ಸುದ್ದಿಮೂಲ ವಾರ್ತೆ,
ಕಲಬುರಗಿ, ಏ.13: ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಈ ಬಾರಿ 30 ರಿಂದ 40 ಸ್ಥಾನಗಳನ್ನು ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಬಹಳಷ್ಟು ಜನ ಜನತಾ ಪರಿವಾರದಿಂದ ಬೇರೆ ಬೇರೆ ಪಕ್ಷಕ್ಕೆ ಹೋಗಿದ್ದಾರೆ, ಇಂದು ಅವರೆಲ್ಲರೂ ಮರಳಿ ವಾಪಸ್ ಬರಲು ಚರ್ಚೆ ನಡೆಸಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಪಕ್ಷ ಇಲ್ಲವೆಂದು ಲೇವಡಿ ಮಾಡುತ್ತಿದ್ದರು. ಆದರೆ, ಇವಾಗ ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಪರವಾದ ವಾತಾವರಣ ನಿರ್ಮಾಣವಾಗಿದೆ ಎಂದರು.
ವೈ.ಎಸ್.ವಿ ದತ್ತಾ ಅವರು ನನ್ನ ಜೊತೆಗೆ ಸಂಪರ್ಕದಲ್ಲಿಲ್ಲ. ಅವರು ಶಾಸಕರಿದ್ದಾಗಲೂ ನನ್ನ ಜೊತೆಯಲ್ಲಿ ಸಂಪರ್ಕದಲ್ಲಿ ಇದ್ದೀರಲಿಲ್ಲ. ಇನ್ನೂ ಶುಕ್ರವಾರ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಪಟ್ಟಿ ಬಿಡುಗಡೆ ಮಾಡಲು ಮಾನಸಿಕವಾಗಿ ಸಂಪೂರ್ಣ ಸಿದ್ದನಾಗಿದ್ದೇನೆ ಎಂದರು.
ಹಾಸನದ ಟಿಕೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನ ಟಿಕೆಟ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಹಾಸನದ ಗೊಂದಲವನ್ನು ನಾವು ಬಗೆಹರಿಸುತ್ತೇವೆ. ನನ್ನ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಂಚರತ್ನ ಯಾತ್ರೆಯಲ್ಲಿ ಎಳೆಂಟು ಕ್ಷೇತ್ರಗಳ ಬಗ್ಗೆ ಅಭ್ಯರ್ಥಿ ಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದ ಅವರು, ನಾನು ಈ ಬಾರಿ 120 ಸ್ಥಾನ ದಾಟಲೆಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡುವುದಾಗಿ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಅವರಿಗೆ ಅವಕಾಶ ಸಿಕ್ಕಾಗಲೇ ಸಿಎಂ ಮಾಡಲಿಲ್ಲ. ಇವಾಗ ಎನ್ ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು. ದೇವೆಗೌಡರು ಆವಾಗಲೇ ಖರ್ಗೆಯವರನ್ನು ಸಿಎಂ ಮಾಡಿ ಎಂದು ಹೇಳಿದ್ದಿರು ಎಂದರು.
ಜೆಡಿಎಸ್ ಪಕ್ಷಕ್ಕೆ ಶಾಕ್ ಎಂದವರಿಗೆ ಇವಾಗ ಶಾಕ್ ಆಗುತ್ತಿದೆ. ನಮಗೆ ಯಾವುದೇ ರೀತಿಯ ಶಾಕ್ ಇಲ್ಲ. ನಾಳೆಯಿಂದ ಬಹಳಷ್ಟು ಜನ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಇನ್ನೂ ಬಿಜೆಪಿಯಿಂದ ಟಿಕೆಟ್ ವಂಚಿತರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಅವರಿಗೆ ಜೇವರ್ಗಿ ಮತಕ್ಷೇತ್ರದ ಜೆಡಿಎಸ್ ಟಿಕೆಟ್ ಫೈನಲ್ ಆಗಿದೆ ಎಂದು ಹೇಳಿದರು.