ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.21:
ೆಬ್ರವರಿ 24ರ ಮಂಗಳವಾರ ಬಳ್ಳಾಾರಿ ನಗರದ ಶ್ರೀ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವ ನಡೆಯಲಿದ್ದು, ಸಾರ್ವಜನಿಕರಿಗೆ ನಗರದ ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆೆ ಮಾಡಲಾಗಿದೆ ಎಂದು ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ತಿಳಿಸಿದ್ದಾಾರೆ.
ಮೋಕ ಭಾಗದಿಂದ ರಥೋತ್ಸವಕ್ಕೆೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಗಾಂಧಿನಗರ 1ನೇ ಕ್ರಾಾಸ್ ಹತ್ತಿಿರವಿರುವ ಶ್ರೀಮತಿ ಅಲ್ಲಂ ಸುಮಂಗಳಮ್ಮ ಕಾಲೇಜು ಆವರಣದಲ್ಲಿ, ಕಪ್ಪಗಲ್ ಕಡೆಯಿಂದ ರಥೋತ್ಸವಕ್ಕೆೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಕಪ್ಪಗಲ್ ರಸ್ತೆೆಯಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆೆ ಮಾಡಲಾಗಿದೆ.
ಸಿರುಗುಪ್ಪ ಹಾಗೂ ಹೊಸಪೇಟೆ ಭಾಗದಿಂದ ರಥೋತ್ಸವಕ್ಕೆೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಬಸವ ಭವನ ಹಾಗೂ ಜಿಲ್ಲಾಾ ಕೇಂದ್ರ ಕಾರಾಗೃಹದ ಮುಂದಿನ ಖಾಲಿ ಜಾಗದಲ್ಲಿ, ಬೆಂಗಳೂರು ರಸ್ತೆೆ ಹಾಗೂ ಅನಂತಪುರ ಕಡೆಯಿಂದ ರಥೋತ್ಸವಕ್ಕೆೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಕಮ್ಮಾಾ ಭವನದ ಮುಂದಿನ ಖಾಲಿ ಜಾಗ ಹಾಗೂ ಮುನಿಸಿಪಲ್ ಕಾಲೇಜು ಅವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆೆ ಮಾಡಲಾಗಿದೆ.
ಬಳ್ಳಾಾರಿ ನಗರದ ಯು.ಬಿ ಸರ್ಕಲ್, ಜಿಲ್ಲಾಾ ಕೇಂದ್ರ ಕಾರಾಗೃಹದ ಗೇಟ್, ಜಿಮ್ಖಾನ ಕ್ರಾಾಸ್, ತಾಳೂರು ರಸ್ತೆೆಯ ಬಾಲಾಜಿ ನರ್ಸಿಂಗ್ ಹೋಂ ಕ್ರಾಾಸ್, ಕಪ್ಪಗಲ್ ರಸ್ತೆೆಯ ಸಂಜೀವಿನಿ ಅಸ್ಪತ್ರೆೆಯ ಕ್ರಾಾಸ್ ಹಾಗೂ ಮೋಕಾ ರಸ್ತೆೆಯ ಗಾಂಧಿನಗರ 1ನೇ ಕ್ರಾಾಸ್ ಗಳ ಮೂಲಕ ದುರ್ಗಮ್ಮ ಗುಡಿ ಸರ್ಕಲ್ಗೆ ಬರುವ ಎಲ್ಲಾಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾಾರೆ.
ಬಳ್ಳಾರಿ : ೆ.24ಕ್ಕೆ ಕನಕದುರ್ಗಮ್ಮ ಸಿಡಿಬಂಡಿ

