ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ವಿದ್ಯಾಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಬೋಧನೆಯಲ್ಲಿ ವೈವಿಧ್ಯತೆಗಳಿರಬೇಕು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದ ಕುಲಪತಿ ಪ್ರೊೊಘಿ.ಶಿವಾನಂದ ಕೆಳಗಿನಮನಿ ಹೇಳಿದರು.
ನಗರದ ನವೋದಯ ಶಿಕ್ಷಣ ಮಹಾವಿದ್ಯಾಾಲಯದ ಸಭಾಂಗಣದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಹಾಗೂ ಶಿಕ್ಷಣ ಮಂಡಳಿ ಸಂಯುಕ್ತಾಾಶ್ರಯದಲ್ಲಿ ಬಿ.ಇಡಿ ಪಠ್ಯಕ್ರಮ ಪರಿಷ್ಕರಣೆಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೋಧನೆಯಲ್ಲಿ ಇವತ್ತಿಿನ ವಿಜ್ಞಾನ ,ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾಾರಗಳನ್ನು ಒಳಗೊಂಡು ಕ್ರಿಿಯಾತ್ಮಕವಾಗಿ ಮಕ್ಕಳ ಹೃದಯ ಮುಟ್ಟುವಂತೆ ಬೋಧಿಸಬೇಕು. ಶಿಕ್ಷಕರಲ್ಲಿ ಉತ್ತಮ ಜ್ಞಾನ ಹಾಗೂ ಕೌಶಲ್ಯಗಳು ಇದ್ದರೆ ಉತ್ತಮ ವಿದ್ಯಾಾರ್ಥಿಗಳನ್ನು ಸಿದ್ಧಪಡಿಸಲು ಸಾಧ್ಯ ಎಂದರು.
ಕಾರ್ಯಾಗಾರಗಳಲ್ಲಿ ಪ್ರೌೌಢಶಾಲೆ ಮುಖ್ಯೋೋಪಾಧ್ಯಾಾಯರು ಗಳನ್ನು ಹಾಗೂ ಅನುಭವಿ ಶಿಕ್ಷಕರನ್ನು ಸೇರ್ಪಡೆಸಿಕೊಳ್ಳಬೇಕಿತ್ತು ಎಂದು ಸಲಹೆ ನೀಡಿದರು.
ಪ್ರಶ್ನೆೆಗಳು ವೈವಿಧ್ಯ ಉತ್ತರ ಒಂದೇ ಆಗಬಾರದು ವೈವಿಧ್ಯ ಆಗಿರಬೇಕೆಂದು ಹೇಳಿದರು. ದೇಶವು ವೈವಿಧ್ಯಮಯವಾಗಿದ್ದು ಸಮಾಜದೊಂದಿಗೆ ಹೇಗೆ ಸೌಹಾರ್ದಯುತವಾಗಿ ಬದುಕಬೇಕೆಂ ಬುದನ್ನು ಮಕ್ಕಳಿಗೆ ಕಲಿಸಬೇಕೆಂದರು. ಶ್ರದ್ಧಾಾವಂತ, ನಿಷ್ಠಾಾವಂತ ,ಶಿಕ್ಷಕರನ್ನು ರೂಪಿಸಿ ಎಂದು ಸಲಹೆ ನೀಡಿದರು.
ನವೋದಯ ಶಿಕ್ಷಣ ಸಂಸ್ಥೆೆಯ ಕುಲಸಚಿವ ಡಾ.ಟಿ.ಶ್ರೀನಿವಾಸ್ ಮಾತನಾಡಿ, ಕುಟುಂಬ ಹಾಗೂ ಪ್ರಾಾಥಮಿಕ ಶಾಲಾ ಶಿಕ್ಷಕರಿಂದ ಕಲಿತ ಸಂಸ್ಕಾಾರ, ಸಂಸ್ಕೃತಿಯಿಂದ ಮಾತ್ರ ವ್ಯಕ್ತಿಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಪ್ರತಿಯೊಬ್ಬ ಮಗುವಿನ ಆಂತರ್ಯದಲ್ಲಿ ಯಾವ ಯಾವ ಪ್ರತಿಭೆಗಳಿವೆ ಎನ್ನುವುದನ್ನು ಗುರುತಿಸುವವರು ಶಿಕ್ಷಕರು ಹೀಗಾಗಿ ಶಿಕ್ಷಕರು ಸಾಮಾನ್ಯ ಮನುಷ್ಯರನ್ನು ಅಸಾಮಾನ್ಯ ಮನುಷ್ಯರನ್ನಾಾಗಿ ಮಾಡುವ ವ್ಯಕ್ತಿಿಗಳಾಗಿದ್ದಾರೆ. ಮಾಹಿತಿ ಜ್ಞಾನವಲ್ಲ. ಮಕ್ಕಳಲ್ಲಿ ಉತ್ಸಾಾಹ ಬೆಳೆಸಿ ಪ್ರೇರೆಪಿಸಬೇಕೆಂದರು. ಕೇವಲ ಪರೀಕ್ಷೆಯಲ್ಲಿ ಪಡೆದ ಅಂಕಗಳಿಂದ ಮಾತ್ರ ವ್ಯಕ್ತಿಿತ್ವ ಬೆಳೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನವೋದಯ ಶಿಕ್ಷಣ ಮಹಾವಿದ್ಯಾಾಲಯದ ಪ್ರಾಾಚಾರ್ಯ ಡಾ. ಉಮಾಕಾಂತ್ ಜಿ. ದೇವರಮನಿ ಅಧ್ಯಕ್ಷತೆ ವಹಿಸಿದ್ದರು.
ಬಿಓಎಸ್ ಅಧ್ಯಕ್ಷ ಡಾ. ರತನ್ ಚೌಹಾನ್ 2 ದಿನಗಳ ಕಾರ್ಯಾಗಾರದ ವರದಿ ವಾಚಿಸಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ರಾಯಚೂರಿನ ವಿದ್ಯಾಾ ವಿಷಯಕ ಪರಿಷತ್ತಿಿನ ಸದಸ್ಯರಾದ ಡಾ. ಸಿದ್ದಪ್ಪ ಜೇಗರ್, ಡಾ. ಚನ್ನಬಸಪ್ಪ ಮೇಟಿ, ದೇವೇಂದ್ರ ಜಾಜಿ, ಸಿಂಡಿಕೇಟ್ ಮಾಜಿ ಸದಸ್ಯ ಡಾ. ಇಕ್ಬಾಾಲ್ ಶೇಕ್, ಡಾ. ಅಶ್ವಿಿನಿ ಕುಮಾರ ಪುರುವಂತ, ಬಸವಂತರಾಯ ಪಾಟೀಲ್ ಉಪಸ್ಥಿಿತರಿದ್ದರು.
ಬೋಧನೆಯಲ್ಲಿ ವೈವಿಧ್ಯತೆ ಇರಿಸಿಕೊಳ್ಳಿ- ಪ್ರೊ.ಶಿವಾನಂದ ಕೆಳಗಿನಮನಿ

