ಸಿಂಧನೂರು, ಅ.02:
ತಾಲೂತಾಡಳಿತ, ತಾ.ಪಂ, ನಗರಾಭಿವೃದ್ಧಿಿ ಪ್ರಾಾಧಿಕಾರ, ನಗರಸಭೆ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿಯಿಂದ ಗುರುವಾರ ಸಂಜೆ ದಸರಾ ಉತ್ಸವದ ಅಂಗವಾಗಿ ಹಮ್ಮಿಿಕೊಂಡಿದ್ದ ಜಂಬೂ ಸವಾರಿ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.
ನಗರದ ಮಿನಿವಿಧಾನದ ಸೌಧದ ಮುಂದೆ ಗಾಂಧಿವೃತ್ತದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಪ್ರಮುಖರು ಆನೆ ಮೇಲಿನ ಅಂಬಾರಿಯಲ್ಲಿದ್ದ ಅಂಬಾದೇವಿ ಭಾವಚಿತ್ರಕ್ಕೆೆ ಪುಷ್ಟವೃಷ್ಠಿಿ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಗಾಂಧಿವೃತ್ತದ ಮೂಲಕ ಬಸ್ ನಿಲ್ದಾಾಣ, ಬಸವ ವೃತ್ತ, ಟಿಪ್ಪುು ಸುಲ್ತಾಾನ್ ವೃತ್ತ, ಕಿತ್ತೂರು ಚನ್ನಮ್ಮ ವೃತ್ತದ ಮೂಲಕ ಪುನಃ ತಹಶೀಲ್ ಕಛೇರಿಗೆ ಆಗನಿಸಿತು. ಮೆರವಣಿಯಲ್ಲಿ ಬೃಹತ್ ಈಶ್ವರ ಮೂರ್ತಿ ಗಮನ ಸೆಳೆಯಿತು. ವಿವಿಧ ವಚನಕಾರರ, ದಾರ್ಶನಿಕರ ಭಾವಚಿತ್ರಗಳ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಮಾಜಿ ಸಂಸದ ಕೆ ವಿರುಪಾಕ್ಷಪ್ಪ, ತಹಶಿಲ್ದಾಾರ ಅರುಣ ದೇಸಾಯಿ, ತಾ.ಪಂ ಕಾರ್ಯನಿರ್ವಾಹಕ ಚಂದ್ರಶೇಖರ, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಸೀ ಶಕ್ತಿಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಡಿವೈಎಸ್ ಪಿ ಬಿ.ಎಸ್.ತಳವಾರ, ಉತ್ಸವ ಸಮಿತಿ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಮುಖಂಡರಾದ ಎನ್.ಅಮರೇಶ, ಆರ್.ಸಿ.ಪಾಟೀಲ್, ಅನಿಲಕುಮಾರ, ಬಸವರಾಜ ಹಿರೇಗೌಡರ್, ಖಾಜಿ ಮಲಿಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಂಬಾರಿಯಲ್ಲಿ ಅಂಬಾದೇವಿ ಮೆರವಣಿಯಲ್ಲಿ ಕೊಂಡೋಯ್ಯುವ ಸಂದರ್ಭದಲ್ಲಿ ರಸ್ತೆೆಯುದ್ದಕ್ಕೂ ಸಾರ್ವಜನಿಕರು ಕಣ್ತುಂಬಿಸಿಕೊಂಡರು.
ಅಂಬಾರಿ ಮೆರವಣಿಗೆ ನಂತರ ಬನ್ನಿಿ ಮುಡಿಯಲು ತಹಶಿಲ್ದಾಾರ ಅರುಣ ಹೆಚ್.ದೇಸಾಯಿ ಚಾಲನೆ ನೀಡಿದರು. ನಂತರ ಒಬ್ಬರುಗೊಬ್ಬರು ಬನ್ನಿಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ಸಿಂಧನೂರಿನಲ್ಲಿ ಅದ್ದೂರಿಯಾಗಿ ಜರುಗಿದ ಜಂಬೂ ಸವಾರಿ
