ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.02:
ಬೆಂಗಳೂ ರಿನಲ್ಲಿ ಪ್ಯಾಾಲೇಸ್ ರಸ್ತೆೆಯಲ್ಲಿ ಇರುವ ಭಾರತ್ ಸ್ಕೌೌಟ್ ಆಂಡ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋೋತ್ಸವ ಅಂಗವಾಗಿ ಸುವರ್ಣ ಕರ್ನಾಟಕ ವತಿಯಿಂದ ಸಮಾಜ ಸೇವಕ ಸಂತೋಷ್ ಅಂಗಡಿ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಿ ಸ್ವೀಕರಿಸಿದ ಸಂತೋಷ್ ಅಂಗಡಿ ಮಾತನಾಡಿ, ಪ್ರಶಸ್ತಿಿಗಳಿಂದ ಜವಾಬ್ದಾಾರಿ ಹೆಚ್ಚುತ್ತದೆ. ಪ್ರತಿಸಲ ನನಗೆ ದೊರಕುವ ಪ್ರಶಸ್ತಿಿಯಿಂದ ಖುಷಿಗಿಂತ, ಜವಾಬ್ದಾಾರಿ ಹೆಚ್ಚಿಿದೆ ಎಂದು ಭಾವಿಸುತ್ತೇನೆ. ನನ್ನ ತಂದೆ ಮಲ್ಲಿಕಾರ್ಜುನ್ ಅಂಗಡಿಯವರು ಹಾಕಿ ಕೊಟ್ಟ ಮಾರ್ಗದಲ್ಲೇ ಸದಾ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ನಾನು ಸೇವೆ ಸಲ್ಲಿಸುತ್ತಾಾ ಬಂದಿದ್ದೇನೆ. ನಮ್ಮ ಬದುಕು ಸಮಾಜಕ್ಕೆೆ ಮಾದರಿಯಾಗಬೇಕು. ನಿರ್ಗತಿಕರ ಪರ ಜೊತೆ ನಿಲ್ಲುತ ಸೇವೆಯ ದಾರಿಯಲ್ಲಿ ನಡೆದಾಗ ನಮ್ಮ ಜೀವನ ಯಶಸ್ವಿಿಯಾಗುತ್ತದೆ. ನಾವು ನವೆಂಬರ್ ಕನ್ನಡವಾಗದೇ ಪ್ರತಿ ಕ್ಷಣವೂ ಕನ್ನಡವನ್ನೇ ಮಾತನಾಡಿ ನಮ್ಮ ನಡೆ, ನುಡಿ, ಆದರ್ಶ ಬದುಕಿನಿಂದ ಕನ್ನಡ ಉಳಿಸಲು ಸಾಧ್ಯ. ಕನ್ನಡವೂ ಒಂದು ಸುಂದರವಾದ ಭಾಷೆಯ ನಾಡು ಎಂದರು.
ಈ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ಅಧ್ಯಕ್ಷ ಹುಸೇನ್ ಕೆರೂರ್, ನಾಗರಾಜ್, ಸುಮನ್ ಪೂಜಾರಿ ಹಾಗು ಅನೇಕ ಗಣ್ಯರು ಉಪಸ್ಥಿಿತರಿದ್ದರು.
ಸಂತೋಷ ಅಂಗಡಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ

