ಸುದ್ದಿಮೂಲವಾರ್ತೆ
ಕೊಪ್ಪಳ ಜು 27: ಕನಕಗಿರಿಯ ವಿವಿಧ ಶಾಲಾ ಕಾಲೇಜು ಗೋಡೆಯ ಮೇಲೆ ವಿದ್ಯಾರ್ಥಿನಿಯರ ಕುರಿತು ಅಶ್ಲೀಲವಾಗಿ ಬರೆಯುತ್ತದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಕನಕಗಿರಿಯ ಮಹಿಬೂಬ ಸಿಕಲಗಾರ ಎಂಬ ಇಲ್ಲಿಯ ಅಪ್ರಾಪ್ತೆಗೆ ಮಾತನಾಡಿಸಲು ಯತ್ನಿಸಿದ್ದ. ಆಕೆ ಮಾತನಾಡಲು ನಿರಾಕರಿಸಿದ್ದರಿಂದ ಗೋಡೆ ಬರೆಯುವುದು. ಆಕೆಗೆ ಮೇಸೆಜ್ ಕಳುಹಿಸುತ್ತಿದ್ದ. ಜೂನ್ ತಿಂಗಳಲ್ಲಿ ಆಕೆ ಮದುವೆಗೆ ಬೇರೆ ಕಡೆ ಯತ್ನಿಸಿದ್ದ ಈ ಕಾರಣಕ್ಕಾಗಿ ಆಕೆ ವಿರುದ್ದ ಗೋಡೆ ಬರಹ ಬರೆಯುತ್ತಿದ್ದ.
ಇದು ಕನಕಗಿರಿಯಲ್ಲಿ ಅಶಾಂತಿ ಉಂಟಾಗುತ್ತಿದೆ. ಈ ಕುರಿತು ಪೊಲೀಸರು ತಂಡ ವಿಚಾರಣೆ ಮಾಡಿದಾಗ ಆತ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದ. ಆರೋಪಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ನಂತರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ವಿಚಾರಣೆ ಮಾಡಿದಾಗ ಎಲ್ಲವೂ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡ ತಿಳಿಸಿದ್ದಾರೆ.