ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ಹುಬ್ಬಳ್ಳಿಿಯಲ್ಲಿ ಕೆ ಕೃಷ್ಣ ಬ್ರಾಾಂಡ್ನ ಕಡಲೆ ಹಿಟ್ಟನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ್ ಲೋಕಾರ್ಪಣೆಗೊಳಿಸಿದರು.
ಹುಬ್ಬಳ್ಳಿಿಯಲ್ಲಿ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು 1980 ರಲ್ಲಿ ಉತ್ತರ ಕರ್ನಾಟಕದ ಹುಬ್ಬಳ್ಳಿಿಯಲ್ಲಿ ಕೃಷ್ಣ ಖೋಡೆ ನೇತೃತ್ವದಲ್ಲಿ ಆರಂಭಗೊಂಡ ಗ್ರಾಾಂ ದಾಲ್ ಬೇಸನ್ ಉದ್ಯಮ ಕೆ. ಬ್ಯಾಾಂಡ್ ಹೆಸರಿನೊಂದಿಗೆ ತನ್ನ ವ್ಯವಹಾರ ಆರಂಭಿಸಿತು. ಹಲವಾರು ತೊಂದರೆಗಳಿಂದ ಉತ್ಪಾಾದನೆಯಲ್ಲಿ ಕುಂಟಿತಗೊಂಡಿದ್ದ ಈ ಉದ್ಯಮ ಈಗ ವಿಸ್ತರಣೆ ಮಾಡಲಾಗಿದ್ದು, ರಾಯಚೂರಿನಲ್ಲಿನ ನ್ಯೂ ರಾಘವೇಂದ್ರ ್ಲೆರ್ ಮಿಲ್ ಮೂಲಕ ನೂತನವಾಗಿ ಕೆ.ಕೃಷ್ಣ ಬ್ರ್ಯಾಾಂಡ್ ಕಡಲೆ ಹಿಟ್ಟನ್ನು ಮಾರುಕಟ್ಟೆೆಗೆ ಬಿಡುಗಡೆ ಮಾಡುತ್ತಿಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲಕ್ಕಿಿ ಡ್ರಾಾ ಮೂಲಕ ಸುಮಾರು 10 ಕ್ಕೂ ಹೆಚ್ಚು ವಿತರಕರಿಗೆ ದ್ವಿಿಚಕ್ರ ವಾಹನ ನೀಡುವ ಮೂಲಕ ವಿತರಕರಿಗೆ ಉತ್ತೇಜನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್, ಮಾಜಿ ಸಂಸದ ಬಿ.ವಿ.ನಾಯಕ, ಆರ್ಎಪಿಎಂಸಿ ಅಧ್ಯಕ್ಷ ಜಯವಂತರಾವ್ ಪತಂಗೆ, ಹಿರಿಯ ಪತ್ರಕರ್ತ ಗುರುರಾಜ ಹೂಗಾರ, ಮಾಲೀಕರಾದ ಕೃಷ್ಣ ಖೋಡೆ, ಶಕುಂತಲಾ ಖೋಡೆ, ರಾಘವೇಂದ್ರ ಖೋಡೆ , ವಿದ್ಯಾಾ ಖೋಡೆ , ಮಿನಲ್ ಖೋಡೆ ಇತರರಿದ್ದರು.
ಕೆ ಕೃಷ್ಣ ಬ್ರಾಾಂಡ್ ಕಡಲೆ ಹಿಟ್ಟು ಲೋಕಾರ್ಪಣೆ ಹಳೆಯ ಉತ್ಪನ್ನ ಹೊಸತನದೊಂದಿಗೆ ಜನರಿಗೆ ತಲುಪಲಿ-ಬೋಸರಾಜ್

