ಸುದ್ದಿಮೂಲವಾರ್ತೆ
ಕಾರಟಗಿ,ಏ.೩- ಬರುವ ಮೆ. ೧೦ ರಂದು ಜರುಗಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಸಾಕಷ್ಟು ಮಾಧ್ಯಮಗಳು ಈಗಾಗಲೇ ಸರ್ವೆ ಹೇಳಿದ್ದು, ಮತ್ತೆ ಜೆಡಿಎಸ್ ಮೈತ್ರಿ ನೇತ್ರತ್ವದ ಸರಕಾರ ಅಸ್ವತಿಕ್ವಕ್ಕೆ ಬರುವುದು ನಿಶ್ಚಿತ ಎಂದು ಕನಕಗರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸೇವಾಕಾಂಕ್ಷಿ ಹಾಗೂ ಈ ಪಕ್ಷದ ಟಿಕೆಟ್ ಆಕಾಂಕ್ಷಿ ಹನುಮೇಶ ಹುಳ್ಕಿಹಾಳ ತಿಳಿಸಿದರು.
ಜೆಡಿಎಸ್ ಪಕ್ಷದ ವರಿಷ್ಠಿರು ಈ ಚುನಾವಣೆಯಲ್ಲಿ ತಮಗೇ ಟಿಕೆಟ್ ನೀಡುವ ವಿಶ್ವಾಸ ನೀಡಿದ್ದರಿಂದ ಕ್ಷೇತ್ರದಾದ್ಯಂತ ತಳ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಇಳಿದಿದ್ದೇನೆ. ಪಕ್ಷದ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ರಚನೆ ಮಾಡಲಿದ್ದೇನೆ. ಕಾರ್ಯಕರ್ತರ ಪಡೆಯೊಂದಿಗೆ ಹಿಂದೆ ಕುಮಾರ ಸ್ವಾಮಿ ಅವರ ಮೈತ್ರಿ ಸರಕಾರದಲ್ಲಿ ಜಾರಿಗೊಳಿಸಿದ ರೈತರ ಸಾಲ ಮನ್ನಾ, ಕೃಷಿ. ನೀರಾವರಿ, ಇತರ ಜನಪರ ಯೋಜನೆಗಳನ್ನ ಮತ್ತು ಮುಂದೆ ಅಧಿಕಾರಕ್ಕೆ ತಂದರೆ ಈಗಾಗಲೇ ಪಂಚಜೈನ್ಯ ಯಾತ್ರೆಯಲ್ಲಿ ಘೋಷಿಸಿದ ಪ್ರಣಾಳಿಕೆಗಳನ್ನ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷ ಗಟ್ಟಿಗೊಳಿಸಲಾಗುತ್ತದೆ ಎಂದರು.
ನಾನು ಕ್ಷೇತ್ರದ ಸ್ಥಳೀಯನಾಗಿದ್ದರಿಂದ ನಾನು ಕ್ಷೇತ್ರದಾದ್ಯಂತ ಚಿರಪರಿಚಿತನಾಗಿದ್ದರಿಂದ ಹೋದಕಡೆಗಳಲ್ಲಿ ಜನರಿಂದ ತಮಗೆ ಮತ್ತು ತಮ್ಮ ಪಕ್ಷಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಈಗಾಗಲೇ ಮಾಜಿ ಮತ್ತು ಹಾಲಿ ಶಾಸಕರ ಅಧಿಕಾರ ನೋಡಿದ ಕ್ಷೇತ್ರದ ಮತದಾರರು ಹೊಸಬರಿಗೆ ಅವಕಾಶ ಕೊಟ್ಟು ನೋಡೋಣ ಎನ್ನುವ ಮಾತನಾಡುತ್ತಿದ್ದಾರೆ ಎಂದರು.
ಅವರು ಕಾರಟಗಿ-ಕನಗಿರಿ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು, ಮನೆ ಮನೆಗೆ ಭೇಟಿ ನೀಡಿ ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷಕ್ಕೆ ಬೆಂಬಲಿಸುವAತೆ ಮನವಿ ಮಾಡುತ್ತಿದ್ದಾರೆ.
ಪಕ್ಷದ ಮುಖಂಡರಾದ ಬುಲೆಟ್ ಗೌಡ್ರು, ಆದಣ್ಣ, ಶೇಖಣ್ಣ, ಖಾಜಾಸಾಬ, ರಸೂಲಸಾಬ, ಹನೀಫ್, ರುದ್ರಗೌಡ, ಬಸವರಾಜ ನಾಯಕ, ಹನುಮೇಶ ಕಾರಟಗಿ ಅನೇಕರಿದ್ದರು.