ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.08:
ಬಳ್ಳಾಾರಿ ನಗರದ ರಾಘವೇಂದ್ರ ಕಾಲೋನಿ 2ನೇ ಹಂತದ ಇಂಟೂರಿ ನಗರದಲ್ಲಿ ಇರುವ ಕಾಶೀ ವಿಶ್ವನಾಥ ಮತ್ತು ವಿಶಾಲಾಕ್ಷಿ ದೇವಸ್ಥಾಾನದಲ್ಲಿ ವಿಗ್ರಹಗಳ ಪ್ರತಿಷ್ಠಾಾಪನೆ ನೆರವೇರಿಸಿ 42 ದಿನಗಳು ಪೂರ್ಣಗೊಂಡ ಹಿನ್ನೆೆಲೆಯಲ್ಲಿ ಸೋಮವಾರ ಮಂಡಲ ಪೂಜೆಗಳನ್ನು ಸಮಾರೋಪಗೊಳಿಸಲಾಯಿತು.
ಸತತವಾಗಿ 42 ದಿನಗಳ ಕಾಲ ಮಂಡಲ ಪೂಜಾ ಕಾರ್ಯಕ್ರಮಗಳು, ಗಣಪತಿ ಪೂಜೆ, ನವಗ್ರಹ ಪೂಜೆ ಮತ್ತು ಮೃತ್ಯುಂಜಯ ಹೋಮಗಳು ಪ್ರಧಾನ ಅರ್ಚಕರಾದ ರಾಘವೇಂದ್ರ ಆಚಾರ್, ಸಂತೋಷ್ ಸ್ವಾಾಮಿ ಇವರ ನೇತೃತ್ವದಲ್ಲಿ ನೆರವೇರಿದವು.
ಬಳ್ಳಾಾರಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿಿ ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊೊಂಡಿದ್ದರು.
20ನೇ ವಾರ್ಡ್ ಪಾಲಿಕೆ ಸದಸ್ಯ ವಿವೇಕ್ (ವಿಕ್ಕಿಿ), ಮಾಜಿ ಪಾಲಿಕೆ ಸದಸ್ಯ ಕೆರಕೋಡಪ್ಪ ಸೇರಿ ಭಕ್ತಾಾದಿಗಳು ಉಪಸ್ಥಿಿತರಿದ್ದರು. ವೆಂಕಟಸಾಯಿ ಮುರಳಿ ಕೋಲಾಟ ಸಮಿತಿಯ ಕೋಡೂರು ಪದ್ಮಾಾವತಿ ನೇತೃತ್ವದಲ್ಲಿ 30 ಜನ ಮಹಿಳೆಯರಿಂದ ಕೋಲಾಟ ಪ್ರದರ್ಶನ – ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಕಾಶೀ ವಿಶ್ವನಾಥ, ವಿಶಾಲಾಕ್ಷಿ ವಿಗ್ರಹ ಪ್ರತಿಷ್ಠಾಪನೆ ; ಮಂಡಲ ಪೂಜೆ ಸಂಪನ್ನ

