ಸುದ್ದಿಮೂಲ ವಾರ್ತೆ
ಯಲಬುರ್ಗಾ:ತಾಲೂಕಿನ ಕಲ್ಲೂರು ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ,ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಇಲ್ಲಿಯ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗಯ್ಯ ತಂದಿ ಬಸಯ್ಯ ಗುರುಮಠ,ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಲ್ಲಯ್ಯ ಸಂಗನಾಳಮಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮಪ್ಪ ಪೂಜಾರ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜುಳಾ ಗಂಡ ಸುರೇಶ ಈಳಗೇರ ತಮ್ಮ ನಾಮಪತ್ರ ಸಲ್ಲಿಸಿದ್ದರು.
ನಂತರ ನಡೆದ ಮತದಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗಯ್ಯ ತಂದಿ ಬಸಯ್ಯ ಗುರುಮಠ(೬) ಪಡೆದುಕೊಂಡು ಅಧ್ಯಕ್ಷರಾಗಿ ಆಯ್ಕೆಗೊಂಡರು.ಕಲ್ಲಯ್ಯ ಸಂಗನಾಳಮಠ(೩) ಮತಗಳನ್ನು ಪಡೆದುಕೊಂಡರು.
ಅಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮಪ್ಪ ಹನಮಪ್ಪ ಪೂಜಾರ(೬) ಮತಗಳನ್ನು ಪಡೆದುಕೊಂಡು ಉಪಾಧ್ಯಕ್ಷರಾಗಿ ಚುನಾಯಿತಗೊಂಡರು. ಮಂಜುಳಾ ಗಂಡ ಸುರೇಶ ಈಳಗೇರ(೩) ಮತಗಳನ್ನು ಪಡೆದುಕೊಂಡರು.
ವಿಜಯೋತ್ಸವ;ಕಲ್ಲೂರು ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಗೊಳ್ಳುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಕಾರ್ಯಾಧ್ಯಕ್ಷ ಸಿಎಂ.ಈಶ್ವರ ಅಟಮಾಳಗಿ,ಶರಣಪ್ಪ ಗಾಂಜಿ, ಕಲ್ಲೂರು ಗ್ರಾಮದ ಕಾಂಗ್ರೆಸ್ ಮುಖಂಡ ಕಲ್ಲಪ್ಪ ಕ್ಯಾದಗುಂಪಿ ನಿಕಟಪೂರ್ವ ಅಧ್ಯಕ್ಷ ಕಲ್ಲಪ್ಪ ಕವಳಕೇರಿ,ವರದಯ್ಯ ಹೊಸಮನಿ,ನಿಲ್ಲಪ್ಪ ತೊಂಡಿಹಾಳ, ಬಸಪ್ಪ ಬಂಗಾಳಗಿಡದ,ರಫಿಸಾಬ ದೊಡ್ಡಮನಿ,ಪ್ರಭು ಬೆಣಕಲ್,ಯಲ್ಲಪ್ಪ ಅಗಸಿಮನಿ,ಬಸವರಾಜ ಪೂಜಾರ, ಗ್ರಾಪಂ ಸದಸ್ಯರು,ಮುಖಂಡರು,ಕಾರ್ಯಕರ್ತರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು