ಸುದ್ದಿಮೂಲ ವಾರ್ತೆ ಸಿರವಾರ, ಡಿ.10:
ತಾಲೂಕಿನ ಕವಿತಾಳ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಖಾಸಿಂಬೀ ಗಂಡ ಚಾಂದಪಾಷ ಇವರ ರಾಜೀನಾಮೆಯಿಂದ ತೆರವಾದ ಸ್ಥಾಾನಕ್ಕೆೆ ಡಿಸೆಂಬರ್ 22ರಂದು ಅಧ್ಯಕ್ಷರ ಆಯ್ಕೆೆಯ ಚುನಾವಣೆ ನಡೆಯಲಿದೆ.
ಸಿರವಾರ ತಹಶಿಲ್ದಾಾರ ಅಶೋಕ ಪವಾರ್ ಇವರನ್ನು ಚುನಾವಣೆಯ ಅಧಿಕಾರಿಗಳನ್ನಾಾಗಿ ನೇಮಕ ಮಾಡಲಾಗಿದೆ.
ಈ ಪಟ್ಟಣ ಪಂಚಾಯತಯಲ್ಲಿ ಒಟ್ಟು 16ಜನ ಸದಸ್ಯರು ಇದ್ದಾರೆ ಅಧ್ಯಕ್ಷರ ಸ್ಥಾಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಕಾಂಗ್ರೆೆಸ್ ಪಕ್ಷದ ಸದಸ್ಯರು 8ಜನ, ಬಿಜೆಪಿ ಪಕ್ಷದಿಂದ 4, ಜೆಡಿಎಸ್ ಪಕ್ಷದಿಂದ 3ಜನ, ಪಕ್ಷೇತರರು ಒಂದು, ಒಟ್ಟು 16ಜನ ಸದಸ್ಯರು ಹಾಗೂ ಸಂಸದರು, ಶಾಸಕರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.
ಅಧ್ಯಕ್ಷ ಸ್ಥಾಾನಕ್ಕೆೆ ಕಾಂಗ್ರೆೆಸ್ ಪಕ್ಷದ ಸದಸ್ಯರಾದ ರಾಜೇಶ್ವರಿ ಗಂಡ ತಿಪ್ಪಯ್ಯಸ್ವಾಾಮಿ ಇವರ ಹೆಸರು ಕೇಳಿಬರುತ್ತಿಿದೆ.

