ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 16: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ಮೂರು ದಿನವಾಗಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದರೂ ಸಹ ಮುಖ್ಯಮಂತ್ರಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
#KarnatakaCM ವಿಷಯ ಟ್ರೆಂಡ್ ಆಗಿದ್ದು, 18 ಸಾವಿರಕ್ಕೂ ಅಧಿಕ ಜನ ಈ ವಿಷಯದ ಮೇಲೆ ಟ್ವೀಟ್, ಟ್ರೋಲ್ಗಳನ್ನು ಮಾಡಿದ್ದಾರೆ.
ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಬ್ಬರೂ ನಾಯಕರ ಹಳೆಯ ಫೋಟೊಗಳು, ಟ್ವೀಟ್ಗಳು, ವಿಡಿಯೋಗಳನ್ನು ಇಟ್ಟುಕೊಂಡು ತರಹೇವಾರಿ ಕಮೆಂಟ್ಗಳನ್ನು ಮಾಡಲಾಗುತ್ತಿದೆ.
ಸಿದ್ದರಾಮಯ್ಯ ಅವರ ಹಳೆಯ ವಿಡಿಯೋಗಳು ಟ್ರೆಂಡ್ ಆಗಿವೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಚಿಕ್ಕಮಗಳೂರು ಜಿಲ್ಲೆ ತರೀಕರೆಯ ತಾಲ್ಲೂಕಾ ಪಂಚಾಯತ್ ಸದಸ್ಯೆ ಗಿರಿಜಾ ಶ್ರೀನಿವಾಸ್ ಅವರು ವೇದಿಕೆ ಏರಿದವರೇ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡು ಮುತ್ತು ಕೊಡುತ್ತಾರೆ. ಇದು ಆ ವೇಳೆ ವೈರಲ್ ಆಗಿತ್ತು. ಅದೇ ವಿಡಿಯೋವನ್ನು ಮತ್ತೆ ಹಂಚಿಕೊಂಡ ಕೆಲವರು ಇವರೇ ನೋಡಿ ಕರ್ನಾಟಕದ ಮುಂದಿನ ಸಿಎಂ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ನಾ ನಾಯಕಿ ನಡೆದ ಮಹಿಳಾ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಸಭೆ ಮುಗಿಸಿ ವಾಪಸ್ ಬರಬೇಕಾದರ ಕಾರ್ಯಕ್ರಮ ನಿರೂಪಕಿ ಯಾರೆಂದು ದಿಟ್ಟಿಸಿ ನೋಡಿ ಅಲ್ಲಿಂದ ಹೊರನಡೆಯುತ್ತಾರೆ. ಆ ವೀಡಿಯೋ ಬಾರಿ ಟ್ರೆಂಡ್ ಆಗಿತ್ತು. ಅದಕ್ಕೆ ‘ದಿ ಬಾಯ್ಸ್’ ಟ್ಯಾಗ್ ಸಹ ಜೋಡಿಸಲಾಗಿತ್ತು. ಈ ವಿಡಿಯೋವನ್ನು ಸಹ ತೊರಿಸಿ ಕರ್ನಾಟಕದ ಮುಂದಿನ ಸಿಎಂ ಎಂದು ಟ್ರೋಲ್ ಮಾಡಲಾಗಿದೆ.
These are your Karnataka CM candidates 🤣🤣 pic.twitter.com/OQdzJrastb
— MJ (@MJ_007Club) May 10, 2023
ಇಷ್ಟು ಸಿದ್ದರಾಮಯ್ಯ ಅವರ ವಿಡಿಯೋಗಳು ವೈರಲ್ ಆಗಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿಡಿಯೋಗಳಿಗೂ ಏನೂ ಕಮ್ಮಿ ಇಲ್ಲ.
ಇತ್ತೀಚೆಗೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಬಳಿಕ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲು ಶಿವಕುಮಾರ್ ರಾಮನಗರಕ್ಕೆ ತೆರಳಿದ್ದರು. ಆಗ ಅಭಿಮಾನಿಗಳು ಅವರನ್ನು ಕಾರಿನಲ್ಲಿಯೇ ಮೆರವಣಿಗೆ ಮಾಡಿದರು. ಹಾರ ತೆಗೆದು ಹಾಕುತ್ತಿದ್ದ ಶಿವಮಾರ್ ಕೈಸನ್ನೆಯೊಂದನ್ನು ಮಾಡುತ್ತಾರೆ. ಆದರ ಸೂಚನೆ ಎಂದರೆ ‘ಬಾಟಲ್’ ರೆಡಿ ಇವೆ ಎಂಬ ಅರ್ಥ ಬರುವಂತೆ ಇದ್ದು, ಆ ವಿಡಿಯೋ ಕೆಲ ನಿಮಿಷಗಳಲ್ಲೇ ವೈರಲ್ ಆಗಿತ್ತು. ಅದೂ ಸಹ ಮತ್ತೊಮ್ಮೆ ಹಂಚಿಕೊಳ್ಳಲಾಗುತ್ತಿದೆ.
ಇನ್ನು ಕಳೆದ ವರ್ಷ ನಡೆದ ಮೇಕೆದಾಟು ಪಾದಯಾತ್ರೆ ಮಾಡಿ ತೀವ್ರ ಸುಸ್ತಾಗಿದ್ದ ಶಿವಕುಮಾರ್ ನಡೆಯುವಾಗ ಸ್ವಲ್ಪ ಜೋಲಿಯಾಗಿದ್ದಾರೆ. ಅದನ್ನೂ ಸಹ ಕೆಲವರು ಟ್ವೀಟ್ ಮಾಡಿ ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿ ಎಂಬರ್ಥದಲ್ಲಿ ಟ್ರೋಲ್ ಮಾಡಿದ್ದಾರೆ.
ಇದಷ್ಟೇ ಅಲ್ಲದೆ, ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿದ್ದೆ ಮಾಡುತ್ತಿರುವ ದೃಶ್ಯಗಳು, ನರೇಂದ್ರ ಮೋದಿ ಅವರು ಸಹಿತ ಪ್ರಮುಖ ನಾಯಕರೆಲ್ಲಾ ಭಾರಿ ಪ್ರಚಾರ ಮಾಡಿದರೂ ಬಿಜೆಪಿ ನೆಲಕ್ಕಚ್ಚಿದ್ದು ಸಹ ಟ್ರೋಲ್ಗೆ ಒಳಲಾಗುತ್ತಿವೆ.
ಮೋಹಿತ ಚೌಹನ್ ಟ್ವೀಟ್ ಮಾಡಿ, ಡಿಕೆ ಶಿವಕುಮಾರ್ ಅವರು ಹೇಳಿರುವ ಹೇಳಿಕೆಗಳ ರತ್ನಗಳು!!
1. ಕಾಂಗ್ರೆಸ್ ತಾಯಿ, ತಾಯಿ ಮಗುವಿಗೆ ಎಲ್ಲವನ್ನೂ ಕೊಡುತ್ತಾಳೆ 2. ನನಗೆ ಯಾವುದೇ ಶಾಸಕರಿಲ್ಲ, ಕಾಂಗ್ರೆಸ್ಸಿಗೆ 135 ಶಾಸಕರಿದ್ದಾರೆ 3. ನಾನು ಎಂದಿಗೂ ಬ್ಲ್ಯಾಕ್ಮೇಲ್ ಮಾಡಿಲ್ಲ, ನಾನು ಹಾಗೆ ಮಾಡುವುದಿಲ್ಲ 4. 2024 ರಲ್ಲಿ 20+ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ನಮ್ಮ ಗಮನ ಎಂದಿದ್ದಾರೆ.
Classic Mojito ಇದರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದೇ ಖುಷಿ ಇಬ್ಬರಲ್ಲಿ ಯಾರು ಬೇಕಾದರು ಸಿ.ಎಂ ಆಗಲಿ ಎಂಬಂತೆ ಮಾಹಿತಿಯನ್ನು ಅರಿಬಿಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದಕ್ಕೆ ಅಭಿನಂದನೆಯನ್ನು ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಪ್ರಬುದ್ಧ ದೊಡ್ಡ ನಾಯಕರು ಮತ್ತು ಸಮರ್ಪಿತ ಕಾಂಗ್ರೆಸ್ ವ್ಯಕ್ತಿ. ಕಾಂಗ್ರೆಸ್ ಸರಕಾರವನ್ನು ಆಯ್ಕೆ ಮಾಡಿದ್ದಕ್ಕಾಗಿ ಕನ್ನಡಿಗರಿಗೆ ಅಭಿನಂದನೆಗಳು.
Che ಕೃಷ್ಣ,.. ಮತ್ತು #MyCmSiddaramaiah Sikandar – ಸಿಕಂದರ್., ಈ ಎರಡು ಟ್ವಿಟರ್ನಲ್ಲಿ ಮಂದಿನ ಸಿ.ಎಂ ಸಿದ್ದರಾಮಯ್ಯ ಅಂತ ಹೇಳಿ ಡಿ.ಕೆ ಶಿವಕುಮಾರ್ ಅವರು ವೇದಿಕೆಯೊಂದರಲ್ಲಿ ಮಾತನಾಡುತ್ತಿರು ವಿಡಿಯೋವೊಂದಕ್ಕೆ ಕಣ್ಣಿನಲ್ಲಿ ಬೆಂಕಿ ಬರುವ ರೀತಿ ವಿಡಿಯೋ ಎಡಿಟ್ ಮಾಡಿ ಅಪ್ಲೊಡ್ ಮಾಡಿದ್ದಾರೆ.