ಸುದ್ದಿಮೂಲ ವಾರ್ತೆ
ಆನೇಕಲ್, ನ.30: ತಾಲೂಕಿನ ಶ್ರೀ ಭುವನೇಶ್ವರಿ ಕಾರು ಚಾಲಕರ ಕನ್ನಡ ಸಂಘದ ವತಿಯಿಂದ ಆನೇಕಲ್ ಪಟ್ಟಣದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಯುವ ಘಟಕದ ಅಧ್ಯಕ್ಷರಾದ ಮುತಗಟ್ಟಿ ಅಂಬರೀಶ್ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಮತ್ತು ಪುಷ್ಪ ನಮನವನ್ನು ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆನೇಕಲ್ ಪುರಸಭಾ ಮುಖ್ಯ ಅಧಿಕಾರಿ ಆನೇಕಲ್ ರಾಜೇಶ್ ಅವರು ಧ್ವಜರೋಹಣ ಮಾಡಿ ನಂತರ ಸಾವಿರಾರು ಮಂದಿಗೆ ಶ್ರೀ ಭುವನೇಶ್ವರಿ ಕಾರು ಚಾಲಕರ ಕನ್ನಡ ಸಂಘದ ವತಿಯಿಂದ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಸಾಧಿಕ್, ಲಕ್ಷ್ಮೀನಾರಾಯಣ್, ಅಂಬರೀಶ್ ರವೀಂದ್ರ ಅಮನ್ ಮುನಿರಾಜು ವೆಂಕಟೇಶ್ ಗೋವಿಂದರಾಜು ನವಾಜ್ ನರಸಿಂಹ ಹರೀಶ್ ಆನಂದ್ ರಂಗಿ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.