ಕಲಬುರಗಿ,ಫೆ.19: ಕಲ್ಯಾಣ ಕರ್ನಾಟಕ ಉತ್ಸವ-2023ರ ಅಂಗವಾಗಿ ಇದೇ ಫೆಬ್ರವರಿ 21, 22 ಹಾಗೂ 23ರಂದು ಬೆಳಿಗ್ಗೆ 6.30 ಗಂಟೆಗೆ ಕ್ರಮವಾಗಿ ಕೆ.ಕೆ.ರನ್ (ಮ್ಯಾರಾಥಾನ್), ಸೈಕ್ಲೋಥಾನ್ ಹಾಗೂ ವಾಕಥಾನ್ ಸ್ಪರ್ಧೇಗಳನ್ನು ಆಯೋಜಿಸಲಾಗಿದೆ ಎಂದು ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಮತ್ತು ಉತ್ಸವದ ಕ್ರೀಡಾ ಸಮಿತಿಯ ಅಧ್ಯಕ್ಷರಾಗಿರುವ ಮಹಾನಗರ ಪಾಲಿಕೆ ಆಯುಕ್ತ ಭೂವನೇಶ ದೇವಿದಾಸ್ ಪಾಟೀಲ ಅವರು ತಿಳಿಸಿದ್ದಾರೆ.
ಕೆ.ಕೆ.ರನ್ (ಮ್ಯಾರಾಥಾನ್) ನಲ್ಲಿ ಭಾಗವಹಿಸಲಿಚ್ಛಿಸುವವರು https://forms.gle/ AmgeXoTwV9dsEWN86 ಲಿಂಕ್ ಮೂಲಕ, ಸೈಕ್ಲೋಥಾನ್ನಲ್ಲಿ ಭಾಗವಹಿಸಲಿಚ್ಛಿಸುವವರು https://forms.gle/ dQHE6UtM4PCksaGK9 ಲಿಂಕ್ ಮೂಲಕ ಹಾಗೂ ವಾಕ್ಥಾನ್ನಲ್ಲಿ ಭಾಗವಹಿಸಲಿಚ್ಛಿಸುವವರು https://forms.gle/ fPUHv72RPCyTDvhH8 ಲಿಂಕ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬೇಕು.
ಮ್ಯಾರಾಥಾನ್ ಮತ್ತು ಸೈಕ್ಲೋಥಾನ್ ಸ್ಪರ್ಧೆಗಳ ಪೈಕಿ ಪುರುಷ ಮುಕ್ತ ಸ್ಪರ್ಧೆಗಳಿಗೆ 200 ಜನ, ಉಳಿದ ಸ್ಪರ್ಧೆಗಳಿಗೆ 100 ಜನ ಮೊದಲು ನೋಂದಾಯಿಸಿದವರಿಗೆ ಹಾಗೂ ವಾಕ್ಥಾನ್ ನಡಿಗೆಯಲ್ಲಿ ಮೊದಲು 500 ಜನ ನೋಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮ್ಯಾರಾಥಾನ್, ಸೈಕ್ಲೋಥಾನ್ ಹಾಗೂ ವಾಕ್ಥಾನ್ ಸ್ಪರ್ಧೆಗಳ ಪ್ರತಿಯೊಂದು ವಿಭಾಗದಲ್ಲಿ ವಿಜೇತ ಅಗ್ರ ಮೂವರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಗುವುದು. ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಅವರು ಮನವಿ ಮಾಡಿದ್ದಾರೆ.