ಸುದ್ದಿಮೂಲ ವಾರ್ತೆ ಬೆಂಗಳೂರು , ಅ.09:
ನಮ್ಮ ಸರ್ಕಾರ ಕೇವಲ ಗ್ಯಾಾರಂಟಿ ಯೋಜನೆಗಳಿಗೆ ಸೀಮಿತವಾಗದೆ ರೈತರಿಗಾಗಿ 1000 ಕೋಟಿ ಗೂ ಹೆಚ್ಚಿಿನ ಸಬ್ಸಿಿಡಿ ನೀಡಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಾಮಿ ಹೇಳಿದರು.
ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮದ (ಕೆಪೆಕ್) ವತಿಯಿಂದ ನಗರದ ಟೌನ್ಹಾಲ್ನಲ್ಲಿ ಗುರುವಾರ ಏರ್ಪಡಿಸಿದ್ದ ರೈತ ಉತ್ಪಾಾದಕ ಸಂಸ್ಥೆೆಗಳ ಸಮ್ಮೇಳನ ಉದ್ಘಾಾಟಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಬಗ್ಗೆೆ ರೈತರಿಗೆ ಆಸಕ್ತಿಿ ಇದ್ದರಷ್ಟೇ ಅಂತಹ ಯೋಜನೆಗಳು ಯಶ್ವಸಿಯಾಗುತ್ತದೆ ಎಂದು ಹೇಳಿದರು.
ಐದು ಗ್ಯಾಾರಂಟಿಗಳನ್ನು ಕೊಟ್ಟು ಆರಾಮವಾಗಿಲ್ಲ. ಹಿಂದಿನ ಸರ್ಕಾರದ ಹಾಲಿನ ಬಾಕಿ ತೀರಿಸಿದ್ದೇವೆ, ಬಿಜೆಪಿ- ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಮಾಡಿದ ಸಹಕಾರ ಸಾಲ ಮನ್ನಾಾದ ಬಾಕಿಯನ್ನೂ ಇನ್ನೂ ತೀರಿಸುತ್ತಿಿದ್ದೇವೆ. ಇವುಗಳ ಜೊತೆಗೆ ಈಗ ರೈತರಿಗೆ, ಯುವ ಉದ್ಯಮಿಗಳಿಗೆ ಸಾಕಷ್ಟು ಸಬ್ಸಿಿಡಿ ಮತ್ತು ಸಾಲದ ನೆರವು ಒದಗಿಸುವ ಮೂಲಕ ಪ್ರೋೋತ್ಸಾಾಹ ನೀಡುವ ಕೆಲಸವನ್ನೂ ಮಾಡಲಾಗುತ್ತಿಿದೆ ಎಂದರು.
ಕೃಷಿ ಇಲಾಖೆಯಿಂದಲೇ ಈವರೆಗೆ 1000 ಕೋಟಿ ರೂ. ಗೂ ಹೆಚ್ಚಿಿನ ಮೊತ್ತದ ಸಹಾಯಧನ ವಿತರಿಸಲಾಗಿದೆ. ಬಿತ್ತನೆ ಬೀಜ, ಯಂತ್ರೋೋಪಕರಣ, ರಸಗೊಬ್ಬರ, ಔಷಧಿಗಳಿಗೆ ಸಹಾಯಧನ ಹೀಗೆ ವಿವಿಧ ಸಹಾಯಧನಗಳನ್ನು ಯಾವುದೇ ಕೊರತೆ ಇಲ್ಲದೆ ವಿತರಿಸಲಾಗಿದೆ ಎಂದು ಹೇಳಿದರು.
3 ಕೋಟಿ ವರೆಗೆ ಸಬ್ಸಿಿಡಿ:
ಕಪೆಕ್ ಸಂಸ್ಥೆೆಯಿಂದ ಪಿಎಂಎ್ಎಂಇ ಯೋಜನೆ ಮೂಲಕ 15 ಲಕ್ಷ ರೂ.ವರೆಗೆ ಸಬ್ಸಿಿಡಿ ಮತ್ತು 15 ಲಕ್ಷ ರೂ.ವರೆಗೆ ಸಾಲಸೌಲಭ್ಯ ಒದಗಿಸಲಾಗುತ್ತದೆ. ಈವರೆಗೆ 7000ಕ್ಕೂ ಅಧಿಕ ಉದ್ಯಮಿಗಳಿಗೆ ಸಹಾಯಧನ ಮತ್ತು ಸಾಲಸೌಲಭ್ಯ ನೀಡಲಾಗಿದೆ. ಈ ವರ್ಷದಲ್ಲಿಯೇ ಈವರೆಗೆ 4000 ಯುವ ಉದ್ಯಮಿಗಳಿಗೆ ಮತ್ತು ಸಂಘ ಸಂಸ್ಥೆೆಗಳಿಗೆ ಸಾಲದ ನೆರವು ನೀಡಲಾಗಿದ್ದು, ಇದೇ ಡಿಸೆಂಬರ್ ವೇಳೆಗೆ 5000 ಅರ್ಜಿಗಳಿಗೆ ನೆರವು ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಇದು ಶ್ಲಾಾಘನೀಯ ಕಾರ್ಯ ಎಂದು ಹೇಳಿದರು.
ಇದಲ್ಲದೆ, ರೈತ ಉತ್ಪಾಾದಕ ಸಂಸ್ಥೆೆಗಳಿಗೆ ನೆರವು ನೀಡುವಲ್ಲಿ ಕರ್ನಾಟಕ ಮಾದರಿ. ರೈತ ಉತ್ಪಾಾದಕ ಸಂಸ್ಥೆೆಗಳಿಗೆ 3 ಕೋಟಿ ರೂ.ವರೆಗೂ ಸಬ್ಸಿಿಡಿ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯನ್ನು ಕರ್ನಾಟಕ ತನ್ನ ಪಾಲೂ ನೀಡುವ ಮೂಲಕ ಸಮರ್ಥವಾಗಿ ಬಳಸಿಕೊಳ್ಳುತ್ತಿಿದೆ. ಮುಖ್ಯಮಂತ್ರಿಿಯವರು ಕಳೆದ ಬಜೆಟ್ನಲ್ಲಿ ಇದಕ್ಕಾಾಗಿಯೇ 206 ಕೋಟಿ ರೂ. ಒದಗಿಸಿ ಸಹಕಾರ ನೀಡಿದ್ದಾರೆ. ಮುಂದಿನ ಬಜೆಟ್ನಲ್ಲಿಯೂ ಹೆಚ್ಚಿಿನ ಸಹಕಾರ ಒದಗಿಸಲಿದ್ದಾರೆ ಎಂದು ಹೇಳಿದರು.
ಪಿಎಂಎ್ಎಂಇ ಮಹತ್ವಾಾಕಾಂಕ್ಷಿ ಯೋಜನೆಯಾಗಿದ್ದು, ರೈತ ಉತ್ಪಾಾದಕ ಸಂಸ್ಥೆೆಗಳು ಹಾಗೂ ಸದಸ್ಯರು, ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಸಂಸ್ಕರಣೆ ಮುಖಾಂತರ ತಮ್ಮ ಆದಾಯ ಹೆಚ್ಚಿಿಸಿಕೊಳ್ಳಬೇಕು. ಈ ಯೋಜನೆಯಡಿ ಸಾಮಾನ್ಯ ಮೂಲ ಸೌಕರ್ಯ ಸ್ಥಾಾಪನೆಗೆ ಶೇ.35 ಸಾಲ ಸಹಾಯಧನ ಅಥವಾ ಗರಿಷ್ಠ 3 ಕೋಟಿ ರೂ. ಸಬ್ಸಿಿಡಿ ಸಿಗಲಿದೆ. ಎಲ್ಲಾ ಎಫ್ಪಿಿಓಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೃಷಿ ಸಚಿವರು ತಿಳಿಸಿದರು..
ಪಿಎಂಎ್ಎಂಇ ಯೋಜನೆಯ ಪ್ರಯೋಜನ ಪಡೆದುಕೊಂಡಿರುವವರ ಸಂಖ್ಯೆೆ ಬಹಳ ಕಡಿಮೆ ಇದೆ. ಈ ಯೋಜನೆಯ ಬಗ್ಗೆೆ ಅರಿವು ಮೂಡಿಸುವ ಸಲುವಾಗಿ ಇಂದು ರೈತ ಉತ್ಪಾಾದಕರ ಸಮ್ಮೇಳನವನ್ನು ಕೆಪೆಕ್ ಅಧ್ಯಕ್ಷ ಹರೀಶ್ ಹಾಗೂ ವ್ಯವಸ್ಥಾಾಪಕ ನಿರ್ದೇಶಕ ಶಿವಪ್ರಕಾಶ್ ಆಯೋಜಿಸಿರುವುದು ನಿಜಕ್ಕೂ ಶ್ಲಾಾಘನೀಯ. ಶಿವಪ್ರಕಾಶ್ ಅವರು ಕೆಪೆಕ್ ಎಂಡಿ ಆಗಿ ಬಂದ ನಂತರ ಹಗಲು ರಾತ್ರಿಿ ಎನ್ನದೆ ಕೆಲಸ ಮಾಡುತ್ತಿಿದ್ದಾರೆ. ಅಲ್ಲದೆ, ಅಧಿಕಾರಿಗಳನ್ನು, ಸರ್ಕಾರವನ್ನು ವಿಶ್ವಾಾಸಕ್ಕೆೆ ತೆಗೆದುಕೊಂಡು ಸಾಕಷ್ಟು ಯುವ ಉದ್ಯಮಿಗಳಿಗೆ ಸಾಕಷ್ಟು ನೆರವಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕೆಪೆಕ್ ಅಧ್ಯಕ್ಷ ಬಿ.ಎಚ್. ಹರೀಶ್, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ವೈ. ಸಯೀದ್ ಅಹಮದ್, ಕೆಪೆಕ್ ವ್ಯವಸ್ಥಾಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್, ಜಲಾನಯನ ಅಭಿವೃದ್ಧಿಿ ಇಲಾಖೆ ನಿರ್ದೇಶಕ ಮೊಹಮದ್ ಪರ್ವೇಜ್ ಬಂಥನಾಳ್, ಜಂಟಿ ನಿರ್ದೇಶಕ ಡಾ.ಎಚ್.ಕೆ. ಶಿವಕುಮಾರ್, ಶಿವಕುಮಾರ್ ಸೇರಿ ಹಲವರು ಉಪಸ್ಥಿಿತರಿದ್ದರು.