ಸುದ್ದಿಮೂಲ ವಾರ್ತೆ ರಾಯಚೂರು, ನ.17:
ಮಠ ಮಾನ್ಯಗಳ ಅಭಿವೃದ್ಧಿಿಗೆ ಭಕ್ತರ ಕೊಡುಗೆ ಮತ್ತು ಸಹಕಾರ ಅಗತ್ಯ ಎಂದು ಸೋಮವಾರ ಪೇಟೆ ಹಿರೇಮಠದ ಪೀಠಾಧಿಪತಿ ಶ್ರೀ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಾಮೀಜಿ ಅಭಿಪ್ರಾಾಯ ಪಟ್ಟರು.
ಭಾನುವಾರ ಶ್ರೀಮಠದಲ್ಲಿ ಜರುಗಿದ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದ ಸಾನ್ನಿಿಧ್ಯ ವಹಿಸಿ ಮಾತನಾಡಿ, ಸೋಮವಾರ ಪೇಟೆ ಶ್ರೀ ಮಠ ಅನೇಕ ಧಾರ್ಮಿಕ, ಸಾಮಾಜಿಕ, ಚಟುವಟಿಕೆ ನಡೆಸುತ್ತಿಿದ್ದುಘಿ, ಇದಕ್ಕೆೆ ಲಿಂಗೈಕ್ಯ ಶ್ರೀಗಳ ಆಶೀರ್ವಾದ ಹಾಗೂ ಮಠದ ಭಕ್ತರ ಸಹಕಾರವೇ ಕಾರಣ ಎಂದರು.
ಮಠ ಮಾನ್ಯಗಳಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಡೆಯಲು ಭಕ್ತರ ಕೊಡುಗೆ ಅಗತ್ಯ. ಈ ದಿಸೆಯಲ್ಲಿ ಸೋಮವಾರ ಪೇಟೆ ಹಳೆಯ ಮಠದ ಶೀಲಾ ಮಂಟಪ ಕಾರ್ಯಕ್ಕೆೆ ಸಕಲರ ಸಹಕಾರ ಅಗತ್ಯ. ಶ್ರೀ ಮಠಕ್ಕೆೆ ಸಚಿವ ಎನ್. ಎಸ್ ಬೋಸರಾಜ್ ಅವರು 10. ಲ.ರೂ ದೇಣಿಗೆ ನೀಡಿದ್ದಾಾರೆ ಎಂದರು.
ಬಿ. ವೆಂಕಟ್ಸಿಂಗ್ ಅವರು ರಾಜ್ಯ ಮಾಹಿತಿ ಆಯುಕ್ತರಾಗಿ ನೇಮಕವಾಗಿರುವುದು ಜಿಲ್ಲೆೆಗೆ ಹೆಮ್ಮೆೆಯ ಸಂಗತಿ. ಕಳೆದ 38 ವರ್ಷ ಸುದ್ದಿಮೂಲ ಪತ್ರಿಿಕೆಯಲ್ಲಿ ಕೆಲಸ ಮಾಡಿದ ಪ್ರಾಾಮಾಣಿಕವಾಗಿ ತನ್ನ ವೃತ್ತಿಿಯನ್ನು ಶ್ರದ್ಧೆೆಯಿಂದ ಮಾಡಿದ ಕಾರಣ ಸರಕಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಿಗಳು ಪಡೆದಿದ್ದು ಇಂದು ಆಯುಕ್ತರಾಗಿರುವುದು ಜಿಲ್ಲೆೆಗೆ ಗೌರವದ ಸಂಗತಿ ಎಂದರು.
ಶ್ರೀ ಮಠದಿಂದ ಏರ್ಪಡಿಸಿದ ಸನ್ಮಾಾನ ಸ್ವೀಕರಿಸಿ ಮಾತನಾಡಿದ ಮಾಹಿತಿ ಆಯುಕ್ತರಾದ ಬಿ.ವೆಂಕಟಸಿಂಗ್, ತಮ್ಮ ಜೀವನದ ಅತ್ಯಂತ ಸ್ಮರಣೀಯ ದಿನ ಇದಾಗಿದೆ. ಶ್ರೀ ಮಠದ ಈ ಗೌರವ ಜವಾಬ್ದಾಾರಿ ಹೆಚ್ಚಿಿಸಿದೆ. ನನಗೆ ದೊರೆತ ಹುದ್ದೆೆಯ ಈ ಅವಕಾಶ ಜನಪರ, ನ್ಯಾಾಯ ಪರವಾಗಿ ನಿರ್ವಹಿಸುವ ಇಂಗಿತ ವ್ಯಕ್ತಪಡಿಸಿದರು.
ಮಾಹಿತಿ ಹಕ್ಕು ಕಾಯ್ದೆೆ ಪ್ರಜಾಪ್ರಭುತ್ವ ವ್ಯವಸ್ಧೆೆಯಲ್ಲಿ ಜನರ ಕೇಳುವ ಹಕ್ಕು ಇಮ್ಮಡಿಗೊಳಿಸುವುದರ ಜೊತೆಗೆ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಅಕ್ರಮ ತಡೆಯಲು ಅನೂಕೂಲವಾಗಲಿದೆ ಎಂದು ಅಭಿಪ್ರಾಾಯ ಪಟ್ಟರು. ತಮ್ಮ ಕಲ್ಬುರ್ಗಿ ಪೀಠದಲ್ಲಿ ಬಾಕಿ ಇರುವ ಏಳು ಸಾವಿರ ಪ್ರಕರಣಗಳು ಶ್ರೀಘ್ರವಾಗಿ ವಿಲೇವಾರಿಗೆ ಆದ್ಯತೆ ನೀಡಿ ಮಾಹಿತಿ ಹಕ್ಕು ಮೂಲ ಉದ್ದೇಶ ಈಡೇರಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಶ್ರೀ ಮಠ ರಾಯಚೂರು ಜಿಲ್ಲೆೆಯಲ್ಲಿ ಧಾರ್ಮಿಕ ಸಂಸ್ಕಾಾರ ನೀಡುವಲ್ಲಿ ಅಪಾರ ಕೊಡುಗೆ ನೀಡಿದೆ. ಇದರಿಂದಾಗಿ ರಾಯಚೂರು ಜಿಲ್ಲೆೆ ಶಾಂತಿ-ಸೌಹಾರ್ದತೆ ಕಾಪಾಡಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆೆಸ್ ಮುಖಂಡ ರವಿ ಬೋಸರಾಜು ಮಾತನಾಡಿ, ಶ್ರೀ ಮಠದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ-ಚಟುವಟಿಕೆಗಳ ಬಗ್ಗೆೆ ಮೆಚ್ಚುಗೆ ವ್ಯಕ್ತಪಡಿಸಿದರು. ಧಾರ್ಮಿಕ ವಿಚಾರಗಳು ಜನರಲ್ಲಿ ಪಸರಿಸಿ, ಜನರಲ್ಲಿ ಶಾಂತಿ ಕಾಪಾಡುವಲ್ಲಿ ಶ್ರೀಮಠದ ಕೊಡುಗೆ ಅಪಾರವಾಗಿದೆ ಎಂದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪಘಿ, ಹಟ್ಟಿಿಚಿನ್ನದಗಣಿ ಮಾಜಿ ಅಧ್ಯಕ್ಷ ಗಿರಿಜಾ ಶಂಕರ ಮಾತನಾಡಿದರು.
ದೀಪೋತ್ಸವಕ್ಕೆೆ ಚಾಲನೆ : ಇದೇ ವೇಳೆ ಶ್ರೀಗಳ ವಿಶೇಷ ಪೂಜೆ ನೆರವೇರಿಸಿ ದೀಪೋತ್ಸವಕ್ಕೆೆ ಚಾಲನೆ ನೀಡಿದರು. ಅಸಂಖ್ಯಾಾತ ಭಕ್ತರು ಭಾಗವಹಿಸಿದ್ದರು.
ವೇದಿಕೆ ಮೇಲೆ ಪಾಲಿಕೆ ಉಪಮೇಯರ್ ಸಾಜೀದ್ ಸಮೀರ್, ಸದಸ್ಯೆೆ ಲಲಿತಾ ಕಡಗೋಲ, ಆರ್ಡಿಎ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ವೆಂಕಟಾಪುರ ಷಣ್ಮುಖಪ್ಪಘಿ, ಪುಂಡ್ಲ ರಾಜೇಂದ್ರರೆಡ್ಡಿಿಘಿ, ಅಕ್ಕನ ಬಳಗ ಮಹಿಳಾ ಮಂಡಲದ ಪದಾಧಿಕಾರಿ ಸುಮಂಗಳಮ್ಮ ಸೇರಿದಂತೆ ಮತ್ತಿಿತರರು ಉಪಸ್ಥಿಿತರಿದ್ದರು.
* ಕಾರ್ತಿಕ ದೀಪೋತ್ಸವ * ಮಾಹಿತಿ ಆಯುಕ್ತ ವೆಂಕಟಸಿಂಗ್ಗೆ ಸನ್ಮಾಾನ ಮಠ ಮಾನ್ಯಗಳ ಅಭಿವೃದ್ದಿಗೆ ಭಕ್ತರ ಕೊಡುಗೆ ಅಪಾರ-ರಾಚೋಟಿ ಶ್ರೀ

