ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.06:
ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಐತಿಹಾಸಿಕ
ಶ್ರೀ ಕೋಟೆ ಆಂಜನೇಯ ಸ್ವಾಾಮಿಯ ಕಾರ್ತಿಕೋತ್ಸವ ಕಾರ್ತಿಕ ಮಾಸದ ಕೊನೆಯ ಪಕ್ಷದ ಶನಿವಾರ ಅದ್ದೂರಿಯಾಗಿ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವು ಸಹ ಕಾರ್ತಿಕೋತ್ಸವಕ್ಕೆೆ ಸಾವಿರಾರು ಭಕ್ತರ ಸಮೂಹವೆ ಸ್ವಾಾಮಿಯ ದರ್ಶನಕ್ಕೆೆ ಹರಿದು ಬಂದಿತ್ತು ಬಂದ ಭಕ್ತರಿಗೆ ಆಂಜನೇಯ ಸ್ವಾಾಮಿ ಸೇವಾ ಸಮಿತಿ ವತಿಯಿಂದ ಅನ್ನ ಪ್ರಸಾದ ವ್ಯವಸ್ಥೆೆ ಮಾಡಲಾಗಿತ್ತು.
ಮಧ್ಯಾಾಹ್ನ 2:30 ರಿಂದ ಆರಂಭವಾದ ಪ್ರಸಾದ ಸೇವೆ ರಾತ್ರಿಿ 10 ಗಂಟೆಯವರೆಗೂ ನಡೆಯಿತು . ದೇವಾಲಯಕ್ಕೆೆ ಬಂದ ಭಕ್ತರು ಕಾರ್ತಿಕದ ಪ್ರಯುಕ್ತ ಮಣ್ಣಿಿನ ಹಣತೆಯಲ್ಲಿ ಎಣ್ಣೆೆಯನ್ನು ಹಾಕಿ ದೀಪ ಹಚ್ಚುವ ಮೂಲಕ ತಮ್ಮ ಹರಕೆ ತೀರಿಸಿ ಸ್ವಾಾಮಿಯ ಕೃಪೆಗೆ ಪಾತ್ರರಾದರು. ಕಾರ್ತಿಕದ ಪ್ರಯುಕ್ತ ಸ್ವಾಾಮಿಗೆ ವಿಶೇಷ ಅಲಂಕಾರ ಬಾದಾಮಿ, ಗೋಡಂಬಿ, ಲ ,ತಾಂಬೂಲಗಳಿಂದ ಅಲಂಕರಿಸಲಾಗಿತ್ತು ಪ್ರತಿ ವರ್ಷಕ್ಕಿಿಂತಲೂ ಈ ಬಾರಿ ಅಪಾರ ಸಂಖ್ಯೆೆಯಲ್ಲಿ ಭಕ್ತ ಸಮೂಹವು ಹರಿದು ಬಂದಿತ್ತು.
ಪೊಲೀಸ್ ಇಲಾಖೆಯವರಿಂದ ಸೂಕ್ತವಾದ ಬಂದೋಬಸ್ತ್ ಒದಗಿಸಲಾಗಿತ್ತು ಹಾಗೂ ವಾಹನಗಳ ನಿಲುಗಡೆಗೆ ವ್ಯವಸ್ಥೆೆ ಕಲ್ಪಿಿಸಿಕೊಟ್ಟಿಿದ್ದರು. ಬೆಸ್ಕಾಾಂ ಇಲಾಖೆಯವರು ವಿದ್ಯುತ್ ಅಡಚಣೆಯಾಗದಂತೆ ವಿದ್ಯುತ್ತ ವ್ಯವಸ್ಥೆೆ ಮಾಡಿದ್ದರು ಪುರಸಭೆ ಸಿಬ್ಬಂದಿಗಳಿಂದ ಸ್ವಚ್ಛತೆ ವ್ಯವಸ್ಥೆೆ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕ ಮಾರುತಿ ಪೂಜಾರ್, ಪೂಜಾರ್ ಮಂಜುನಾಥ್, ಮಾಳ್ಗಿಿ ಅಂಜಿನಪ್ಪ, ವರದಹಳ್ಳಿಿ ಹನುಮಂತಪ್ಪ, ರಾಜಪ್ಪ, ದೇವಸ್ಥಾಾನದ ಸೇವಾ ಸಮಿತಿಯ ಗೌರವ ಅಧ್ಯಕ್ಷ ಹೆಚ್ ಕೆ ಹಾಲೇಶ, ದ್ಯಾಾಮಜ್ಜಿಿ ದಂಡೆಪ್ಪ, ಗಿಡ್ಡಹಳ್ಳಿಿ ನಾಗರಾಜ್, ಪೂರ್ಜ ರಾಜಪ್ಪ, ಗೋಡೆಕೋಟೆ ಕೇರಿ ಹನುಮಂತಪ್ಪ, ದಾಸಪ್ಪ, ಮ್ಯಾಾಕಿ ಸಣ್ಣಹಾಲಪ್ಪ, ನಿಟ್ಟೂರು ತಿಮ್ಮಣ್ಣ, ಪಟ್ನಾಾಮದ ವೆಂಕಟೇಶ್, ಮ್ಯಾಾಕಿ ತಿರುಪತಿ, ಸಂಡೂರುಗೇರಿ ಅಶೋಕ್, ರಾಯದುರ್ಗ ವಾಗೀಶ, ಎಲ್ಲಜ್ಜಿಿ ರಾಜಪ್ಪ, ಪಿ.ಪರಶುರಾಮ ತರಕಾರಿ ಮಂಡಿ ಮಣಿಕಂಠ ಸೇರಿದಂತೆ ಮುಂತಾದವರು ಹಾಜರಿದ್ದರು.
ಅದ್ದೂರಿಯಾಗಿ ಜರುಗಿದ ಕೋಟೆ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ

