ಸುದ್ದಿಮೂಲ ವಾರ್ತೆ
ಆನೇಕಲ್, ಜು 26 : ಮನೆಯ ಬೀಗ ಹೊಡೆದು ಸುಮಾರು 25 ಲಕ್ಷ ಹಣ ದೋಚಿದ್ದ ಆರೋಪಿಯನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸಮೀಪದ ಯಾರಂಡಳ್ಳಿ ಕನ್ನಿಕಾನಗರದ ವಾಸಿ ಸರ್ವಣ್ ಭಾರತಿ ಎಂಬುವರ ಮನೆಯಲ್ಲಿ ಕಳೆದ 19 ರಂದು ಕಳ್ಳತನವಾಗಿತ್ತು. ಮಹೇಂದ್ರ ಸಿಂಗ್ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವ್ಯಕ್ತಿಯೋರ್ವ ತಲೆಗೆ ಟೋಪಿ, ಮುಖಕ್ಕೆ ಕರ್ಚಿಪ್ ಕಟ್ಟಿಕೊಂಡು ಬ್ಯಾಗೊಂದನ್ನು ಹೆಗಲಿಗೇರಿಸಿಕೊಂಡು ಬಂದಷ್ಟೆ ವೇಗವಾಗಿ ವಾಪಸ್ ಹೋಗುತ್ತಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಗ್ರಾಮದಿಂದ ಬಂದ ಯುವಕನಿಗೆ ಕೆಲಸ ಕೊಟ್ಟು ಹೊಟ್ಟೆ ತುಂಬಾ ಊಟ ಕೆಲಸಗಾರನಾಗಿ ನೋಡದೆ ಮಗನಾಗಿ ನೋಡಿಕೊಂಡಿದ್ದ ಅದೇ ಮನೆಯಲ್ಲಿ ಕನ್ನ ಹಾಕಿ ವಂಚನೆ ಎಸಗಿದ್ದಾನೆ ಎನ್ನಲಾಗಿದೆ.