ಸುದ್ದಿಮೂಲ ವಾರ್ತೆ ಸಿಂಧನೂರು, ಅ.24:
ತುಂಗಭದ್ರಾಾ ಜಲಾನಯನ ವ್ಯಾಾಪ್ತಿಿಯಲ್ಲಿ ಅತಿವೃಷ್ಠಿಿಯಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾಾರೆ. ಎರಡನೇ ಬೆಳೆಗೆ ನೀರು ಕೊಟ್ಟರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ. ಬೇಸಿಗೆ ಬೆಳೆಗೆ ನೀರು ಹರಿಸಬೇಕು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ ಶಾಸಕರಿಗೆ, ಸರಕಾರಕ್ಕೆೆ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಟಿಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಿಯಿಂದ ಭತ್ತ ಬೆಳೆ ಸೇರಿ ಬಹುತೇಕ ಬೆಳೆಗಳು ಹಾನಿಯಾಗಿದೆ. ಭತ್ತಕ್ಕೆೆ ವೈರಸ್ ಬಂದು ಹಾನಿಯಾಗಿದೆ. ಇದರಿಂದಾಗಿ ರೈತರು ಕಷ್ಟದಲ್ಲಿದ್ದಾಾರೆ. ಪ್ರಸ್ತುತ ತುಂಗಭದ್ರಾಾ ಜಲಾಶಯದಲ್ಲಿ 80 ಟಿಎಂಸಿ ನೀರಿದೆ. ಎರಡನೇ ಬೆಳೆಗೆ 50 ಟಿಎಂಸಿ ನೀರು ಸಾಕಾಗುತ್ತದೆ. ಎರಡನೇ ಬೆಳೆಗೆ ನೀರು ಕೊಡಲು ಅವಕಾಶವಿದೆ. ಕ್ರಸ್ಟ್ಗೇಟ್ಗಳ ಆಧುನೀಕರಣಕ್ಕೆೆ ಬೇಸಿಗೆ ಸಂದರ್ಭದಲ್ಲಿ ಮಾಡಿಕೊಳ್ಳಬೇಕು. 2-3 ದಿನಗಳಲ್ಲಿ ಸ್ಥಳೀಯ ಶಾಸಕರು, ಸರಕಾರ, ಐಸಿಸಿ ರೈತರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು ಎಂದು ಒತ್ತಾಾಯಿಸಿದರು.
ಹೋರಾಟಕ್ಕೆೆ ನಿರ್ಧಾರ:
ಅತಿವೃಷ್ಠಿಿಯಿಂದ ತಾಲೂಕಿನಲ್ಲಿ ರೈತರು ಸಂಕಷ್ಟದಲ್ಲಿದ್ದಾಾರೆ. ಜಲಾಶಯದ ಅಗತ್ಯವಿರುವ ಗೇಟ್ಗಳನ್ನು ಮಾತ್ರ ದುರಸ್ಥಿಿ ಮಾಡಿ. ಉಳಿದವು ಮುಂದಿನ ಬೇಸಿಗೆಯಲ್ಲಿ ಮಾಡಬೇಕು. ಈ ಬಗ್ಗೆೆ ನಿರ್ಲಕ್ಷ್ಯ ತಾಳಿದರೆ ಹೋರಾಟಕ್ಕೆೆ ಅಣಿಯಾಗಬೇಕಾಗುತ್ತದೆ. ಹೋರಾಟಕ್ಕೆೆ ಬಿಜೆಪಿ ಮುಖಂಡರು, ಎರಡು ಪಕ್ಷಗಳ ರಾಜ್ಯಮಟ್ಟದ ನಾಯಕರನ್ನು ಆಹ್ವಾಾನಿಸುವ ಕುರಿತುಂತೆ ಚರ್ಚೆಗಳು ನಡೆದಿವೆ ಎಂದು ಮಾಹಿತಿ ನೀಡಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ರವಿಕುಮಾರ ಪನ್ನೂರು ಮಾತನಾಡಿ, ಕಾಂಗ್ರೆೆಸ್ ಸರಕಾರ ರೈತ ವಿರೋಧಿ ನೀತಿ ತಳೆದಿದೆ. ಅತಿವೃಷ್ಠಿಿಯಿಂದ ರೈತರು ಸಂಕಷ್ಟದಲ್ಲಿದ್ದಾಾರೆ. ಹೆಚ್ಚು ಮಳೆಯಾಗಿದ್ದರಿಂದ ಜಲಾಶಯದಲ್ಲೂ ಸಾಕಷ್ಟು ನೀರಿವೆ. ಗೇಟ್ಗಳ ಅಳವಡಿಕೆ ನೆಪದಲ್ಲಿ ನೀರು ಪೋಲು ಮಾಡದೇ ಎರಡನೇ ಬೆಳೆಗೆ ನೀರು ಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಜಿ.ಸತ್ಯನಾರಾಯಣ, ಅಶೋಕ ಗದ್ರಟಗಿ, ಚಂದ್ರಶೇಖರ ಮೈಲಾರ, ಅಲ್ಲಮಪ್ರಭು ಪೂಜಾರ, ವೆಂಕಟೇಶ ನಂಜಲದಿನ್ನಿಿ, ಸುಮಿತ್ ತಡಕಲ್, ಅಜಯ್ ದಾಸರಿ, ಮೊಹ್ಮದ್ ಆಸ್ೀ ಸೇರಿದಂತೆ ಇತರರು ಇದ್ದರು.

