ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.1:
ಪಟ್ಟಣದ ಶ್ರೀವೀರಭದ್ರ ದೇವರ ಕಾರ್ತಿಕ ಮಹೋತ್ಸವ ಹಾಗೂ ಜಾತ್ರಾಾಮಹೋತ್ಸವ ಸೋಮವಾರ ವೈಭವದಿಂದ ಅದ್ಧೂರಿಯಾಗಿ ಜರುಗಿತು. ಪಲ್ಲಕ್ಕಿಿ ಮಹೋತ್ಸವಕ್ಕೆೆ ಬ್ರಹನ್ಮಠದ ಶ್ರೀವೀರಭದ್ರ ಶಿವಾಚಾರ್ಯ ಮಹಾಸ್ವಾಾಮಿಗಳು, ಮಹಾರಥೋತ್ಸವಕ್ಕೆೆ ಪ್ರಸಾದಿಮಠದ ಶ್ರೀಬಸವಲಿಂಗ ಸ್ವಾಾಮಿಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಿಮಿತ್ಯ ಬೆಳಿಗ್ಗೆೆ ಬ್ರಾಾಹ್ಮೀಮುಹೂರ್ತದಲ್ಲಿ ಶ್ರೀವೀರಭದ್ರ ದೇವರಿಗೆ ರುದ್ರಾಾಭಿಷೇಕ, ಪುಷ್ಪಾಾರ್ಚನೆ ಹಾಗೂ ಕಳಸದವರು ಮತ್ತು ವೀರಗಾಸೆ, ನಂದಿಕೋಲು ಕುಣಿತ ದೊಂದಿಗೆ ಶ್ರೀವೀರಭದ್ರದೇವರ ಪಲ್ಲಕ್ಕಿಿ ಉತ್ಸವ ಗಂಗಾಸ್ಥಳಕೆ ತೆರಳಿತು. ಉತ್ಸವ ದೇವಸ್ಥ್ಥಾಾನಕ್ಕೆೆ ಮರಳಿದ ನಂತರ ಅಗ್ನಿಿಸೇವೆಯಲ್ಲಿ ಮಹಿಳೆಯರು, ಸದ್ಭಕ್ತರು ಹನುಮ ಮಾಲಾಧಾರಿಗಳು, ಹಾಗೂ ಅಯ್ಯಪ್ಪಸ್ವಾಾಮಿ ಮಾಲಾಧಾರಿಗಳು ಪಾಲ್ಗೊೊಂಡು ಭಕ್ತಿಿ ಮೆರೆದರು. ನಂತರ ಶ್ರೀವೀರಭದ್ರ ದೇವರ ಗೃಹಪ್ರವೇಶ, ಸದ್ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ರಥೋತ್ಸವವು ಡೊಳ್ಳು, ಶಹನಾಯಿ , ವಾದ್ಯಮೇಳಗಳೊಂದಿಗೆ ಶ್ರೀವೀರಭದ್ರದೇವರ ದೇವಸ್ಥಾಾನದಿಂದ ಶ್ರೀನಾಗಭೂಷಣ ದೇವಸ್ಥಾಾನದವರೆಗೆ ಜರುಗಿತು. ಸದ್ಭಕ್ತರಿಗಾಗಿ ಶ್ರೀಮಾರುತಿ ದೇವಸ್ಥಾಾನ ಆವರಣದಲ್ಲಿ ಪ್ರಸಾದವ್ಯವಸ್ಥೆೆ ಕಲ್ಪಿಿಸಲಾಗಿತ್ತು. ಭಕ್ತರು ಸಿಡಿಮದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದರು
ಉತ್ಸವದಲ್ಲಿ ಸುಮಂಗಲೆಯರು ಕಳಸಕನ್ನಡಿಗಳನ್ನು ಹಿಡಿದು ಪಾಲ್ಗೊೊಂಡಿದ್ದರು.ಅರ್ಚಕರಾದ ಶಿವಕುಮಾರಸ್ವಾಾಮಿ, ಅಮರಯ್ಯಸ್ವಾಾಮಿ, ಶರಣಯ್ಯಸ್ವಾಾಮಿ ಸೇರಿದಂತೆ ಸದ್ಭಕ್ತರು ಪಟ್ಟಣದ ಜನಪ್ರತಿನಿಧಿಗಳು ಮುಖಂಡರು, ಹನುಮ ಮಾಲಾಧಾರಿಗಳು, ಹಾಗೂ ಅಯ್ಯಪ್ಪಸ್ವಾಾಮಿ ಮಾಲಾಧಾರಿಗಳು ಸೇರಿದಂತೆ ಪಟ್ಟಣ ಸೇರಿಸುತ್ತಲಿನ ಗ್ರಾಾಮದ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದರು.
ವೈಭವದಿಂದ ಜರುಗಿದ ಶ್ರೀವೀರಭದ್ರ ದೇವರ ಕಾರ್ತಿಕ ಮಹೋತ್ಸವ ಹಾಗೂ ಮಹಾರಥೋತ್ಸವ

