ಶರಣಪ್ಪ ಎನ್.ನೇರಡಗಿ ಜೇವರ್ಗಿ, ಜ.28:
ತಾಲೂಕಿನ ಕಟ್ಟಿಿಸಂಗಾವಿ ಸರ್ಕಾರಿ ಮಾದರಿ ಪ್ರಾಾಥಮಿಕ ಶಾಲೆಯಲ್ಲಿ ಕನ್ನಡ ಕಲಿಕೆ ಸಂಪೂರ್ಣವಾಗಿ ಹಿಂದುಳಿದಿದೆ. ಅಷ್ಟೇ ಅಲ್ಲದೆ ಕನ್ನಡ ವರ್ಣಮಾಲೆಗಳ ಬಗ್ಗೆೆ ಮಕ್ಕಳಿಗೆ ಜ್ಞಾನವೇ ಇಲ್ಲ.
ಜೇವರ್ಗಿ ತಾಲೂಕಿನ ಕಟ್ಟಿಿ ಸಂಗಾವಿ ಗ್ರಾಾಮದ ಸರ್ಕಾರಿ ಮಾದರಿ ಪ್ರಾಾಥಮಿಕ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರಿಗೆ 244 ಒಟ್ಟು ವಿದ್ಯಾಾರ್ಥಿಗಳಿದ್ದು,130 ಹೆಣ್ಣು ಮಕ್ಕಳು ಹಾಗೂ 114 ಗಂಡು ಮಕ್ಕಳು ಇದ್ದಾರೆ. ಒಂದನೇ ತರಗತಿಯಲ್ಲಿ ಗಂಡು ಮಕ್ಕಳು 06 ಹೆಣ್ಣು ಮಕ್ಕಳು 14, ಎರಡನೇ ತರಗತಿಯಲ್ಲಿ 15 ಗಂಡು ಮಕ್ಕಳು 15 ಹೆಣ್ಣು ಮಕ್ಕಳು, 3ನೇ ತರಗತಿಯಲ್ಲಿ 17 ಗಂಡು ಮಕ್ಕಳು 18 ಹೆಣ್ಣು ಮಕ್ಕಳು, ನಾಲ್ಕನೇ ತರಗತಿಯಲ್ಲಿ 10 ಗಂಡು ಮಕ್ಕಳು 15 ಹೆಣ್ಣು ಮಕ್ಕಳು, 5ನೇ ತರಗತಿಯಲ್ಲಿ 19 ಗಂಡು ಮಕ್ಕಳು 10 ಹೆಣ್ಣು ಮಕ್ಕಳು, 6ನೇ ತರಗತಿಯಲ್ಲಿ 18 ಗಂಡು ಮಕ್ಕಳು 22 ಹೆಣ್ಣು ಮಕ್ಕಳು, ಏಳನೇ ತರಗತಿಯಲ್ಲಿ 17 ಗಂಡು ಮಕ್ಕಳು 18 ಹೆಣ್ಣು ಮಕ್ಕಳು, ಎಂಟನೇ ತರಗತಿಯಲ್ಲಿ 22 ಗಂಡು ಮಕ್ಕಳು 18 ಹೆಣ್ಣು ಮಕ್ಕಳು ಒಟ್ಟು 244 ವಿದ್ಯಾಾರ್ಥಿಗಳ ಸಂಖ್ಯೆೆ ಹೊಂದಿದ ಮಾದರಿ ಪ್ರಾಾಥಮಿಕ ಶಾಲೆ ಕಟ್ಟಿಿಸಂಗಾವಿಯಲ್ಲಿ ಎಂಟು ಜನ ಕಾಯಂ ಶಿಕ್ಷಕರು ಒಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿಿದ್ದಾರೆ.
ಹೇಳಿದ್ದು, ವಿದ್ಯಾಾರ್ಥಿಗಳು ಬರೆದಿದ್ದು : ವಿದ್ಯಾಾರ್ಥಿಗಳಿಗೆ ಕಪ್ಪುು ಹಲಗೆ ಮೇಲೆ ಕೆಲವು ಹೆಸರು, ಪದಗಳನ್ನು ಬರೆಯಲು ಹೇಳಿದಾಗ ಸರಿಯಾಗಿ ಬರೆಯಲು ಪರದಾಡಿದರು. ಸರಸ್ವತಿ ಬರೆಯಿರಿ ಎಂದರೆ ಬರೆದಿದ್ದು ಸ್ವರತಿ ಎಂದು. ಅಂಬೇಡ್ಕರ್ ಬರೆಯಿರಿ ಎಂದರೆ ಬರೆದಿದ್ದು ಅಂಬೇಟಕ್ ರ ಎಂದು. ವಿಜ್ಞಾನವನ್ನು ವಿದಾನ ಎಂದು, ನರೇಂದ್ರ ಮೋದಿ ಅನ್ನು ನರೆದ್ರ ಮೊದಿ ಎಂದು ತಪ್ಪಾಾಗಿ ಬರೆದರು. ಇನ್ನೂ, 5ನೇ ತರಗತಿ ವಿದ್ಯಾಾರ್ಥಿಗಳಿಗೆ ಕನ್ನಡ ವರ್ಣಮಾಲೆಗಳು ಎಷ್ಟು ಎಂದು ಕಪ್ಪುು ಹಲಗೆ ಮೇಲೆ ಬರೆಯಲು ಹೇಳಿದಾಗ ಕನ್ನಡ ಒರಣ್ಣ ಮಲ್ಲೆಗಳು 27 ಅಂತ ತಪ್ಪಾಾಗಿ ಬರೆದನು. ಇನ್ನೊೊಬ್ಬ ವಿದ್ಯಾಾರ್ಥಿ ಕನಡ್ಡ ಒರಣ ಮಲ್ಲೆಗಳು ಎಂದು ವಾಕ್ಯವನ್ನು ತಪ್ಪಾಾಗಿ ಬರೆದನು.
ಕೆಲವೊಂದು ವಿದ್ಯಾಾರ್ಥಿಗಳಿಗೆ ತಮ್ಮ ಹೆಸರುಗಳು ಸರಿಯಾಗಿ ಬರೆಯಲು ಬಂದಿಲ್ಲ.
ಈ ಶಾಲೆಯಲ್ಲಿ ಗುಣಮಟ್ಟದ ಕಲಿಕೆ ಸಿಗದಿರುವುದರಿಂದ ಗ್ರಾಾಮದಲ್ಲಿನ ವಿದ್ಯಾಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುತ್ತಿಿದ್ದಾರೆ. ಪಾಲಕರು ತಮ್ಮಮಕ್ಕಳ್ಳಿಿಗೆ ಈ ಶಾಲೆಗೆ ಕಳಿಸಲು ಮನಸ್ಸು ಮಾಡುತ್ತಿಿಲ್ಲ. ಸೌಲಭ್ಯಗಳಿರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿಿದ್ದಾರೆ. ಖಾಸಗಿ ಶಾಲೆಗಳ ಸುಮಾರು 3 ವಾಹನಗಳು ಈ ಗ್ರಾಾಮದಿಂದ ಜೇವರ್ಗಿ ಪಟ್ಟಣಕ್ಕೆೆ ಹೋಗುತ್ತಿಿವೆ ಎಂದು ಅಲ್ಲಿನ ಗ್ರಾಾಮಸ್ಥರು ಹೇಳುತ್ತಾಾರೆ.
ಕಚೇರಿಯ ಕಡೆತಗಳಲ್ಲಿಯೇ ಬಿಜಿಯಾದ ಶಿಕ್ಷಕರು: ಪ್ರತಿದಿನ ಶಾಲೆಗೆ ಬರುವ ಶಿಕ್ಷಕರು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಬರುವ ಆದೇಶಗಳ ಕಡತಗಳ ವಿಲೇವಾರಿಯಲ್ಲಿ ಸಮಯ ಕಳೆಯುತ್ತಿಿದ್ದಾರೆ. ಶಿಕ್ಷಕರ ಹಾಜರಾತಿ ಮಕ್ಕಳ ಬೋಧನಾ ಕ್ರಿಿಯಾ ಯೋಜನೆ ಹಾಗೂ ದಿನಾಲೂ ಬೋಧನೆ ಮಾಡಿದ ದಾಖಲಾತಿಗಳು ಕಚೇರಿಗೆ ತಲುಪಿಸುವುದು. ಮಕ್ಕಳ ಹಾಜರಾತಿ ತೆಗೆದುಕೊಳ್ಳಲು ಒಂದು ಪೀರಿಯಡ್ ಮುಗಿಯುತ್ತದೆ. ತಾಲೂಕು ಕಾರ್ಯಾಲಯದ ಕಡತಗಳ ವಿಲೇವಾರಿಯಲ್ಲಿ ನಮ್ಮ ಸಮಯ ಕಳೆಯಬೇಕಾಗುತ್ತದೆ ಮಕ್ಕಳಿಗೆ ಬೋಧನೆ ಮಾಡಲು ಸಮಯವಿಲ್ಲ ಜೊತೆಗೆ ಮಕ್ಕಳು ಮನೆಯಲ್ಲಿ ಕೂಡ ಸರಿಯಾಗಿ ಓದುತ್ತಿಿಲ್ಲ ಎನ್ನುವುದು ಶಿಕ್ಷಕರ ಅಳಲುಯಾಗಿದೆ. ಒಟ್ಟಿಿನಲ್ಲಿ ತಮ್ಮ ಸರ್ಕಾರಿ ನೌಕರಿ ಉಳಿಸಿಕೊಳ್ಳಲು ನೌಕರಿ ಮಾಡುತ್ತಿಿದ್ದಾರೆ ವಿನ ಮಕ್ಕಳಿಗೆ ಪಾಠ ಮಾಡಲು ನೌಕರಿ ಮಾಡುತ್ತಿಿಲ್ಲ ಎನ್ನುವುದು ಮೇಲ್ನೋೋಟಕ್ಕೆೆ ಕಂಡು ಬಂದಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ವಿದ್ಯಾಾರ್ಥಿಗಳು ಕೊನೆಯ ಸ್ಥಾಾನದಲ್ಲಿರಲು ಇಲ್ಲಿನ ಶಿಕ್ಷಣ ಸಂಪೂರ್ಣವಾಗಿ ಗುಣಮಟ್ಟದ್ದಾಗಿರುವುದಿಲ್ಲ ಎನ್ನುವುದೇ ಪ್ರಮುಖ ಕಾರಣ.
ಮುಖ್ಯ ಗುರುಗಳ ಉಡೊ ಉತ್ತರ : ಸರ್ ನಾವು ಏನು ಮಾಡೋಣ ಮಕ್ಕಳಿಗೆ ಶಾಲೆಗೆ ಬನ್ನಿಿ ಅಂತ ಕರೆಯಲು ಮನೆಗೆ ಹೋದಾಗ ಅವರ ಪಾಲಕರೇ ಶಾಲೆಗೆ ಕಳಿಸುವುದಿಲ್ಲ ಎಂದು ಹೇಳುತ್ತಾಾರೆ. ಕಲಿಸೋಣ ಎಂದರೆ ಶಿಕ್ಷಣ ಕಾರ್ಯಾಲಯದಿಂದ ನಮಗೆ ಕೆಲಸಗಳು ಜಾಸ್ತಿಿ ನೀಡುತ್ತಿಿದ್ದಾರೆ. ಹೀಗಾಗಿ ಮಕ್ಕಳ ಕಲಿಕೆ ಕಡೆ ಗಮನ ಕೊಡುವುದು ಶಿಕ್ಷಕರಲ್ಲಿ ಕಡಿಮೆಯಾಗಿದೆ ಎಂದು ಉತ್ತರ ನೀಡಿದರು.
ಕಟ್ಟಿ ಸಂಗಾವಿ ಸರ್ಕಾರಿ ಶಾಲೆ ಮಕ್ಕಳು ಕಲಿಕೆಯಲ್ಲಿ ಹಿಂದೆ ಕನ್ನಡದಲ್ಲಿ ವರ್ಣಮಾಲೆಯಲ್ಲಿ ಅಕ್ಷರಗಳು 27 !

