ಸುದ್ದಿಮೂಲ ವಾರ್ತೆ ಯಾದಗಿರಿ, ನ.30:
ಸರ್ಕಾರ ಮಾಡದಿದ್ದರೂ ಈ ಬಾರಿ ಬರುವ ವರ್ಷ ೆಬ್ರವರಿ ಮಾರ್ಚ್ ಒಳಗಾಗಿ ಯಾದಗಿರಿ ಉತ್ಸವ ಆಯೋಜನೆ ಮಾಡಲು ಸನ್ನದ್ಧರಾಗುವಂತೆ ಸುರಪುರದ ಮಾಜಿ ಶಾಸಕ, ಮಾಜಿ ಸಚಿವ ನರಸಿಂಹನಾಯಕ ರಾಜೂಗೌಡ ಕರವೇ ಮುಖಂಡರಿಗೆ ಸೂಚನೆ ನೀಡಿದರು.
ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಮಂಟಪದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಾ ಘಟಕದ ವತಿಯಿಂದ ಆಯೋಜಿಸಿದ್ದ ಭವ್ಯ ಗಿರಿನಾಡು ಉತ್ಸವ-2025 ರಾಜ್ಯೋೋತ್ಸವ ಸಮಾರಂಭ ಉದ್ಘಾಾಟಿಸಿ ಮಾತನಾಡಿದ ಅವರು, ಜಿಲ್ಲೆೆಯಾದಾಗಿನಿಂದ ಸರ್ಕಾರದ ವತಿಯಿಂದ ಜಿಲ್ಲಾಾ ಉತ್ಸವ ಮಾಡುವ ಕುರಿತು ಯಾವುದೇ ಪ್ರಯತ್ನಗಳು ಲಕಂಡಿಲ್ಲ. ಈ ಬಾರಿ ನೀವು (ಕರವೇ ಸಿದ್ದವಾಗಿ) ನಾವು ಜೊತೆಯಾಗಿ ಭವ್ಯ ಯಾದಗಿರಿ ಉತ್ಸವ ನಡೆಸಿಯೇ ಬಿಡೋಣ ಎಂದು ಘೋಷಣೆ ಮಾಡಿದರು.
ಅದ್ದೂರಿಯಾಗಿ ಕನ್ನಡ ಚಿತ್ರನಟರನ್ನು ಕರೆಸಿ ಮಾದರಿಯಾಗಿ ಯಾದಗಿರಿ ಉತ್ಸವ ಮಾಡಿಯೇ ಬಿಡೋಣ ಎಂದು ಅವರು ಘೋಷಣೆ ಮಾಡಿದರು. ಕನ್ನಡ ನಾಡು ನುಡಿ ರಕ್ಷಣೆಗಾಗಿ ರಾಜ್ಯದಲ್ಲಿ ಕರವೇ ಮಾಡುತ್ತಿಿರುವ ಕಾರ್ಯ ಶ್ಲಾಾಘನೀಯವಾಗಿದೆ, ಕರವೇ ಇರದಿದ್ದರೆ ಇಂದು ಕನ್ನಡಕ್ಕೆೆ ಇಂದು ಸಿಗುತ್ತಿಿರುವ ಗೌರವ ಸ್ಥಾಾನ ಮಾನ ಸಿಗದ ಪರಿಸ್ಥಿಿತಿ ನಿರ್ಮಾಣವಾಗುತ್ತಿಿತ್ತು. ಅಷ್ಟರ ಮಟ್ಟಿಿಗೆ ಕರವೇ ನಾರಾಯಣಗೌಡ ಮತ್ತಿಿತರರು ಸೇನಾನಿಗಳಂತೆ ನಿಂತು ಕನ್ನಡ ಉಳಿಸಿದ್ದಾಾರೆ ಎಂದು ಮುಕ್ತ ಕಂಠದಿಂದ ಶ್ಲಾಾಘಿಸಿದರು.
ಕಲಾವಿದರಿಗೆ ಪ್ರೋೋತ್ಸಾಾಹ ಅಗತ್ಯ ಈ ನಿಟ್ಟಿಿನಲ್ಲಿ ಎಲ್ಲರೂ ನಮ್ಮ ಉತ್ತರ ಕರ್ನಾಟಕ ಕಲಾವಿದರ ಚಿತ್ರಗಳನ್ನು ಥೇಟರಿಗೆ ಹೋಗಿ ನೋಡಿ ಎಂದು ಸಲಹೆ ನೀಡಿದ ಅವರು ಯಾದಗಿರಿಲಿ ಚಿತ್ರ ಮಂದಿರ ಇಲ್ಲ ಎಂಬುದು ಗೊತ್ತಿಿದೆ ಇದಕ್ಕಾಾಗಿ ಚಿತ್ರಮಂದಿರ ನಿರ್ಮಾಣ ಮಾಡಲು ನಾದ್ ಅಣ್ಣ ನೀನು ಜಾಗೆ ಕೊಡು ಜಿಲ್ಲೆೆಯಲ್ಲಿ ಚಿತ್ರಮಂದಿರಗಳು ನಿರ್ಮಾಣ ಮಾಡೇಬಿಡೋಣ ಎಂದೂ ವೇದಿಕೆ ಮೇಲಿದ್ದ ದೇವಿಂದ್ರ ನಾದ್ ಅವರತ್ತ ನೋಡಿ ನುಡಿದರು.
ಸಾನ್ನಿಿಧ್ಯ ವಹಿಸಿದ್ದ ಅಬ್ಬೆೆತುಮಕೂರಿನ ವಿಶ್ವಾಾರಾಧ್ಯ ಮಠದ ಕಿರಿಯ ಪೀಠಾಧಿಪತಿ ಶಿವಶೇಖರ ಸ್ವಾಾಮೀಜಿ ಮಾತನಾಡಿ ಕನ್ನಡ ರಕ್ಷಣೆ ಹಾಗೂ ನಾಡು ನುಡಿ ನೆಲ ಜಲ ರಕ್ಷಣೆಯ ವಿಷಯದಲ್ಲಿ ರಾಜಿಯಿಲ್ಲದ ಹೋರಾಟವನ್ನು ಕರವೇ ಮಾಡುತ್ತಿಿದೆ ಸಾಧಕರನ್ನು ಗುರ್ತಿಸುತ್ತಿಿದೆ ಭವ್ಯ ಸಮಾರಂಭ ಆಯೋಜನೆ ಮಾಡುತ್ತಿಿದೆ ಇದು ಹೀಗೆಯೆ ಮುಂದುವರೆಯಲಿ ಎಂದು ನುಡಿದರು.
ಸಮ್ಮುಖ ವಹಿಸಿದ್ದ ಬೆಂಗಳೂರಿನ ಪಾಲನಹಳ್ಳಿಿ ಮಠದ ಡಾ.ಸಿದ್ದರಾಜು ಸಾಮೀಜಿ ಮಾತನಾಡಿ, ಹೋರಾಟದ ಜೊತೆಗೆ ಕನ್ನಡ ನಾಡು ನುಡಿ ಉಳಿಸುವ ಕೆಲಸದಲ್ಲಿ ತೊಡಗಿಕೊಂಡ ಕರವೇ ಬೃಹತ್ ಮಟ್ಟದ ಸಾಂಸ್ಕೃತಿಕ ಉತ್ಸವಗಳು ನಡೆಸುತ್ತಿಿರುವುದು ಮಾದರಿಯಾಗಿದೆ, ಕರವೇ ಹೋರಾಟದ ಹಾದಿ ಹಾಗೂ ಸಾಮಾಜಿಕ ಜವಾಬ್ದಾಾರಿ ಶ್ಲಾಾಘನೀಯ, ಸುರಪುರ ದೊರೆಗಳ ಕೊಡುಗೆ ಯಾದಗಿರಿ ಕೋಟೆಯ ಇತಿಹಾಸದ ಬಗ್ಗೆೆ ಶ್ರೀಗಳು ಮೆಲುಕು ಹಾಕಿ ಇತಿಹಾಸ ಮರೆಯಬಾರದು ಎಂದು ಸಲಹೆ ನೀಡಿದರು.
ಆರಂಭದಲ್ಲಿ ಪ್ರಾಾಸ್ತಾಾವಿಕ ಮಾತನಾಡಿದ ಕರವೇ ಜಿಲ್ಲಾಾಧ್ಯಕ್ಷ ಟಿ.ಎನ್. ಭೀಮುನಾಯಕ ಯಾದಗಿರಿ ಜಿಲ್ಲೆೆ ಕೊರತೆ ಬೇಡಿಕೆಗಳ ಕುರಿತು ನಿರಂತರ ಹೋರಾಟ ನಡೆಯುತ್ತದೆ ಯಾವುದೇ ರಾಜಿ ಇಲ್ಲ ಎಲ್ಲ ಪಕ್ಷದ ಮುಖಂಡರಿಗೂ ಕರವೇ ಗೌರವಿಸುತ್ತದೆ. ಕೆಲಸ ಮಾಡದೇ ಇದ್ದಾಾಗ ಎಚ್ಚರಿಸುವ ಕೆಲಸ ಮಾಡುತ್ತದೆ ಎಂದರು.
ಜಿಲ್ಲಾಾ ಕೇಂದ್ರವಾಗಿ 16 ವರ್ಷಗಳಾಗುತ್ತಿಿದ್ದರೂ ಇನ್ನು ಸುಮಾರು 14ಕ್ಕೂ ಹೆಚ್ಚು ರೈಲುಗಳು ನಿಲುಗಡೆ ಆಗುತ್ತಿಿಲ್ಲ ಈ ಕುರಿತು ಹೋರಾಟ ನಿರಂತರ ನಡೆಯುತ್ತದೆ ಎಂದು ಪ್ರಕಟಿಸಿ, ಗಡಿ ಭಾಗದ ಹಳ್ಳಿಿಗಳು ಇನ್ನು ತೆಲುಗಿನ ಪಲ್ಲಿಗಳಾಗಿಯೇ ಉಳಿದಿವೆ ಇವುಗಳ ಬದಲಾವಣೆಗೆ ಪ್ರಸಕ್ತ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ದನಿ ಎತ್ತುವ ಕೆಲಸ ಮಾಡಬೇಕೆಂದು ಜನಪ್ರತಿನಿಧಿಗಳಿಗೆ ಆಗ್ರಹಿಸಿದರು.
ವಿಶೇಷ ಆಹ್ವಾಾನಿತರಾಗಿ ವಿವಿಧ ಸಮುದಾಯಗಳ ಮುಖಂಡರಾದ ಹಣುಮೇಗೌಡ ಬೀರನಕಲ್, ರಾಚನಗೌಡ ಮುದ್ನಾಾಳ, ಶರಣಪ್ಪ ಮಾನೇಗಾರ, ದೇವೇಂದ್ರನಾಥ ನಾದ್, ಕರವೇ ರಾಜ್ಯ ಸಂಚಾಲಕ ಸಂತೋಷ ಪಾಟೀಲ್ ಡಂಬಳ, ಚಂದ್ರಶೇಖರ ವಜ್ಜಲ್, ಡಾ. ಭೀಮಣ್ಣ ಮೇಟಿ, ಯುಡಾ ಅದ್ಯಕ್ಷ ಬಾಬುರಾವ ಕಾಡ್ಲೂರ, ಸುದರ್ಶನ ನಾಯಕ, ವಿಶ್ವನಾಥರಡ್ಡಿಿ ಗೊಂದಡಿಗಿ, ಬಸ್ಸುಗೌಡ ಬಿಳ್ಹಾಾರ, ಶ್ರೀಧರ ಸಾಹುಕಾರ, ಶರಣಪ್ಪ ಮಡಿವಾಳ, ಜಹೀರ್ ಸವೇರಾ, ಮಹೇಶ ಅವಂಟಿ, ವಿಜಯಕುಮಾರ ಕಡೇಚೂರ, ಅನಿಲ್ ಹೆಡಗಿಮುದ್ರಿಿ ವೇದಿಕೆ ಮೇಲಿದ್ದರು. ಈ ಸಮಾರಂಭದಲ್ಲಿ ಮಲ್ಲು ಮಾಳಿಕೇರಿ, ಅಂಬ್ರೇೇಷ್ ಹತ್ತಿಿಮನಿ, ಸಂತೋಷ ನಿರ್ಮಲಕರ್, ವಿಶ್ವಾಾರಾಜ ಪಾಟೀಲ್, ಪ್ರಕಾಶ ಪಾಟೀಲ್, ಚೌಡಯ್ಯ ಬಾವೂರ, ಅಶೋಕ ನಾಯಕ, ಜಗನ್ನಾಾಥ, ವೆಂಕಟೇಶ ನಾಯಕ ಬೈರಿಮಡ್ಡಿಿ, ಶರಣಬಸಪ್ಪ ಯಲ್ಹೇರಿ, ಅಬ್ದುಲ್ ಚಿಗಾನೂರ, ಬಸವರಾಜ ಚೆನ್ನೂರ, ಬಸ್ಸು ನಾಯ್ಕೋಡಿ ಪಾಲ್ಗೊೊಂಡರು. ಅಮರಯ್ಯ ಸ್ವಾಾಮಿ ಜಾಲಿಬೆಂಚಿ ನಿರೂಪಿಸಿದರು. ಶರಣು ಗಡೇದ ವಂದಿಸಿದರು.
ಗಿರಿನಾಡು ರತ್ನ ಪ್ರಶಸ್ತಿಿ:
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀನಿವಾಸ ಜಾಲವಾದಿ (ಸಾಹಿತ್ಯ), ಅಶೋಕ ಸಾಲವಾಡಿಗಿ (ಪತ್ರಿಿಕಾ ರಂಗ), ಚನ್ನಪ್ಪ ಆನೆಗುಂದಿ (ಸಾಮಾಜಿಕ ಹೋರಾಟ), ನಿಂಗಮ್ಮ ಮಡಿವಾಳ (ನಾಟಿ ವೈದ್ಯಕೀಯ), ಹಾಗೂ ಕುಮಾರಿ ನಾಗಿಣಿ (ಕ್ರೀೆಡಾ) ಅವರಿಗೆ ‘‘ಗಿರಿನಾಡು ರತ್ನ’’ ಪ್ರಶಸ್ತಿಿ ಪ್ರದಾನ ಮಾಡಲಾಯಿತು.
ರಾಜ್ಯೋೋತ್ಸವ ಪುರಸ್ಕೃತರಿಗೆ ಸನ್ಮಾಾನ:
ಪ್ರಸಕ್ತ ಸಾಲಿನ ರಾಜ್ಯೋೋತ್ಸವ ಪ್ರಶಸ್ತಿಿ ಪಡೆದಿರುವ ಮಲ್ಲಿಕಾರ್ಜುನ ನಿಂಗಪ್ಪ, ಬಸಣ್ಣ ಮೋನಪ್ಪ ಬಡಿಗೇರ್ ಅವರಿಗೆ ವಿಶೇಷ ಸನ್ಮಾಾನ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
ನಂತರ ಜರುಗಿದ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಖ್ಯಾಾತ ಟಿವಿ ಶೋಗಳಾದ ಕಾಮಿಡಿ ಕಿಲಾಡಿಗಳು, ಕಲಾವಿದರಾದ ವಾಣಿ, ಹರೀಶ ಹಿರಿಯೂರ, ಹಿತೇಶ, ಸಮನ್ವಿಿ ರೈ, ಶರಥಿ ಪಾಟೀಲ್, ದ್ಯಾಾಮೇಶ, ಮ್ಯೂಜಿಕ್ ಮೈಲಾರಿ, ಲಕ್ಷ್ಮೀ ವಿಜಯಪುರ ಕಿಕ್ಕಿಿರಿದು ನೆರೆದಿದ್ದ ಪ್ರೇೇಕ್ಷಕರನ್ನು ಅದ್ದೂರಿಯಾಗಿ ರಂಜಿಸಿದರು.
ಕರವೇ ಹೋರಾಟ, ಸಾಮಾಜಿಕ ಜವಾಬ್ದಾಾರಿ ಶ್ಲಾಾಘನೀಯ: ಪಾಲನಳ್ಳಿ ಶ್ರೀ ಬರುವ ಮಾರ್ಚ್ನೊಳಗೆ ಅದ್ದೂರಿಯಾಗಿ ಯಾದಗಿರಿ ಜಿಲ್ಲಾ ಉತ್ಸವ ಆಯೋಜನೆ: ಮಾಜಿ ಸಚಿವ ರಾಜೂಗೌಡ ಘೋಷಣೆ

