ಸುದ್ದಿಮೂಲ ವಾರ್ತೆ ಕವಿತಾಳ, ಡಿ.29:
ಹಟ್ಟಿಿ ಚಿನ್ನದ ಗಣಿಯಲ್ಲಿ ಸ್ಟಾ್ಾ ನರ್ಸ್ ಜ್ಯೋೋತಿ ಅವರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಕೊಲೆ ಎಂದು ಪರಿಗಣಿಸಿ ನಿಜವಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಹುಬ್ಬಳ್ಳಿಿಯಲ್ಲಿ ದಲಿತ ಯುವಕನನ್ನು ಮದುವೆಯಾಗಿದ್ದ ಕಾರಣಕ್ಕೆೆ 7 ತಿಂಗಳ ಗರ್ಭಿಣಿಯನ್ನು ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಾಯಿಸಿ ದಲಿತ ಸಂರಕ್ಷ ಸಮಿತಿ ಹೋಬಳಿ ಘಟಕದ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ, ಹತ್ಯೆೆ, ಮಹಿಳೆಯರ ಮೇಲೆ ಅತ್ಯಾಾಚಾರ. ಜಾತಿ ಆಧಾರಿತ ಅವಮಾನ, ಸಾಮಾಜಿಕ ಬಹಿಷ್ಕಾಾರ ಇತ್ಯಾಾದಿ ಘಟನೆಗಳು ದಿನೇದಿನೆ ಹೆಚ್ಚುತ್ತಿಿವೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 13,154 ಕ್ಕೂ ಅಧಿಕ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ.
ರಸ್ತೆೆಯ ಪಕ್ಕದಲ್ಲಿ ರೋಡ್ ರೋಲರ್ ವಾಹನಕ್ಕೆೆ ನೇಣು ಹಾಕಿಕೊಂಡ ಸ್ಥಿಿತಿಯಲ್ಲಿ ಜ್ಯೋೋತಿಯ ಶವ ಕಂಡುಬಂದಿದೆ ಇದು ಆತ್ಮಹತ್ಯೆೆಯಲ್ಲ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಟುಂಬಸ್ಥರ ಹೇಳಿಕೆ ಆಧರಿಸಿ ಜ್ಞಾನಮೂರ್ತಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು, ಇತ್ತೀಚೆಗೆ ಹುಬ್ಬಳ್ಳಿಿಯಲ್ಲಿ ದಲಿತ ಯುವಕನನ್ನು ಮದುವೆಯಾಗಿದ್ದ ಕಾರಣಕ್ಕೆೆ 7 ತಿಂಗಳ ಗರ್ಭಿಣಿಯನ್ನು ಕೊಲೆಗೈದ ಘಟನೆ ರಾಜ್ಯದಾದ್ಯಂತ ಭಾರೀ ಆಕ್ರೋೋಶಕ್ಕೆೆ ಕಾರಣವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು ಎಂದು ಒತ್ತಾಾಯಿಸಿ ಕಂದಾಯ ಇಲಾಖೆ ಎ್ ಡಿ ಎ ವಿಜಯಲಕ್ಷ್ಮಿಿ ಅವರಿಗೆ ದಲಿತ ಮುಖಂಡರು ಮನವಿ ಸಲ್ಲಿಸಿದರು.
ದಲಿತ ಸಂರಕ್ಷ ಸಮಿತಿ ಸಂಘದ ಜಿಲ್ಲಾ ಅಧ್ಯಕ್ಷ ಬಾಲಸ್ವಾಾಮಿ ಜಿನ್ನಾಾಪುರು, ಹೋಬಳಿ ಘಟಕದ ಅಧ್ಯಕ್ಷ ಹುಚ್ಚಪ್ಪ ಬುಳ್ಳಾಾಪುರ, ಅರಳಪ್ಪ ತುಪ್ಪದೂರು, ಹುಚ್ಚಪ್ಪ ವಡವಟ್ಟಿಿ, ಎಚ್. ಬಸವರಾಜ, ಈರಣ್ಣ ಕೆಳಗೇರಿ, ಮೌನೇಶ ಕೊಡ್ಲಿಿ, ಹನುಮಂತ ಬುಳ್ಳಾಾಪುರ ,ಮೌನೇಶ, ರಮೇಶ, ಯಾಕೂಬ, ಚಂದಪ್ಪ, ನಿಂಗಪ್ಪ ತೋಳ, ಹುಲುಗಪ್ಪ ಯಾಕ್ಲಾಾಸಪುರು, ಸಂತೋಷ ಕಲಶೇಟ್ಟಿಿ, ಅಜಪ್ಪ ಬುಳ್ಳಪುರು, ಮರಿಯಪ್ಪ, ಹನುಮಂತ ಬುಳ್ಳಪುರು, ಕೀರಪ್ಪ ನವಲಕಲ, ನಿಂಗಪ್ಪ, ಬಸವರಾಜ ಕೆಲಗೇರಿ, ದೇವರಾಜ ಮ್ಯಾಾಗಳಮನಿ, ಸುಭಾಸ ಕೆಲಗೇರಿ, ರಸೂಲ ದಿದ್ದಿಗಿ, ರಫಿ ಒಂಟಿಬಂಡಿ ಇನ್ನಿಿತರ ದಲಿತ ಸಂಘದ ಮುಖಂಡರು ಭಾಗವಹಿಸಿದ್ದರು.
ಕವಿತಾಳ : ದಲಿತ ಸಂರಕ್ಷ ಸಮಿತಿ ಪ್ರತಿಭಟನೆ

