ಸುದ್ದಿಮೂಲ ವಾರ್ತೆ ರಾಯಚೂರು, ನ.08:
ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ ಶ್ರೇಷ್ಠ ಸಂತ ಶ್ರೀ ಕನಕದಾಸರ ತತ್ವಗಳು ಇಂದಿಗೂ ಪ್ರಸ್ತುತ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್. ಎಸ್. ಬೋಸರಾಜ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗಂಜ್ ವೃತ್ತದಲ್ಲಿ ಸಂತಕವಿ ಶ್ರೀ ಕನಕದಾಸ ಜಯಂತಿ ಅಂಗವಾಗಿ ಪುತ್ಥಳಿಗೆ ಸಚಿವ ಎನ್.ಎಸ್.ಬೋಸರಾಜ್, ಶಾಸಕರಾದ ಡಾ.ಶಿವರಾಜ ಪಾಟೀಲ,ಬಸನಗೌಡ ದದ್ದಲ್, ಎ.ವಸಂತಕುಮಾರ್, ಮೇಯರ್ ನರಸಮ್ಮ ಮಾಡಗಿರಿ, ಮುಖಂಡರಾದ ರವೀಂದ್ರ ಜಲ್ದಾಾರ್, ಕುರುಬರ ಸಮಾಜದ ಅಧ್ಯಕ್ಷ ಕೆ.ಬಸವಂತಪ್ಪಘಿ, ಪಿ.ಬಸವರಾಜ, ಈಶಪ್ಪ ಸೇರಿ ಅನೇಕ ಗಣ್ಯರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಸಚಿವ ಎನ್.ಎಸ್.ಬೋಸರಾಜ್, ಇರುವುದೊಂದೆ ಮಾನವ ಪಥ ಎಂದು ತಮ್ಮ ಕೀರ್ತನೆಗಳ ಮೂಲಕ ನಾಡಿನಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆಯ ಸಂದೇಶ ಸಾರಿದ ಮಹಾನ್ ಶ್ರೇೇಷ್ಠ ಸಂತ ಕನಕದಾಸರು ಎಂದರು.
ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಪಾಲಿಸಬೇಕು. ದೇಶದ ಎಲ್ಲ ಶರಣರು, ಸಂತರು, ದಾರ್ಶನಿಕರು ಮತ್ತು ಸಮಾಜ ಸುಧಾರಕರ ತತ್ವ- ಸಿದ್ಧಾಾಂತ ಒಂದೆಯಾಗಿದೆ. ಸಮಾಜದಲ್ಲಿ ಸರ್ವರೂ ಶಾಂತಿ ಸೌಹಾರ್ಧತೆಯಿಂದ ಸುಖವಾಗಿ ಇರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾಧಿಕಾರಿ ಕೆ.ನಿಖಿಲ್, ಎಸ್ಪಿ ಎಂ.ಪುಟ್ಟಮಾದಯ್ಯಘಿ, ಮುಖಂಡರಾದ ಕೆ.ಶಾಂತಪ್ಪಘಿ, ಜಯಣ್ಣಘಿ, ಕಡಗೋಲು ಆಂಜನೇಯ್ಯ, ಶೇಖರವಾರದ, ಮಹ್ಮದ್ ಶಾಲಂ, ಅಂಜನೇಯ್ಯಘಿ, ಹನುಮಂತ ವಕೀಲ, ಹನುಮಂತಪ್ಪ ಜಾಲಿಬೆಂಚಿ ಸೇರಿ ಅನೇಕರಿದ್ದರು.

