ಮೈಸೂರು: ಸಾಂಸ್ಕ್ರತಿಕ ಹಾಗೂ ಪಾರಂಪರಿಕ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲರಾಮ, ಇದನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ತಮ್ಮ ಕಲಾ ನೈಪುಣ್ಯತೆಯಿಂದ ಸಿದ್ದಪಡಿಸಿದ್ದಾರೆ.
ಭವ್ಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಶ್ರೀರಾಮ ವಿಗ್ರಹ ಕರ್ನಾಟಕ ಮೂಲದ ಕಲ್ಲಿನಲ್ಲೇ ಕೆತ್ತಲಾಗಿದ್ದು, ರಾಮಲಲ್ಲ ಮೂರ್ತಿ ಮೂರ್ತಿ ಕೂಡ ಕರ್ನಾಟಕದ ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕೆತ್ತಿರುವುದು ವಿಶೇಷವಾಗಿದೆ. ಈ ವಿಷಯ ತಿಳಿದ ಅರುಣ್ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಸತ್ಯನಾರಾಯಣ ಪಾಂಡೆ, ಬೆಂಗಳೂರಿನ ಜಿ.ಎಲ್.ಭಟ್ ಪೈಕಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿ ಆಯ್ಕೆಯಾಗಿದ್ದು, ಐದು ವರ್ಷದ ಮಗುವಿನ ರೂಪದಲ್ಲಿರುವ ಶ್ರೀರಾಮನ ಮೂರ್ತಿ 51 ಇಂಚು ಎತ್ತರದ ರಾಮಲಲ್ಲ ಮೂರ್ತಿಯಾಗಿದ್ದು, ಕೈಯಲ್ಲಿ ಬಿಲ್ಲು ಬಾಣ ಹಿಡಿದಿರುವ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ.
ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬದವರಿಂದ ಮಾಹಿತಿ ಲಭ್ಯವಾಗಿದೆ.