ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.16:
ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸುಗೊಳಿಸುವತ್ತ ನಾವು ಹೆಜ್ಜೆೆ ಇಡಬೇಕು. ಆ ನಿಟ್ಟಿಿನಲ್ಲಿ ಸ್ವದೇಶಿ ವಸ್ತುಗಳನ್ನು ಬಳಸಿ ದೇಶ ಅಭಿವೃದ್ಧಿಿ ಹೊಂದಲು ಸಾಧ್ಯ ಎಂದು ಬಿಜೆಪಿ ಮುಖಂಡ ಕೆ.ಕರಿಯಪ್ಪ ಹೇಳಿದರು.
ಮಂಗಳವಾರ ತಾಲೂಕಿನ ಜಾಲಿಹಾಳ ಗ್ರಾಾಮದ ಎಸ್ಎಂ ಪಬ್ಲಿಿಕ್ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವದೇಶಿ ಉತ್ಪನ್ನಗಳ ಬಳಸಲು ಕರೆ ನೀಡಿದ ಹಿನ್ನೆೆಲೆಯಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸದೃಢ ರಾಷ್ಟ್ರವಾಗಿ ಬೆಳೆದಿದೆ. ದೇಶದ ಆರ್ಥಿಕ ಪ್ರಗತಿಗೆ ಸ್ವದೇಶಿ ವಸ್ತುಗಳನ್ನೇ ಪ್ರತಿಯೊಬ್ಬರು ಬಳಕೆ ಮಾಡಬೇಕಾದ ಅಗತ್ಯವಿದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿದ್ದರಾಮೇಶ ಮನ್ನಾಾಪುರ, ಗ್ರಾಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ, ಮಹಿಳಾ ಮಂಡಲ ಅಧ್ಯಕ್ಷೆ ಮಹಾನಂದಮ್ಮ, ಸಹನಾ ಹಿರೇಮಠ, ಯುವ ಮೋರ್ಚಾದ ಮೂರ್ತಿ ಕೆಂಭಾವಿ, ಪ್ರಮುಖರಾದ ಯಲ್ಲಪ್ಪ ತೆಲಗರ, ಶರಣಪ್ಪ ದಳಪತಿ, ಚಿದಾನಂದಪ್ಪ ಜವಳಗೇರಾ, ಎಸ್ಎಸ್ ಹಿರೇಮಠ, ನರಸಪ್ಪ ಕುರಿ ಇದ್ದರು.
ಸ್ವದೇಶಿ ವಸ್ತುಗಳನ್ನೇ ಬಳಸಿ – ಕೆ.ಕರಿಯಪ್ಪ

