿ ಕಾರ್ಯಾಗಾರ

