ಸುದ್ದಿಮೂಲ ವಾರ್ತೆ ಬೆಂಗಳೂರು, ಜ.15:
12ನೇ ಶತಮಾನದ ಮಹಾನ್ ಶರಣರು, ವಚನಕಾರರು ಹಾಗೂ ಲಿಂಗಾಯತ ಧರ್ಮದ ಪ್ರಮುಖ ಯೋಗಿಗಳ ಕಾಯಕ ಪ್ರಜ್ನೆೆ ಇಂದಿಗೂ ಪ್ರಸ್ತುತ ಎಂದು ಬೆಂಗಳೂರು ನಗರ ಜಿಲ್ಲಾಾಧಿಕಾರಿ ಜಿ.ಜಗದೀಶ ಹೇಳಿದರು.
ಬೆಂಗಳೂರಿನ ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಬಾಗಿತ್ವದಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ಸಿದ್ದರಾಮೇಶ್ವರರ ತತ್ವ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಶ್ರಮ, ಶಿಸ್ತು ಮತ್ತು ಪ್ರಾಾಮಾಣಿಕತೆ ಮಾನವ ಬದುಕಿನ ಮೂಲ ಮೌಲ್ಯಗಳಾಗಿವೆ ಎಂದು ಹೇಳಿದರು. ಅವರ ಆದರ್ಶಗಳು ಯುವ ಪೀಳಿಗೆಗೆ ದಾರಿ ತೋರಿಸುವಂತಿವೆ ಎಂದರು.
ಈ ಸಂದರ್ಭದಲ್ಲಿ ಪರಮ ಪೂಜ್ಯ ಬಸವ ಶರಣ ಸಂಗಮೇಶ್ ಮಾತನಾಡಿ, ಜಾತಿ-ಮತ ಭೇದವಿಲ್ಲದೆ ಸಮಾನತೆ ಹಾಗೂ ಮಾನವೀಯತೆಯನ್ನು ಸಾರಿದ ಸಿದ್ದರಾಮೇಶ್ವರರ ವಚನಗಳು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆಯಾಗಿವೆ ಎಂದು ಹೇಳಿದರು.
ಆನಂದ ಸಿ ತಿರುಮಲ ಮಾತನಾಡಿ, ಕಾಯಕ, ನೈತಿಕತೆ ಮತ್ತು ಸಮಾಜಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಿದ್ದರಾಮೇಶ್ವರರ ತತ್ವಗಳು ಇಂದಿನ ಯುವ ಪೀಳಿಗೆಗೆ ಪ್ರೇೇರಣೆಯಾಗಿವೆ ಎಂದರು.
ವಕೀಲರಾದ ಜಗದೀಶ್ ಮಾತನಾಡಿ, ಕಾಯಕ ಯೋಗಿ ಸಿದ್ದರಾಮೇಶ್ವರರು ಶ್ರಮಜೀವಿಗಳ ಬದುಕಿಗೆ ಗೌರವ ತಂದ ಮಹಾನ್ ಯೋಗಿಯಾಗಿದ್ದು, ಅವರ ವಚನಗಳು ಅಂಧಶ್ರದ್ಧೆೆ ಮತ್ತು ವೈಷಮ್ಯಗಳ ವಿರುದ್ಧ ಹೋರಾಡುವ ಶಕ್ತಿಿಯನ್ನೇ ನೀಡಿವೆ ಎಂದು ಅಭಿಪ್ರಾಾಯಪಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಆರ್ಚಂದ್ರಶೇಖರ, ರಾಜ್ಯ ಯುವ ಬ್ರಿಿಗೇಡ್ ನ ಅಧ್ಯಕ್ಷ ಮುನಿ ಕುಮಾರ, ನಾಗರಾಜ್, ಮುನಿ ನಾರಾಯಣ್, ವೆಂಕಟೇಶ, ರಂಗನಾಥ್ ಎಲ್ ಪಾತ್ರೋೋಟಿ ಸೇರಿದ್ದಂತೆ ವಿವಿಧ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿಿತರಿದ್ದರು.
ಕಾಯಕವೇ ಕೈಲಾಸ ಇಂದಿಗೂ ಪ್ರಸ್ತುತ -ಜಿ. ಜಗದೀಶ

