ಸುದ್ದಿಮೂಲ ವಾರ್ತೆ,
ಕಲಬುರಗಿ ಏ೦೯: ಕಲಬುರಗಿ ದಕ್ಷಿಣ ಮತಕ್ಷೇತ್ರದಿಂದ ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲರ ಹೆಸರು ಹೈಕಮಾಂಡ್ ಘೋಷಿಸದ ಬೆನ್ನಲ್ಲೇ ಇಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವವ ಸಂಖ್ಯೆ ಹೆಚ್ಚುತ್ತ ಸಾಗಿದೆ.
ಭಾನುವಾರ ಕಲಬುರಗಿ ದಕ್ಷಿಣ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಜುಗೌಡ ಪಾಟೀಲರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇವರೊಂದಿಗೆ ರಾಜನಗೌಡ ಪಾಈಲ್, ರಾಜಶೇಖರ, ಚಂದು, ಅಶೋಕ ಕುಲಕರ್ಣಿ, ಅನೀಲ ಮೋಹನರಾವ್, ಪ್ರಕಾಶ ನಂದಿಕೋಲ್, ಶಂಕರ ರಾಠೋಡ, ಮೋಹನ್ ಸೇರಿದಂತೆ ಅನೇಕರಿದ್ದರು.
ಭಾನುವಾರ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲರು ಬೆಳಗ್ಗೆಯಿಂದ ಸಂಜೆಯವರೆಗೂ ಸಂಚರಿಸಿದ ನಗರದ ಸಂಗಮೇಶ್ವರ ಕಾಲೋನಿ, ರಾಜಾಪೂರ ಕಾಲೋನಿ, ಚಿಮ್ಮಲಗಿ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಸಂಚರಿಸಿದ್ದು ಇಲ್ಲೆಲ್ಲಾ ನೂರಾರು ಹಿರಿಯರು, ಯುವಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಪಕ್ಷದ ತತ್ವ, ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟು, ಸ್ಥಳೀಯವಾಗಿ ಅಲ್ಲಂಪ್ರಭು ಪಾಟೀಲರ ಜನಪರ ಧೋರಣೆ ಗಮನದಲ್ಲಿಟ್ಟುಕೊಂಡು ತಾವೆಲ್ಲರೂ ಕಾಂಗ್ರೆಸ್ ಪಕ್ಷ ಸೇರಿ ಹೆಚ್ಚಿನ ಮತಗಳಿಂದ ಕಾಂಗ್ರೆಸ್ ಗೆಲುವಿಎ ಶ್ರಮಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಕಾಂಗ್ರೆಸ್ ಪಕ್ಷದ ಪ್ರಮುಖರಿದ್ದರು.