ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.25:
ಪ್ರಜಾಪ್ರಭುತ್ವ ವ್ಯವಸ್ಥೆೆಯ ರಾಷ್ಟವಾಗಿರುವ ಭಾರತದಲ್ಲಿ ಮತದಾನದ ಮೂಲಕ ರಾಷ್ಟ ನಾಯಕರನ್ನು ಆಯ್ಕೆೆ ಮಾಡುವುದರಿಂದ ಮತದಾನಕ್ಕೆೆ ಅಗ್ರಸ್ಥಾಾನ ಕಲ್ಪಿಿಸಲಾಗಿದೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಿರಿಯ ಶ್ರೇಣಿ ಸಿವಿಲ್ ನ್ಯಾಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಸ್ಥಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜ ಭಾರತ ಚುಣಾವಣಾ ಆಯೋಗ, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕಾಡಳಿತ, ನ್ಯಾಾಯವಾದಿಗಳ ಸಂಘ, ಲಿಂಗಸುಗೂರು ಇವರ ಸಂಯುಕ್ತಾಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ – 2026ನ್ನು ಉದ್ಘಾಾಟಿಸಿ ಮಾತನಾಡುತ್ತ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಪ್ರತಿಯೊಬ್ಬ ನಾಗರಿಕನು ಮತದಾನದಿಂದ ರಾಷ್ಟ್ರವನ್ನು ಪ್ರಗತಿಯತ್ತ ಮತ್ತು ಸಾಮಾನ್ಯ ಜನರ ಕಳವಳಗಳನ್ನು ಪರಿಹರಿಸುವ ಸಾಮರ್ಥ್ಯವಿರುವ ನಾಯಕರನ್ನು ಆಯ್ಕೆೆಯ ಮೂಲಭೂತ ಹಕ್ಕನ್ನು ಹೊಂದಿದ್ದಾಾನೆ. ರಾಷ್ಟ್ರೀಯ ಮತದಾರರ ದಿನವು ಭಾರತದ ಭವಿಷ್ಯಕ್ಕೆೆ ನಿರ್ಣಾಯಕ ಮೂಲಾಧಾರವಾಗಿ ಕಾರ್ಯ ನಿರ್ವಹಿಸುವುದರಿಂದ ಅದರ ನಾಗರಿಕರು ತಮ್ಮ ನಾಯಕರನ್ನು ಆಯ್ಕೆೆಮಾಡುವಲ್ಲಿ ಮಾಡುವ ಆಯ್ಕೆೆಗಳ ಆಧಾರದ ಮೇಲೆ ಇದು ಅತ್ಯಂತ ಮಹತ್ವದ್ದಾಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ನ್ಯಾಾಯಾಧೀಶ ಅಂಬಣ್ಣ.ಕೆ ಈ ದಿನವನ್ನು ವಿಶೇಷವಾಗಿ 18 ವರ್ಷದ ಹೊಸ ಮತದಾರರು ಅವರ ಮತಗಳು ರಾಷ್ಟ್ರದ ಪಥದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆಂಬ ತಿಳುವಳಿಕೆಯನ್ನು ನೀಡುವುದು ಇದರ ಗುರಿಯಾಗಿದೆ ಎಂದರು. ಅಧ್ಯಕ್ಷತೆ ವಹಿ ಸಿದ ಉಪ ವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿಿ ಅವರು ರಾಷ್ಟ್ರೀಯ ಮತದಾರರ ದಿನವು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ, ಬದಲಾಗಿ ಇದು ನಾಗರಿಕರು, ವಿಶೇಷವಾಗಿ ಯುವಕರು ಮತದಾರರಾಗಿ ನೋಂದಾಯಿಸುವ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಿಯೆಯಲ್ಲಿ ಸಕ್ರಿಿಯವಾಗಿ ಭಾಗವಹಿಸಲು ಪ್ರೇರೇಪಿಸಲು ಪ್ರಯತ್ನಿಿಸುತ್ತದೆ. ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾಾರ ಕು.ಸತ್ಯಮ್ಮ ಸಹಾಯಕ ಸರಕಾರಿ ಅಭಿಯೋಜಕ ಸಾಹೇಬಗೌಡ ಬಿ.ಪಾಟೀಲ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಸ.ಪ್ರ.ದ.ಕಾಲೇಜು ಪ್ರಾಾಚಾರ್ಯ ಡಾ.ವೆಂಕಟನಾರಾಯಣ ಪದವಿ ವಿದ್ಯಾಾರ್ಥಿಗಳು ಮತ್ತು ತಾಲ್ಲೂಕು ಆಡಳಿತ ಸಿಬ್ಬಂದಿಗಳು ಭಾಗಿಯಾಗಿದ್ದರು.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅಗ್ರಸ್ಥಾನ : ನ್ಯಾಯಾಧೀಶೆ ಉಂಡಿ ಮಂಜುಳಾ

