ಸುದ್ದಿಮೂಲ ವಾರ್ತೆ
ಆನೇಕಲ್, ಸೆ.7: ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುತ್ತಾರೆ ಎಂದು ಸಿಮೆನ್ಸ್ ಕಂಪನಿಯ ಸಿಡಿಓ ಚಂದ್ರಶೇಖರ್ ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ಇಂಡ್ಲವಾಡಿ ಗ್ರಾಮ ಪಂಚಾಯತಿ ವತಿಯಿಂದ ಇಂಡ್ಲವಾಡಿ ಪ್ರೌಢಶಾಲೆಯ 22 -23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕನ್ನಡ ಶಾಲೆಗಳು ಇನ್ನಷ್ಟು ಮೇಲ್ದರ್ಜೆಗೆ ಏರಿಸಿ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇರುವುದಿಲ್ಲ. ಎಲ್ಲಾ ಮಕ್ಕಳು ಉನ್ನತ ವ್ಯಾಸಂಗವನ್ನು ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂದು ಹೇಳಿದರು
ಸಮಾಜ ಸೇವಕ ಶಾಮರಾಜ ಮಾತನಾಡಿ, ವಿದ್ಯಾವಂತನಾಗಿ ಗೌರವದಿಂದ ಯಾವುದೇ ಕೆಲಸ ಮಾಡಿದರು ದೇಶ ಸೇವೆ ಮಾಡಿದಂತೆಯೇ. ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿದವರಲ್ಲಿ ಸ್ವಾವಲಂಬನೆ ಹೆಚ್ಚಿರುತ್ತದೆ ಎಂದರು.
ಪಂಚಾಯತಿ ಸದಸ್ಯರಾದ ನೀಲ ವಸಣ್ಣ ಮಾತನಾಡಿ, ಇಂದು ವಿದ್ಯಾವಂತರೇ ಹೆಚ್ಚು ಅಕ್ರಮ ಅನ್ಯಾಯಗಳಲ್ಲಿ ತೊಡಗಿಸಿಕೊಂಡಿರುವುದು ನೋವಿನ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಆದೂರು ಪ್ರಕಾಶ್ ಸದಸ್ಯರಾದ ಶಾಲೆಯ ಮುಖ್ಯೋಪಾಧ್ಯಾಯರಾದ ಶೋಭ ಬಗ್ಗನದೊಡ್ಡಿ ಮುನಿರಾಜು, ಎಸ್ ಬಿ ಎಂ ಮಾರ್ಕೆಟಿಂಗ್ ಮ್ಯಾನೇಜರ್ ಸುರೇಶ್ ಕುಮಾರ್, ಎಸ್ ಬಿ ಎಂ ಗೋಪಿ, ವ್ಯಾಪಾರಿ ನಾರಾಯಣ್ ಕನ್ನಯ್ಯ ಕುಮಾರ್, ಶಿಕ್ಷಕರಾದ ಪರಿಮಳ ಶಶಿಕಾಂತ್ ಪಾರ್ವತಿ ಶರವಣ, ಓಬಿಎಲ್ಎಪ್ ಚನ್ನಕೇಶವ ಹಾಗೂ ಕಸಾಪ ಪ್ರತಿನಿಧಿ ಶ್ರೀನಿವಾಸ್ ಅಪ್ಸರ್ ಆಲಿ ಖಾನ್, ಚುಟುಕು ಶಂಕರ್ ಹಾಜರಿದ್ದರು.