ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.11:
ಕರ್ನಾಟಕ ರಾಜ್ಯ ಸಹಾಯಕ ಪ್ರಾಾಧ್ಯಾಾಪಕರ ಅರ್ಹತಾ ಪರೀಕ್ಷೆ (ಕೆಸೆಟ್)- 2025ರಲ್ಲಿ ಅರ್ಹರಾಗಿರುವ ಕೆಲವರು ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ತಪ್ಪಾಾಗಿ ಉಲ್ಲೇಖ ಮಾಡಿದ್ದು, ಅಂತಹವರ ಮನವಿಗಳ ಬಗ್ಗೆೆ ದಾಖಲೆ ಪರಿಶೀಲನಾ ಪ್ರಕ್ರಿಿಯೆ ಮುಗಿದ ನಂತರ ಲಭ್ಯವಾಗುವ ಅಂಕಿಅಂಶಗಳ ಆಧಾರದ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳು ಕ್ಲೇಮ್ ಮಾಡಿರುವ ಒಳಮೀಸಲಾತಿ (ಎಸ್ ಸಿಎ, ಎಸ್ ಸಿಬಿ, ಎಸ್ ಸಿಸಿ) ಆಧಾರದ ಮೇಲೆಯೇ ದಾಖಲೆಗಳನ್ನು ಪರಿಶೀಲಿಸಿ, ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿಿದೆ. ಕೆಲವರು ಎಸ್ ಸಿ ಎ ಬದಲಿಗೆ ಎಸ್ ಸಿ ಬಿ ಹಾಗೂ ಎಸ್ ಸಿ ಸಿ .. ಹೀಗೆ ತಪ್ಪಾಾಗಿ ಹಾಕಿಕೊಂಡಿರುವುದಾಗಿ ಹೇಳುತ್ತಿಿದ್ದು, ಈ ಕುರಿತು ಪರಿಶೀಲಿಸಲಾಗುವುದು ಎಂದು ಅವರು ಪತ್ರಿಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 22ರಂದು ಕೆಸೆಟ್ ಅಧಿಸೂಚನೆ ಹೊರಡಿಸಿದ ನಂತರ ಆ.25ರಂದು ಸಮಾಜ ಕಲ್ಯಾಾಣ ಇಲಾಖೆಯು ಒಳಮೀಸಲಾತಿ ಜಾರಿ ಸಂಬಂಧ ಆದೇಶ ಹೊರಡಿಸಿತು. ನಂತರ ಸಮಾಜ ಕಲ್ಯಾಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಜತೆಗೂ ಮಾತುಕತೆ ನಡೆಸಿ, ಆರ್ಡಿ ಸಂಖ್ಯೆೆ ಇರುವ ಪ್ರಮಾಣ ಪತ್ರಗಳ ಲಭ್ಯತೆ ಬಗ್ಗೆೆ ಮಾಹಿತಿ ಕಲೆ ಹಾಕಿದೆ. ಆದರೆ, ತಕ್ಷಣಕ್ಕೆೆ ಆರ್ಡಿ ಸಂಖ್ಯೆೆಯ ಪ್ರಮಾಣ ಪತ್ರಗಳು ಲಭ್ಯವಾಗುವುದು ಕಷ್ಟ ಎನ್ನುವ ಮಾಹಿತಿ ಸಿಕ್ಕ ನಂತರ ಹೇಗಿದ್ದರೂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರಗಳು ಇರುತ್ತವೆ, ಪ್ರವೇಶ ಪತ್ರ ಡೌನ್ ಲೋಡ್ ಸಂದರ್ಭದಲ್ಲಿ ಒಳ ಮೀಸಲಾತಿಯ ಪ್ರವರ್ಗಗಳ ಮಾಹಿತಿ ಸಂಗ್ರಹಿಸಲು ನಿರ್ಧರಿಸಿ, ಆ ಪ್ರಕಾರ ಮಾಡಲಾಯಿತು. ಅದೇ ರೀತಿ ಬಹುತೇಕ ಮಂದಿ ತಮ್ಮ ಪ್ರವರ್ಗ ನಮೂದಿಸಿದ್ದಾರೆ. ಕೆಲವರು ತಪ್ಪುು ಹಾಕಿರುವುದಾಗಿ ಹೇಳುತ್ತಿಿದ್ದು, ಈ ಹಂತದಲ್ಲಿ ಪರಿಶೀಲಿಸಿ, ಪ್ರಮಾಣ ಪತ್ರ ನೀಡುವುದು ಕಷ್ಟ. ಹೀಗಾಗಿ ಪರಿಶೀಲನೆ ಬಳಿಕ ಲಭ್ಯವಾಗುವ ಮಾಹಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಕೆಲ ವಿಶೇಷ ಚೇತನ ಅಭ್ಯರ್ಥಿಗಳು ಕೂಡ ತಮಗೆ ಪ್ರಮಾಣ ಪತ್ರ ನೀಡುತ್ತಿಿಲ್ಲ ಎಂದು ದೂರುತ್ತಿಿರುವುದು ಗಮನಕ್ಕೆೆ ಬಂದಿದ್ದು, ತಜ್ಞ ವೈದ್ಯರನ್ನೊೊಳಗೊಂಡ ವೈದ್ಯಕೀಯ ಮಂಡಳಿ ತಪಾಸಣೆ ಮಾಡಿಯೇ ಅರ್ಹತೆಯನ್ನು ತೀರ್ಮಾನಿಸಲಾಗುತ್ತಿಿದೆ. ಜಿಲ್ಲಾ ಮಟ್ಟದಲ್ಲಿ ಕೊಟ್ಟಿಿರುವ ವಿಶೇಷ ಚೇತನ ಕಾರ್ಡ್ ಇದೆ ಎನ್ನುವ ಕಾರಣಕ್ಕೆೆ ಇಲ್ಲಿ ಪ್ರಮಾಣ ಪತ್ರಗಳನ್ನು ನೀಡಲು ಆಗುವುದಿಲ್ಲ. ಹಿಂದೆಲ್ಲ ಕೆಲವರು ನಕಲಿ ವಿಶೇಷಚೇತನ ಪ್ರಮಾಣ ಪತ್ರಗಳನ್ನು ತಂದು ವೈದ್ಯಕೀಯ ಸೀಟುಗಳಿಗೆ ಕ್ಲೇಮ್ ಮಾಡಿದ್ದರು. ಪರಿಶೀಲನೆ ವೇಳೆ ಈ ರೀತಿಯ 21 ಮಂದಿ ನಕಲಿ ಪ್ರಮಾಣ ಪತ್ರ ಹೊಂದಿರುವುದು ಗೊತ್ತಾಾಗಿ, ಕ್ರಮ ತೆಗೆದುಕೊಳ್ಳಲಾಗಿದೆ. ಕೆಸೆಟ್ ನಲ್ಲೂ ಆ ರೀತಿ ಅನರ್ಹರಿಗೆ ಇದರ ಲಾಭ ಆಗಬಾರದು ಎನ್ನುವ ಕಾರಣಕ್ಕೆೆ ಪರಿಶೀಲಿಸಿದಾಗ ಇದುವರೆಗೆ 31 ಅನರ್ಹರಾಗಿದ್ದಾರೆ. ಅಂತಹ ಅನರ್ಹರು ಶೇ 40ಕ್ಕಿಿಂತ ಹೆಚ್ಚಿಿನ ಅಂಗವೈಕಲ್ಯದ ಪ್ರಮಾಣ ಪತ್ರ ಹೇಗೆ ಪಡೆದರು ಎಂಬುದರ ಬಗ್ಗೆೆಯೂ ತನಿಖೆ ನಡೆಸಲು ಆರೋಗ್ಯ ಇಲಾಖೆಯನ್ನು ಕೋರಲಾಗುವುದು ಎಂದು ಅವರು ವಿವರಿಸಿದರು.

