ಸುದ್ದಿಮೂಲ ವಾರ್ತೆ
ಆನೇಕಲ್, ಆ. 16 : ಪಟ್ಟಣದ ಹೊಸ ಮಾಧ್ಯಮಿಕ ಶಾಲೆ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ತಹಸಿಲ್ದಾರ್ ಶಶಿಧರ್ ಮಾಡ್ಯಾಳ್ ಧ್ವಜಾರೋಹಣ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಹಾಗೂ ವಾದ್ಯವೃಂದ ನೆರೆದಿದ್ದವರ ಗಮನ ಸೆಳೆಯಿತು.
ಶಾಸಕ ಬಿ. ಶಿವಣ್ಣನವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನ್ ನಾಯಕರ ಕನಸು ನನಸಾಗಲುಯುವಜನಾಂಗ ಶ್ರಮಿಸಬೇಕು. ದೇಶಕ್ಕಾಗಿ ಕೊಡುಗೆ ನೀಡುವ ಗುಣವನ್ನು ಯುವ ಸಮುದಾಯ ಬೆಳೆಸಿಕೊಳ್ಳಬೇಕು. ದೇಶದ ಸುರಕ್ಷತೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರು ಮತ್ತು ರೈತರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು.
ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಮಾತನಾಡಿ, ವ್ಯಕ್ತಿ ಸ್ವಾಭಿಮಾನಿಯಾಗಿ ಜೀವಿಸಬೇಕಾದರೆ ಸ್ವಾತಂತ್ರ್ಯ ಅವಶ್ಯಕ. ಸ್ವಾತಂತ್ರ್ಯ ಪಡೆದ ನಂತರ ಭಾರತ ವಿಶ್ವದಲ್ಲಿಯೇ ಶಕ್ತಿಶಾಲಿಯಾಗಿ ಬೆಳೆದಿದೆ ಎಂದರು.
ವಿವಿಧ ಕ್ಷೇತ್ರಗಳ ಸಾಧಕರನ್ನು ಸಾಹಿತಿ ತಾ.ನಂ .ಕುಮಾರಸ್ವಾಮಿ ಅಭಿನಂದಿಸಿದರು.. ಸ್ಕೌಟ್ಸ್ ನ ರಾಜ್ಯ ಆಯುಕ್ತ ಚಿನ್ನಸ್ವಾಮಿ ರೆಡ್ಡಿ, ಬಿ .ಇಡಿನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಂ.ಎಲ್. ಪವಿತ್ರಾ, ಪ್ಯಾರಾ ಒಲಂಪಿಕ್ ಕ್ರೀಡಾಪಟುಗಳಾದ ರೇಣುಕಾ ಶ್ರೀನಿವಾಸ್, ಪ್ರಗತಿಪರ ರೈತ ಕಾಂತರಾಜು, ಮುರುಗೇಶ್ , ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಹೆಚ್ಚು ಅಂಕ ಪಡೆದ ಕಿರಣ್ ತೇಜ , ಶ್ರೀ ತೇಜ, ಪೌರಕಾರ್ಮಿಕರಾದ ವೈ. ವೆಂಕಟೇಶ್, ಮುನಿಯಮ್ಮ, ಗಣೇಶ್ ತಿಮ್ಮರಾಯಪ್ಪ ಸೇರಿದಂತೆ ಹಲವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎನ್. ಎಸ್. ಪದ್ಮನಾಭ, ಮುಖ್ಯ ಅಧಿಕಾರಿ ರಾಜೇಶ್, ಸದಸ್ಯರಾದ ಮುನ್ನಾವರ್ ಕೃಷ್ಣ, ರಾಜೇಂದ್ರಪ್ರಸಾದ್, ರಾಜಪ್ಪ, . ಮಾಲಾ ಭಾರ್ಗವ, ಸುರೇಶ್, ಭಾರತಿ, ರವಿ, .ಕವಿತಾ, ಭುವನ, ಶಾಮಲಾ, ಶೋಭಾರಾಣಿ, ಅನಿತಾ, ಸುಧಾ, ಅನುಸೂಯ, ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅನಿಲ್ ಕುಮಾರ್, ಸಿ ಡಿ ಪಿ ಓ ಕವಿತಾ, ಜಿಲ್ಲಾ ಪಂಚಾಯಿತಿ ಎ ಇ ಇ ಚಿನ್ನಪ್ಪ, ಲೋಕೋಪಯಾಗಿ ಇಲಾಖೆ ಎ ಇ ಇ ವೆಂಕಟೇಶ್ ಇದ್ದರು.