ಸುದ್ದಿಮೂಲ ವಾರ್ತೆ ಕನಕಗಿರಿ, ಡಿ.24:
ಇಲ್ಲಿಯ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿಿದ್ದ ಪರಶುರಾಮ ಎಂಬುವವರು ದೂರು ದಾಖಲಿಸಲು ಬಂದ ಸಾರ್ವಜನಿಕರಿಂದ ಜೆರಾಕ್ಸ್ ಪೇಪರ್ ತರಿಸಿ ಕೊಡುವಂತೆ ಕೇಳಿದ ಹಿನ್ನೆೆಲೆ ಅವರನ್ನು ಎಸ್ಪಿಿ ಡಾ.ರಾಮ್ ಅರಸಿದ್ದಿ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾಾರೆ.
ತಾಲೂಕಿನ ಅರಳಹಳ್ಳಿಿ ನಿವಾಸಿಯೊಬ್ಬರು ತಮ್ಮ ಮಗಳ ಮಿಸ್ಸಿಿಂಗ್ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಬಂದಿದ್ದ ವೇಳೆ ಮೂರು ಬಂಡಲ್ ಜೆರಾಕ್ಸ್ ಪೇಪರ್ ತರಿಸುವಂತೆ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣದ ಬಗ್ಗೆೆ ಮಾಹಿತಿ ಪಡೆದ ಎಸ್ಪಿ ಅವರು ಪರಶೂರಾಮನವರನ್ನು ಸೇವೆಯಿಂದ ಅಮಾನತ್ತು ಮಾಡಿ ಆದೇಶಿಸಿದ್ದಾಾರೆ.

