ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಅ. 26 : ಪಟ್ಟಣದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆಯ ವತಿಯಿಂದ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಕಾವೇರಿ ನೀರನ್ನು ಹರಿಯುತ್ತಿರುವುದನ್ನು ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆಗೆ ವೈಜ್ಞಾನಿಕ ಸಂಕಷ್ಟ ಸೂತ್ರ ಅಥವಾ ಮಾನದಂಡಗಳನ್ನು ನ್ಯಾಯಮಂಡಳಿ ರಚಿಸಲಿಲ್ಲ. ವೈಜ್ಞಾನಿಕವಾಗಿ ಸೂತ್ರ ರಚಿಸುವಂತೆ ಆಗ್ರಹಿಸಬೇಕೆಂದು ಹಾಗೂ ಕಾವೇರಿ ಮಹಾದಾಯಿ ಕೃಷ್ಣಾ ಪ್ರತಿಯೊಬ್ಬ ಕನ್ನಡಿಗನ ಹೃದಯ ಬಡಿತವಾಗಬೇಕು ಎಂದು ಕದಂಬ ಸೇನೆಯ ರಾಜ್ಯ ಉಪಾಧ್ಯಕ್ಷ ದೇವನಹಳ್ಳಿ ದೇವರಾಜ್ ತಿಳಿಸಿದರು.
ರಾಜ್ಯ ಸರ್ಕಾರ-ತಮಿಳುನಾಡು, ಕರ್ನಾಟಕ ದವರು ಬೇಡ ಬೇರೆ ರಾಜ್ಯದ ನೀರಾವರಿ ತಜ್ಞರ ಪರಿಶೀಲನಾ ಸಮಿತಿ ರಚಿಸಿ ವಸ್ತುಸ್ಥಿತಿ ವರದಿ ಮಾಡಿ ಸುಪ್ರೀಂ ಕೋರ್ಟಗೆ ಒಂದು ಅರ್ಜಿ ಸಲ್ಲಿಸಬೇಕು. ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಕುರಿತು ಚರ್ಚಿಸಬಹುದು, ಪರಿಹಾರ ಕಂಡುಕೊಳ್ಳಲು ಸಾಧ್ಯ, ಸಮೃದ್ಧ ಮಳೆಯಾದಾಗ ನೀರನ ಸಮಸ್ಯೆ ಇರುವುದಿಲ್ಲ.ಆದರೆ ಕಡಿಮೆ ಮಳೆಯಾದಾಗ ನೀರು ಸಂಗ್ರಹಿಸಿಕೊಂಡು, ಸಂಕಷ್ಟ ಸಮಯದಲ್ಲಿ ಹಂಚಿಕೊಳ್ಳುವ ವೈಜ್ಞಾನಿಕ ಸೂತ್ರ ಅಗತ್ಯ. ಮಳೆಗಾಲ ಮುಕ್ತಾಯವಾಗಿದೆ. ಹೆಚ್ಚಿನ ನೀರನ್ನು ನಿರೀಕ್ಷೆ ಮಾಡಲಾಗದು ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕದಂಬ ಸೈನ್ಯಯ ರಾಜ್ಯಾಧ್ಯಾಕ್ಷ ಬೇಕರಿ ರಮೇಶ್ ಮಾತನಾಡಿ, ಕಾವೇರಿ ದಕ್ಷಿಣ ಭಾರತಕ್ಕೆ ಸೇರಿದೆ ಎನ್ನುತ್ತಾರೆ. ಸಮಸ್ತ ಕನ್ನಡಿಗರು ಕಾವೇರಿಯನ್ನು ಕನ್ನಡಿಗರ ಜೀವನದಿ ಕಾವೇರಿ ತಾಯಿ ಎಂದು ಆರಾಧನೆ ಮಾಡುತ್ತೇವೆ. ತಮಿಳುನಾಡಿನ ವಲಸಿಗರು ಎಷ್ಟೇ ಜನ ಬಂದರೂ ನಾವೆಲ್ಲಾ ಒಂದೇ ಎಂದು ಭಾವಿಸಲಾಗಿದೆ. ಆದರೆ, ತಮಿಳುನಾಡಿನವರು ನಮ್ಮ ಅನ್ನವನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮಂದಿನ ದಿನಗಳಲ್ಲಿ ನದಿ ಪತ್ರದ ಸಾವಿರಾರು ಜನ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಿಹಳ್ಳಿ ನಾಗೇಶ್,ರಾಜ್ಯ ಸಮಿತಿ ಸದಸ್ಯ ಮೈಸೂರು ಮಹದೇವಸ್ವಾಮಿ,ಬೆಂ.ಗ್ರಾ. ಜಿಲ್ಲಾ ಕಾರ್ಯದರ್ಶಿ ಭರತ್ ಕುಮಾರ್,ಕಾರ್ಯದರ್ಶಿ ಪುಟ್ಟಸ್ವಾಮಿ ಸೇರಿದಂತೆ ಕದಂಬ ಸೇನೆಯ ಕಾರ್ಯಕರ್ತರು ಇದ್ದರು.