ಸುದ್ದಿಮೂಲ ವಾರ್ತೆ ನವದೆಹಲಿ, ಡಿ.19
ಗ್ರಾಾಮೀಣ ಬಡ ಕುಟುಂಬಗಳಿಗೆ 100 ದಿನಗಳ ಖಾತರಿಯ ಜೀವನೋಪಾಯ ಒದಗಿಸುತ್ತಿಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋೋಗ ಖಾತರಿ ಕಾಯ್ದೆೆ ಯೋಜನೆ ಕೇಂದ್ರ ಸರ್ಕಾರ ಒಂದು ವೇಳೆ ಕೊನೆಗೊಳಿಸಿದರೆ ಜನರು ನಿಮ್ಮ ಪಕ್ಷದ ನಾಯಕರನ್ನು ರಸ್ತೆೆಗಳಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಹಿರಿಯ ಕಾಂಗ್ರೆೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರಕ್ಕೆೆ ಎಚ್ಚರಿಕೆ ನೀಡಿದರು.
ನರೇಗಾ ಬದಲು ವಿಕಸಿತ ಭಾರತ್ ಗ್ಯಾಾರಂಟಿ ಾರ್ ರೋಜ್ಗಾಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ, 2025ರ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅವರು, ಬಿಜೆಪಿ ನೇತೃತ್ವದ ಸರ್ಕಾರವು ಪ್ರಸ್ತಾಾವಿತ ಶಾಸನದ ಮೂಲಕ ಬಡವರನ್ನು ದುರ್ಬಲಗೊಳಿಸಲು, ಗುಲಾಮರನ್ನಾಾಗಿ ಇರಿಸಲು ಪ್ರಯತ್ನಿಿಸುತ್ತಿಿದೆ ಎಂದು ಆರೋಪಿಸಿದರು.
ಇದು ಬಡವರಿಗೆ ಸಂಬಂಧಿಸಿದ ಯೋಜನೆ ನರೇಗಾ ಬಹಳ ದೊಡ್ಡ ಮತ್ತು ಮಹತ್ವದ ಯೋಜನೆ. ನಾವು ಅದನ್ನು ಹಗುರವಾಗಿ ಪರಿಗಣಿಸಬಾರದು. ಬಡವರಿಗೆ ಸಂಬಂಧಿಸಿದ ಯೋಜನೆ ಆಗಿರುವುದರಿಂದ ಅದನ್ನು ತಿರುಚುವುದು ಒಳ್ಳೆೆಯದಲ್ಲ. ನೀವು ಹಳೆಯ ಯೋಜನೆ ಬದಲಾಯಿಸಲು ಕೆಲಸ ಮಾಡುತ್ತಿಿರುವುದು ಒಳ್ಳೆೆಯದಲ್ಲ. ಹಾಗೆ ಮಾಡಿದಲ್ಲಿ ಜನರು ನಿಮ್ಮನ್ನು ರಸ್ತೆೆಗಳಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಖರ್ಗೆ ಹೇಳಿದರು.

