ಸುದ್ದಿಮೂಲ ವಾರ್ತೆ ಕವಿತಾಳ, ಜ.13:
ಸಮೀಪದ ಮಸ್ಕಿಿ ತಾಲೂಕಿನ ಪಾಮನಕಲ್ಲೂರು ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬಿತ್ತನೆ ಬೀಜ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತಿದ್ದಾರೆ ಎಂದು ಯತಗಲ್, ಅಮೀನಗಡ, ಕೊಟೇಕಲ್, ಗುಡಿಹಾಳ, ತುಪ್ಪದೂರು, ಬೆಂಚಮರಡಿ, ಹರ್ವಾಪುರ, ಆನಂದಗಲ್, ಪಾಮನಕಲ್ಲೂರು ಗ್ರಾಾಮದ ರೈತರು ಪ್ರತಿಭಟನೆ ನಡೆಸಿದರು.
ಬೆಳಿಗ್ಗೆೆ 7 ಗಂಟೆಯಿಂದ ಕಾದು ಕಾಯುತ್ತಿಿದ್ದೇವೆ ಮಧ್ಯಾಾಹ್ನ 1 ಗಂಟೆ ಸಮೀಪಿಸಿದರೂ ಯಾವೊಬ್ಬ ಅಧಿಕಾರಿ ಬಂದಿಲ್ಲ ಎಂದು ಮಹಿಳೆಯರು ಆಕ್ರೋೋಶ ವ್ಯಕ್ತಪಡಿಸಿದರು.
ಮೊಬೈಲ್ ಗೆ ಕರೆ ಮಾಡಿ ಕೇಳಿದರೆ ನಾನು ಮೀಟಿಂಗ್ ಗೆ ಹೋಗಿದ್ದೇನೆ ಎಂದು ಹೇಳಿ ಕರೆ ಕಟ್ ಮಾಡುತ್ತಾಾರೆ ಸ್ಥಿಿತಿವಂತ ರೈತರಿಗೆ ರಾತ್ರಿಿ 8 ಗಂಟೆ ವರೆಗೆ ಶೇಂಗಾ ಬೀಜ ವಿತರಿಸುತ್ತಾಾರೆ ಸಣ್ಣ ರೈತರಿಗೆ ವಿತರಣೆಯಲ್ಲಿ ಅನ್ಯಾಾಯ ಮಾಡುತ್ತಿಿರುವ ಅಧಿಕಾರಿಗಳು ಬಿತ್ತನೆ ಬೀಜ ಕೊರತೆ ಇದೆ ಪ್ರಾಾತ್ಯಕ್ಷಿಿಕೆಯ (ಡೆಮೋ) ಕೊಡೋದಕ್ಕೆೆ ಮಾತ್ರ ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ಹೇಳುತ್ತಿಿದ್ದಾರೆ ಬಿತ್ತನೆ ಬೀಜ ವಿತರಣೆಯಲ್ಲಿ ಅಕ್ರಮ ನಡೆಯುತ್ತಿಿದ್ದು ಈ ಬಗ್ಗೆೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ ಎಂದು ರೈತರಾದ ಬಸಲಿಂಗಮ್ಮ, ಯಲ್ಲಮ್ಮ, ಬಸ್ಸಮ್ಮ, ಅನುಸೂಯಮ್ಮ, ಶಿವಮ್ಮ, ಈರಪ್ಪ, ಬಸಣ್ಣ, ಅಮರಣ್ಣ, ಇಮಾಮ್ ಹುಸೇನ್ ಸಾಬ್, ರಶೀದ್ ಬಂಕಾದ್, ಮಲ್ಲಿಕಾರ್ಜುನ, ಸೈಯದ್ ಅಜ್ಮಿಿರ್, ಮಲ್ಲಪ್ಪ, ದವಲ್ ಸಾಬ್, ಅಂಬಣ್ಣ ಆಗ್ರಹಿಸಿದರು.
ಕವಿತಾಳ ಆರ್ಎಸ್ಕೆ ; ಶೇಂಗಾ ಬೀಜ ವಿತರಣೆಯಲ್ಲಿ ತಾರತಮ್ಯ, ಪ್ರತಿಭಟನೆ

