ಸುದ್ದಿಮೂಲ ವಾರ್ತೆ ಸಿಂಧನೂರು, ಜ.01:
ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ಮಾಧ್ಯಮವು ಅತ್ಯಂತ ಪ್ರಭಾವಶಾಲಿ ಅಂಗವಾಗಿ ಕಾರ್ಯನಿರ್ವಹಿಸುತ್ತಿಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಅವರು ನಗರದ ಎಕೆ ಗೋಪಾಲನಗರದ ತಮ್ಮ ಾರಂ ಹೌಸ್ನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಾ ಹಾಗೂ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ವಿಜೇತರಾದ ನೂತನ ಪದಾಧಿಕಾರಿಗಳಿಗೆ ಸನ್ಮಾಾನಿಸಿ ಮಾತನಾಡಿದರು. ಪತ್ರಿಿಕೆಗಳಿಗೆ ಅಪರಿಮಿತ ಸ್ವಾಾತಂತ್ರವಿದೆ. ನಿರ್ಭೀತಿಯಿಂದ ಜನತೆಗೆ ಸುದ್ದಿಗಳನ್ನು ಕೊಡಬೇಕು. ಪತ್ರಿಿಕಾ ರಂಗ ದಾರಿ ತಪ್ಪಿಿದರೆ ಪ್ರಜಾಪ್ರಭುತ್ವದ ದಾರಿ ತಪ್ಪಿಿದಂತೆ. ಪತ್ರಕರ್ತರಿಗೆ ಬದ್ದತೆ ಬೇಕಿದೆ. ವೈಯಕ್ತಿಿಕ ಹಿತಾಸಕ್ತಿಿಗೆ ಆದ್ಯತೆ ನೀಡಿದೆ, ಸಮಾಜದ ಸ್ವಾಾಸ್ಥ್ಯದೆಡೆ ಚಿಂತನೆ ಇರಬೇಕು ಎಂದರು.
ಚಿದಾನಂದಯ್ಯ ಗುರುವಿನ್ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಮುಖಂಡರಾದ ನಲ್ಲಾಾ ವೆಂಕಟೇಶ್ವರರಾವ್, ಎಂ.ದೊಡ್ಡಬಸವರಾಜ, ಸಿದ್ರಾಾಮೇಶ ಮನ್ನಾಾಪುರ, ವೆಂಕೋಬ ನಾಯಕ ರಾಮತ್ನಾಾಳ ಹಾಗೂ ಇತರರು ಇದ್ದರು.
ಮಾಧ್ಯಮ ಅತ್ಯಂತ ಪ್ರಭಾವಶಾಲಿ ಅಂಗ – ಕೆ.ವಿರೂಪಾಕ್ಷಪ್ಪ

