ಸುದ್ದಿಮೂಲ ವಾರ್ತೆ
ತಿಪಟೂರು, ಜೂ 28 : ಕೆಂಪೇಗೌಡರು ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ದೂರದೃಷ್ಟಿ ಯಿಂದ ಮಾಡುತ್ತಿದ್ದರು. ರಾಜ್ಯ, ದೇಶ ಬೆಳೆಯಬೇಕಾದರೆ ನಗರಗಳ ಬೆಳವಣಿಗೆ ಮುಖ್ಯ ಎಂಬುದನ್ನು ಅರಿತಿದ್ದ ಅವರು, ಬೆಂಗಳೂರಿಗೆ ಭದ್ರ ಬೂನಾದಿ ಹಾಕಿದರು ಎಂದು ಪ್ರಾಂಶುಪಾಲ ಡಾ. ಹೆಚ್.ಬಿ. ಕುಮಾರಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಅವರು ಅಂದು ನಿರ್ಮಿಸಿರುವ ಅಭಿವೃದ್ಧಿಗೆ ಸವಾಲಾಗಿದೆ ಎಂದರು.
ಕಾಯಕದ ಜೊತೆಗೆ ಅಂತರಂಗದ ವಿಕಾಸಕ್ಕೆಂದು ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರಗಳನ್ನು
ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ನಿರ್ಮಿಸಿಕೊಟ್ಟರು. ಅಂತಹ ವಿಶಾಲ ದೃಷ್ಟಿಯ ಆಧ್ಯಾತ್ಮಿಕ ತತ್ವದ ನೆಲೆಯಲ್ಲಿ ಸ್ಥಾಪಿಸಿದ ನಗರ ಬೆಂಗಳೂರು ಇಂದು ವಿಶ್ವದ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ಇಂತಹ ನಿಸ್ವಾರ್ಥ ಸೇವೆಯಲ್ಲಿ ತಮ್ಮನ್ನು ತಾವು ಮುಡಿಪಾಗಿಸಿಕೊಡ ಕೆಂಪೇಗೌಡರು ಎಲ್ಲರಿಗೂ ಮಾದರಿ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಡಾ. ನಾಗೇಂದ್ರಪ್ಪ, ಡಾ. ಎಂ.ಆರ್. ಚಿಕ್ಕಹೆಗ್ಗಡೆ, ದೇವರಾಜು, ಮಹೇಶ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.